ಕರ್ನಾಟಕ

karnataka

ETV Bharat / business

ಪ್ರತಿ ದಾಳಿಯು ನಮ್ಮನ್ನು ಮತ್ತಷ್ಟು ಬಲಗೊಳಿಸುತ್ತದೆ: ಅಮೆರಿಕದ ಆರೋಪಗಳಿಗೆ ಗೌತಮ್ ಅದಾನಿ ತಿರುಗೇಟು - GAUTAM ADANI

ತಮ್ಮ ಗ್ರೂಪ್​ ವಿರುದ್ಧ ಅಮೆರಿಕ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಉದ್ಯಮಿ ಗೌತಮ್​ ಅದಾನಿ ತಿರುಗೇಟು ನೀಡಿದ್ದಾರೆ.

Gautam Adani
ಗೌತಮ್ ಅದಾನಿ (ETV Bharat)

By ETV Bharat Karnataka Team

Published : Dec 1, 2024, 10:18 AM IST

ಜೈಪುರ (ರಾಜಸ್ಥಾನ್): ಅಮೆರಿಕದ ಆರೋಪದ ನಂತರ ತಮ್ಮ ಮೊದಲ ಸಾರ್ವಜನಿಕ ಸಭೆಯಲ್ಲಿ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಶನಿವಾರ ತಿರುಗೇಟು ನೀಡಿದರು. ತಮ್ಮ ಗ್ರೂಪ್‌ನ ಮೇಲಿನ ಪ್ರತಿಯೊಂದು ಆರೋಪವು ತಮ್ಮನ್ನು ಮತ್ತಷ್ಟು "ಬಲಗೊಳಿಸುತ್ತದೆ ಮತ್ತು ನಮ್ಮ ಉದ್ಯಮ ಹೆಚ್ಚು ಚೇತರಿಸಿಕೊಳ್ಳುತ್ತದೆ" ಎಂದು ಹೇಳಿದ್ದಾರೆ.

ಇಲ್ಲಿ ನಡೆದ 51ನೇ ಜೆಮ್ಸ್ ಮತ್ತು ಜ್ಯುವೆಲ್ಲರಿ ಪ್ರಶಸ್ತಿ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, "ಯಾವುದೇ ಭಾರತೀಯ ಅಥವಾ ವಿದೇಶಿ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ನಮ್ಮನ್ನು ಕೆಳಗಿಳಿಸಲಿಲ್ಲ. ನಮ್ಮ ಕ್ರಮಗಳ ದೃಢೀಕರಣವನ್ನು ದೇಶದ ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ" ಎಂದರು.

ಪ್ರತಿ ದಾಳಿಯು ನಮ್ಮನ್ನು ಮತ್ತಷ್ಟು ಬಲಗೊಳಿಸುತ್ತದೆ: ಅಮೆರಿಕದ ಆರೋಪಗಳಿಗೆ ಗೌತಮ್ ಅದಾನಿ ತಿರುಗೇಟು (ETV Bharat)

"ಇನ್ನೊಂದು ಸಂಗತಿ ತೀರಾ ಇತ್ತೀಚಿನ ಎರಡು ವಾರಗಳ ಹಿಂದೆ ನಡೆದಿದ್ದು. ನಾವು ಅಮೆರಿಕದಿಂದ ಅದಾನಿ ಗ್ರೀನ್ ಎನರ್ಜಿಯಲ್ಲಿ ಮಾಡಿದ ಹೂಡಿಕೆ ಬಗ್ಗೆ ಆರೋಪಗಳನ್ನು ಎದುರಿಸಿದ್ದೇವೆ. ಇದು ಮೊದಲ ಬಾರಿಗೆ ಆದದ್ದೇನು ಅಲ್ಲ. ನಾವು ಇಂತಹ ಸವಾಲುಗಳನ್ನು ಹಲವು ಬಾರಿ ಎದುರಿಸಿದ್ದೇವೆ. ಅಂತಹ ಪ್ರತಿ ದಾಳಿಯು ನಮ್ಮನ್ನು ಬಲಪಡಿಸುತ್ತದೆ ಮತ್ತು ಪ್ರತಿ ಅಡಚಣೆಯು ಹೆಚ್ಚು ಚೇತರಿಸಿಕೊಳ್ಳಲು ಅದಾನಿ ಗ್ರೂಪ್‌ಗೆ ಮೆಟ್ಟಿಲು ಆಗುತ್ತದೆ, ” ಎಂದು ಗೌತಮ್​ ಅದಾನಿ ಹೇಳಿದರು.

ದೇಶದ ರಾಜಕೀಯದಲ್ಲೂ ಚರ್ಚೆ, ಬಂಧನಕ್ಕೆ ಒತ್ತಾಯಿಸಿದ್ದ ರಾಹುಲ್​; ಸೌರ ವಿದ್ಯುತ್ ಒಪ್ಪಂದಗಳಿಗೆ ಅನುಕೂಲಕರವಾದ ಷರತ್ತುಗಳಿಗೆ ಬದಲಾಗಿ ಭಾರತೀಯ ಅಧಿಕಾರಿಗಳಿಗೆ USD 250 ಮಿಲಿಯನ್ (ಸುಮಾರು ರೂ. 2,100 ಕೋಟಿ) ಲಂಚವನ್ನು ನೀಡುವ ಯೋಜನೆಯ ಭಾಗವಾಗಿದ್ದಾರೆ ಎಂದು ಬಿಲಿಯನೇರ್ ಗೌತಮ್ ಅದಾನಿ ವಿರುದ್ಧ ಅಮೆರಿಕದ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ ನಂತರ ದೇಶದ ರಾಜಕೀಯದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಇದರ ಬೆನ್ನಲ್ಲೇ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗೌತಮ್ ಅದಾನಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದರು.

"ವಾಸ್ತವವೆಂದರೆ ಸಾಕಷ್ಟು ಸ್ಥಾಪಿತ ವರದಿಗಳ ಹೊರತಾಗಿಯೂ, ಅದಾನಿ ಕಡೆಯಿಂದ ಯಾರೊಬ್ಬರೂ ಎಫ್‌ಸಿಪಿಎ ಉಲ್ಲಂಘನೆ ಅಥವಾ ನ್ಯಾಯಕ್ಕೆ ಅಡ್ಡಿಪಡಿಸುವ ಯಾವುದೇ ಪಿತೂರಿಯ ಆರೋಪವನ್ನು ಹೊರಿಸಿಲ್ಲ. ಆದರೂ ಇಂದಿನ ಜಗತ್ತಿನಲ್ಲಿ ನಕಾರಾತ್ಮಕತೆಯು ವಸ್ತುನಿಷ್ಠ ವರದಿಗಳಿಗಿಂತ ವೇಗವಾಗಿ ಹರಡುತ್ತದೆ. ಮತ್ತು ನಾವು ಕಾನೂನು ಪ್ರಕ್ರಿಯೆಯ ಮೂಲಕ ಕೆಲಸ ಮಾಡುವಾಗ, ವಿಶ್ವ ದರ್ಜೆಯ ನಿಯಂತ್ರಕ ಅನುಸರಣೆಗೆ ನಮ್ಮ ಸಂಪೂರ್ಣ ಬದ್ಧತೆಯನ್ನು ಮರುದೃಢೀಕರಿಸಲು ಬಯಸುತ್ತೇವೆ" ಎಂದು ಅದಾನಿ ತಿಳಿಸಿದರು.

ಇದನ್ನೂ ಓದಿ:ಅದಾನಿ ಸ್ಪಷ್ಟೀಕರಣ, ಲಾಭದತ್ತ ಕಂಪನಿ ಷೇರುಗಳು: ಸೆನ್ಸೆಕ್ಸ್​ 230 ಅಂಕ ಏರಿಕೆ, 24,250 ದಾಟಿದ ನಿಫ್ಟಿ

ABOUT THE AUTHOR

...view details