ನ್ಯೂಯಾರ್ಕ್: ಚೀನಾದ ಸಾರ್ವಭೌಮ ಕ್ರೆಡಿಟ್ ರೇಟಿಂಗ್ ಕುರಿತಾದ ತನ್ನ ಅಂದಾಜನ್ನು ರೇಟಿಂಗ್ ಏಜೆನ್ಸಿ ಫಿಚ್ ಸ್ಥಿರದಿಂದ ಋಣಾತ್ಮಕಕ್ಕೆ ಪರಿಷ್ಕರಿಸಿದೆ. ಚೀನಾದ ಸಾರ್ವಜನಿಕ ಹಣಕಾಸು ದೃಷ್ಟಿಕೋನದ ಅಪಾಯಗಳು ಮತ್ತು ಆ ದೇಶವು ರಿಯಲ್ ಎಸ್ಟೇಟ್ ವಲಯದ ನೇತೃತ್ವದ ಬೆಳವಣಿಗೆಯಿಂದ ದೂರ ಸರಿಯುವ ವಿಷಯಗಳನ್ನು ಉಲ್ಲೇಖಿಸಿ ಫಿಚ್ ತನ್ನ ಅಂದಾಜನ್ನು ಪರಿಷ್ಕರಿಸಿದೆ.
ರೇಟಿಂಗ್ ಏಜೆನ್ಸಿಯ ಪ್ರಕಾರ ಆರ್ಥಿಕತೆಯೆ ಬೆಳವಣಿಗೆಯ ಅಂದಾಜು ಪರಿಷ್ಕರಣೆಯು ಚೀನಾದ ಸಾರ್ವಜನಿಕ ಹಣಕಾಸು ದೃಷ್ಟಿಕೋನಕ್ಕೆ ಹೆಚ್ಚುತ್ತಿರುವ ಅಪಾಯಗಳನ್ನು ಪ್ರತಿಬಿಂಬಿಸುತ್ತದೆ. ದೇಶವು "ಆಸ್ತಿ-ಅವಲಂಬಿತ" ಬೆಳವಣಿಗೆಯಿಂದ ಹೆಚ್ಚು ಸುಸ್ಥಿರ ಬೆಳವಣಿಗೆಯ ಮಾದರಿಯಾಗಿ ಬದಲಾಗುವ ನಡುವೆ ಹೆಚ್ಚು ಅನಿಶ್ಚಿತ ಆರ್ಥಿಕ ಭವಿಷ್ಯಗಳೊಂದಿಗೆ ಹೋರಾಡುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ಅದು ಹೇಳಿದೆ.
ಇತ್ತೀಚಿನ ವರ್ಷಗಳಲ್ಲಿ ವ್ಯಾಪಕ ವಿತ್ತೀಯ ಕೊರತೆಗಳು ಮತ್ತು ಹೆಚ್ಚುತ್ತಿರುವ ಸರ್ಕಾರಿ ಸಾಲವು ಹಣಕಾಸಿನ ಸಂಗ್ರಹಗಳನ್ನು ಕಡಿಮೆ ಮಾಡಿದೆ ಎಂದು ಫಿಚ್ ಅಭಿಪ್ರಾಯ ಪಟ್ಟಿದೆ. ಮುಂಬರುವ ವರ್ಷಗಳಲ್ಲಿ ಬೆಳವಣಿಗೆಯನ್ನು ಬೆಂಬಲಿಸುವಲ್ಲಿ ಹಣಕಾಸಿನ ನೀತಿಯು ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದ್ದು, ಇದು ಸಾಲವನ್ನು ಸ್ಥಿರವಾದ ಮೇಲ್ಮುಖ ಪ್ರವೃತ್ತಿಯಲ್ಲಿರಿಸಬಹುದು ಎಂದು ಫಿಚ್ ಪ್ರತಿಪಾದಿಸಿದೆ.