ETV Bharat / business

ಮ್ಯೂಚುವಲ್​ ಫಂಡ್​ನಲ್ಲಿ ಹೆಚ್ಚಿದ ಮಹಿಳಾ ಹೂಡಿಕೆದಾರರ ಆಸಕ್ತಿ; 2.5ರಷ್ಟು ಬೆಳವಣಿಗೆ - WOMEN INVESTORS IN MF

ನಗರ ಪ್ರದೇಶ ಸೇರಿದಂತೆ ಟೈರ್​ 4 ಸಿಟಿಗಳಲ್ಲಿ ಕೂಡ ಮಹಿಳೆಯರು ಮ್ಯೂಚುವಲ್​ ಫಂಡ್​ ಮಾರುಕಟ್ಟೆಯಲ್ಲಿ ಭಾಗಿಯಾಗುತ್ತಿದ್ದು, ಶೇ 140ರಷ್ಟು ಏರಿಕೆ ಕಂಡಿದೆ ಎಂದು ಆನ್​ಲೈನ್​ ಬ್ರೋಕರೇಜ್​ ಗ್ರೋವ್​​ ದತ್ತಾಂಶ ತಿಳಿಸಿದೆ.

Women investors in Indian mutual fund industry grow 2 5 times in 2024
ಸಾಂದರ್ಭಿಕ ಚಿತ್ರ (ಐಎಎನ್​ಎಸ್​)
author img

By ETV Bharat Karnataka Team

Published : Dec 28, 2024, 3:33 PM IST

ನವದೆಹಲಿ: ಹೂಡಿಕೆ ವಿಚಾರದಲ್ಲಿ ಮಹಿಳೆಯರು ಹಿಂದೆ ಎಂಬ ಮಾತು ಇದೀಗ ಹಳತಾಗಿದೆ. ಇದೀಗ ಹೂಡಿಕೆ, ಷೇರುಗಳಲ್ಲಿ ಮಹಿಳಾ ಹೂಡಿಕೆದಾರರು ಸಕ್ರಿಯವಾಗಿ ತೊಡಗಿಕೊಳ್ಳುತ್ತಿದ್ದು, ವರ್ಷದಿಂದ ವರ್ಷಕ್ಕೆ ಅವರ ಬೆಳವಣಿಗೆಯಲ್ಲಿ ಏರಿಕೆ ಕಂಡಿದೆ. ಸಣ್ಣ ನಗರ ಮತ್ತು ಟೌನ್​ಗಳಲ್ಲಿ ಕೂಡ ಮಹಿಳೆಯರು ಷೇರು ಮತ್ತು ಮ್ಯೂಚುವಲ್​ ಫಂಡ್ ಹೂಡಿಕೆಗೆ ಮುಂದಾಗಿದ್ದು, ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದಾಗ 2024ರಲ್ಲಿ ಶೇ 2.5ರಷ್ಟು ಬೆಳವಣಿಗೆ ಕಂಡಿದೆ.

ನಗರ ಪ್ರದೇಶ ಸೇರಿದಂತೆ ಟೈರ್​ 4 ಸಿಟಿಗಳಲ್ಲಿ ಕೂಡ ಮಹಿಳೆಯರು ಮ್ಯೂಚುವಲ್​ ಫಂಡ್​ ಮಾರುಕಟ್ಟೆಯಲ್ಲಿ ಭಾಗಿಯಾಗುತ್ತಿದ್ದು, ಶೇ 140ರಷ್ಟು ಏರಿಕೆ ಕಂಡಿದೆ ಎಂದು ಆನ್​ಲೈನ್​ ಬ್ರೋಕೆರೇಜ್​ ಗ್ರೋವ್​​ ದತ್ತಾಂಶ ತಿಳಿಸಿದೆ.

2024ರಲ್ಲಿ ಎಲ್ಲಾ ವಲಯದಲ್ಲಿ ಅದ್ಭುತ ಬೆಳವಣಿಗೆ ಕಂಡಿದೆ. ಮಹಿಳಾ ಹೂಡಿಕೆದಾರರ ಬೆಳವಣಿಗೆ ದುಪ್ಪಟ್ಟಾಗಿದೆ ಎಂದು ಗ್ರೋವ್​​ ಸಿಇಒ ಮತ್ತು ಸಹ ಸಂಸ್ಥಾಪಕರಾದ ಲಲಿತ್​ ಕೆಶ್ರೆ ತಿಳಿಸಿದ್ದಾರೆ.

ಮೆಟ್ರೋ, ಟೈರ್​ , 2 ಮತ್ತು 3 ನಗರದಲ್ಲಿ ಮ್ಯೂಚುವಲ್​ ಫಂಡ್​ನಲ್ಲಿ ಮಹಿಳಾ ಭಾಗಿದಾರರ ಸಂಖ್ಯೆ ಶೇ 100ರಷ್ಟು ಬೆಳವಣಿಗೆ ಕಂಡಿದೆ. ಇದರಲ್ಲಿ ದೆಹಲಿ, ಮುಂಬೈ, ಕೋಲ್ಕತ್ತಾ (ಮೆಟ್ರೋ), ಪುಣೆ, ಲಕ್ನೋ, ನಾಗ್ಪುರ್​, ಅಹಮದಾಬಾದ್​ ಮತ್ತು ಜೈಪುರ್​​ (ಮೆಟ್ರೋ ಹೊರತಾಗಿ)ಗಳಲ್ಲಿ ಮಹಿಳಾ ಹೂಡಿಕೆದಾರರ ಸಂಖ್ಯೆ ಹೆಚ್ಚಿದೆ.

ಮಹಿಳೆಯರ ಎಸ್​ಐಪಿ ಕೊಡುಗೆ ಕೂಡ ಹೆಚ್ಚಿದ್ದು, ಪುರುಷರಿಗಿಂತ ಶೇ 25ರಷ್ಟು ಹೆಚ್ಚಿದೆ. ಇದೀಗ ಐವರಲ್ಲಿ ನಾಲ್ವರು ಮಹಿಳೆರು ಎಸ್​ಐಪಿ ಹೂಡಿಕೆ ಮಾಡುತ್ತಾರೆ ಎಂದು ದತ್ತಾಂಶ ತೋರಿಸಿದೆ.

ಮಾಸಿಕ ಎಸ್​ಐಪಿ ಕೊಡುಗೆಯಲ್ಲಿ ಅಂದಾಜು ಟಿಕೆಟ್​ ಗಾತ್ರ 2,500 ರೂ. ಆಗಿದೆ. ಮಹಿಳಾ ಎಸ್​ಐಪಿ ಹೂಡಿಕೆದಾರರಲ್ಲಿ ಶೇ 50ರಷ್ಟು ಮಂದಿ 30 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಇನ್ನು ಶೇ 33ರಷ್ಟು 30-40 ವರ್ಷದವರಾದರೆ, 40 ಮತ್ತು ಅದಕ್ಕಿಂತ ಮೇಲ್ಪಟ್ಟವರು ಶೇ 17ರಷ್ಟಿದ್ದಾರೆ.

ಭಾರತದಲ್ಲಿನ ಮ್ಯೂಚುವಲ್​ ಫಂಡ್​ ಅಸೋಸಿಯೇಷನ್​ ದತ್ತಾಂಶ ಪ್ರಕಾರ, 2024ರ ನವೆಂಬರ್​ ಅಂತ್ಯದ ವೇಳೆಗೆ ಮ್ಯೂಚುವಲ್​ ಫಂಡ್​​ ಉದ್ಯಮ ಎಯುಎಂ 68 ಲಕ್ಷ ಕೋಟಿ ರೂಪಾಯಿಯಾಗಿದೆ.

ಎನ್​ಎಸ್​ಇ ದತ್ತಾಂಶದ ಪ್ರಕಾರ, ನವೆಂಬರ್​ನಲ್ಲಿ 42,76,207 ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಗೆ ಸೇರುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಎಸ್​ಬಿಐ ಸಂಶೋಧನಾ ವರದಿ ಪ್ರಕಾರ, ದೇಶದಲ್ಲಿ 2021ರಿಂದ ಪ್ರತಿವರ್ಷ ಕನಿಷ್ಠ 30 ಮಿಲಿಯನ್​ ಹೊಸ ಡಿಮಾಟ್​ ಖಾತೆಯನ್ನು ತೆರೆಯಲಾಗುತ್ತಿದೆ. (ಐಎಎನ್​ಎಸ್​)

ಇದನ್ನೂ ಓದಿ: ಜನವರಿ 1ರಿಂದ ಏನೆಲ್ಲ ಬದಲಾವಣೆ?: ಯಾವೆಲ್ಲ ರೂಲ್ಸ್​ ಚೇಂಜ್​​, ಇದಕ್ಕೆಲ್ಲ ಈಗಲೇ ಸಿದ್ಧರಾಗಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.