ಕರ್ನಾಟಕ

karnataka

ETV Bharat / business

ನಿಮ್ಮ ಕ್ರೆಡಿಟ್ ಸ್ಕೋರ್​​ ವರದಿಯಲ್ಲಿ ದೋಷಗಳಿವೆಯೇ? ಸರಿಪಡಿಸುವ ಮಾರ್ಗ ಇಲ್ಲಿದೆ - Cibil Errors - CIBIL ERRORS

ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಕ್ರೆಡಿಟ್ ಸ್ಕೋರ್​​ ಪ್ರಮುಖ ಪಾತ್ರ ವಹಿಸುತ್ತದೆ. ಸಿಬಿಲ್​ನಲ್ಲಿ ಏನಾದರೂ ದೋಷಗಳು ಕಂಡುಬಂದರೆ, ಸಾಲ ಪಡೆಯಲು ಕಷ್ಟಕರ. ಹೀಗಾಗಿ ಸಾಮಾನ್ಯ ದೋಷಗಳು ಕಂಡುಕೊಳ್ಳುವುದು ಮತ್ತು ಅವುಗಳನ್ನು ಹೇಗೆ ಸರಿಪಡಿಸುವುದು?. ಇಲ್ಲಿದೆ ಮಾಹಿತಿ.

rectify cibil errors
ಕ್ರೆಡಿಟ್ ಸ್ಕೋರ್ ದೋಷ

By ETV Bharat Karnataka Team

Published : Apr 2, 2024, 10:00 PM IST

ಸಾಲ ತೆಗೆದುಕೊಳ್ಳುವ ಮೊದಲು ಬ್ಯಾಂಕ್‌ಗಳು ನೋಡುವುದೇ ಕ್ರೆಡಿಟ್ ಸ್ಕೋರ್​​. ಹೀಗಾಗಿ ಯಾವುದೇ ತಪ್ಪಾಗದಂತೆ ಎಚ್ಚರ ವಹಿಸಬೇಕು. ಇಲ್ಲವಾದರೆ ನಮಗೆ ಬೇಕಾದಾಗ ಸಾಲ ಪಡೆಯಲು ಕಷ್ಟವಾಗಬಹುದು. ನಮ್ಮ ಸಾಲದ ಅರ್ಜಿ ತಿರಸ್ಕೃತವಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಸಿಬಿಲ್​ನಲ್ಲಿ ಯಾವುದೇ ದೋಷಗಳು ಕಂಡುಬಂದಲ್ಲಿ, ಅವುಗಳನ್ನು ತಕ್ಷಣವೇ ಕ್ರೆಡಿಟ್ ಮಾಹಿತಿ ಬ್ಯೂರೋ ಇಂಡಿಯಾ ಲಿಮಿಟೆಡ್ (CIBIL) ಗಮನಕ್ಕೆ ತರಬೇಕು.

  • ಸಿಬಿಲ್​ನಲ್ಲಿ ಕೆಲವೊಮ್ಮೆ ನಮ್ಮ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಪ್ಯಾನ್ ವಿವರಗಳು ಇತ್ಯಾದಿಗಳು ತಪ್ಪಾಗಿರುತ್ತವೆ.
  • ಈಗಾಗಲೇ ಅಸ್ತಿತ್ವದಲ್ಲಿರುವ ಸಾಲಗಳ ಬಗ್ಗೆ ಮಾಹಿತಿಯೂ ವರದಿಯಲ್ಲಿ ಕಂಡುಬರುತ್ತದೆ. ಈ ಸಾಲಗಳ ಸಂಖ್ಯೆ ಅಥವಾ ಮೊತ್ತ ಹೆಚ್ಚಾದಾಗ ಎಲ್ಲೋ ತಪ್ಪು ನಡೆದಿದೆ ಎಂದರ್ಥ.
  • ಸಾಲದ ಕಂತುಗಳ ಪಾವತಿಯಲ್ಲಿ ಯಾವುದೇ ವಿಳಂಬ ಸಾಧ್ಯ. ಈ ಸಂದರ್ಭದಲ್ಲಿ ವಿಳಂಬ ಪಾವತಿಯ ದಿನಗಳ ಸಂಖ್ಯೆಯನ್ನು ಸಹ ವರದಿಯಲ್ಲಿ ಉಲ್ಲೇಖಿಸಲಾಗುತ್ತದೆ. ಕೆಲವೊಮ್ಮೆ ಪಾವತಿಯನ್ನು ಸಮಯಕ್ಕೆ ಸರಿಯಾಗಿ ಮಾಡಿದರೂ, ತಡವಾಗಿ ಉಲ್ಲೇಖಿಸಬಹುದು.
  • ಮತ್ತೆ ಕೆಲವೊಮ್ಮೆ ನಮಗೆ ಸಂಬಂಧವೇ ಇಲ್ಲದ ಸಾಲಗಳು ಈ ವರದಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳೂ ಇರುತ್ತದೆ. ಈ ಸಂದರ್ಭದಲ್ಲಿ ಕ್ರೆಡಿಟ್ ವರದಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ ನಮ್ಮ ಸಾಲದ ಅರ್ಹತೆಯನ್ನು ಕಡಿಮೆ ಮಾಡುವ ಅಪಾಯ ಎದುರಾಗುತ್ತದೆ.
  • ಯಾವುದೇ ಸಂದೇಹವಿದ್ದಲ್ಲಿ ಸಂಬಂಧಿತ ದೋಷವನ್ನು ಸರಿಪಡಿಸಲು ತಕ್ಷಣವೇ ಸಿಬಿಲ್​ ಸಂಪರ್ಕಿಸಬೇಕು. ಸಿಬಿಲ್‌ಗೆ ವರದಿ ಮಾಡುವ ಮೊದಲು, ವರದಿಯನ್ನು ಎರಡು ಬಾರಿ ಪರಿಶೀಲಿಸಬೇಕು. ನಿಮ್ಮ ಸಾಲದ ಖಾತೆಯ ವಿವರಗಳನ್ನು ಹೋಲಿಕೆ ಮಾಡಿ, ಇದರಲ್ಲಿ ಏನಾದರೂ ತಪ್ಪುಗಳಿದ್ದಲ್ಲಿ ಬ್ಯಾಂಕ್ಅನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಬ್ಯಾಂಕ್​ನಿಂದ ಮಾಹಿತಿಯನ್ನು ಕಳುಹಿಸಿದ ತಕ್ಷಣ ವರದಿಯಲ್ಲಿ ಸರಿಯಾದ ವಿವರಗಳು ಕಾಣಿಸಿಕೊಳ್ಳುತ್ತವೆ. ಸಿಬಿಲ್ ಅಧಿಕೃತ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಲ್ಲಿ ನಿಮ್ಮ ವಿವರಗಳೊಂದಿಗೆ ಲಾಗಿನ್ ಮಾಡುವ ಮೂಲಕ ದೋಷಗಳನ್ನು ವರದಿ ಮಾಡಬಹುದು.
  • ಒಂದು ವೇಳೆ, ನಿಮಗೆ ಸಿಬಿಲ್​ ವಿವರಗಳು ಅರ್ಥವಾಗದಿದ್ದರೆ, ನೀವು ನಿಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಮತ್ತು ಅದರ ವಿವರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು.
  • ಸಿಬಿಲ್​ ವರದಿಯಲ್ಲಿ ಪ್ರತಿಯೊಬ್ಬ ಖಾತೆದಾರರು ವಿಶಿಷ್ಟ ಸಂಖ್ಯೆಯನ್ನು ಹೊಂದಿರುತ್ತಾರೆ. ದೋಷಗಳನ್ನು ರೆಕಾರ್ಡ್ ಮಾಡುವಾಗ ಇದನ್ನು ನಮೂದಿಸಬೇಕು. ಕ್ರೆಡಿಟ್ ಬ್ಯೂರೋ ನಿಮ್ಮಿಂದ ಪಡೆದ ವಿವರಗಳನ್ನು ಆಯಾ ಬ್ಯಾಂಕ್​ಗಳು ಅಥವಾ ಹಣಕಾಸು ಸಂಸ್ಥೆಗಳಿಗೆ ಕಳುಹಿಸಿ, ಅವುಗಳನ್ನು ಪರಿಶೀಲಿಸುತ್ತದೆ. ಆಗ ಮಾತ್ರ ಬದಲಾವಣೆ ಉಂಟಾಗುತ್ತದೆ. ಈ ದೋಷಗಳನ್ನು ಸರಿಪಡಿಸಲು 30-45 ದಿನಗಳು ತೆಗೆದುಕೊಳ್ಳಲಾಗುತ್ತದೆ.
  • ನೀವು ಸಾಲವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲದಿದ್ದರೂ, ನಿಮ್ಮ ಕ್ರೆಡಿಟ್ ವರದಿಯನ್ನು ವರ್ಷಕ್ಕೆ ಒಮ್ಮೆಯಾದರೂ ಪರಿಶೀಲಿಸುವುದು ಒಳ್ಳೆಯದು. ಇದನ್ನು ಮಾಡಲು ಮರೆಯಬೇಡಿ. ಯಾಕೆಂದರೆ, ಇದರಿಂದ ಯಾವುದೇ ದೋಷಗಳು ಉಂಟಾಗದಂತೆ ನೋಡಿಕೊಳ್ಳಬಹುದು.

ABOUT THE AUTHOR

...view details