ನವದೆಹಲಿ:ಈ ವರ್ಷ ದೇಶದಲ್ಲಿ ಉತ್ತಮ ಮಳೆಯಾದ ಪರಿಣಾಮ 979.9 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬೆಳೆಗಳ ಬಿತ್ತನೆ ಮಾಡಲಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ 966.4 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆಸಲಾಗಿತ್ತು ಎಂಬ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ದತ್ತಾಂಶ ತೋರಿಸಿದೆ.
ಕಳೆದ ವರ್ಷಕ್ಕಿಂತ ಈ ವರ್ಷ 13.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚುವರ ಬಿತ್ತನೆಯಾಗಿದ್ದು, ಇದು ಅಧಿಕ ಉತ್ಪಾದನೆಗೆ ಕಾರಣವಾಗಲಿದೆ. ಇದರಿಂದ ಕೃಷಿಯ ಆದಾಯವೂ ಹೆಚ್ಚಲಿದ್ದು, ಆಹಾರ ಹಣದುಬ್ಬರ ನಿಯಂತ್ರಣಕ್ಕೆ ಸಹಾಯ ಮಾಡಲಿದೆ ಎನ್ನಲಾಗಿದೆ.
ಅಧಿಕೃತ ಅಂಕಿಸಂಖ್ಯೆಗಳು ತೋರಿಸುವಂತೆ, ಈ ವರ್ಷ ಭತ್ತವನ್ನು 331.78 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚಾಗಿದೆ. ಕಳೆದ ವರ್ಷ 318.16 ಲಕ್ಷ ಬಿತ್ತನೆ ನಡೆಸಲಾಗಿತ್ತು. ಈ ವರ್ಷ 117.43 ಲಕ್ಷ ಹೆಕ್ಟೇರ್ನಲ್ಲಿ ಧಾನ್ಯಗಳ ಬಿತ್ತನೆ ಮಾಡಲಾಗಿತ್ತು, ಕಳೆದ ವರ್ಷ 110.80 ಲಕ್ಷ ಹೆಕ್ಟೇರ್ನಲ್ಲಿ ಬೀಜ ಬಿತ್ತಲಾಗಿತ್ತು.
ಅದೇ ರೀತಿ, ಸಿರಿಧಾನ್ಯಗಳಾದ ಜೋಳ, ಬಂಜ್ರಾ, ರಾಗಿ ಬಿತ್ತನೆ ಕೂಡ ಈ ವರ್ಷ ಹೆಚ್ಚಿದ್ದು, 173.13 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ 171.36 ಲಕ್ಷ ಹೆಕ್ಟೇರ್ನಲ್ಲಿ ಬಳಕೆ ಮಾಡಲಾಗಿತ್ತು.
ಎಣ್ಣೆ ಬೀಜಗಳನ್ನು ಕಳೆದ 182.17 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಮಾಡಿದರೆ, ಈ ವರ್ಷ 183. 69 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಮಾಡಲಾಗಿದೆ. ಈ ವರ್ಷ ಬಿತ್ತನೆ ಪ್ರದೇಶಗಳಲ್ಲಿ ಉತ್ತಮ ಮುಂಗಾರು ಮಳೆಯಾಗಿದ್ದು, ಬಿತ್ತನೆ ಕೂಡ ಉತ್ತಮವಾಗಿದ್ದು, ಅಧಿಕ ಪ್ರದೇಶದಲ್ಲಿ ಬಿತ್ತನೆ ಹೆಚ್ಚಳ ಕಂಡು ಬಂದಿದ್ದು, ದೇಶದ ಶೇ. 50ರಷ್ಟು ಭೂಮಿಯಲ್ಲಿ ಕೃಷಿ ಉತ್ತಮವಾಗಿದೆ.
ಈ ಬಾರಿ ಬಜೆಟ್ನಲ್ಲಿ ಕೂಡ ಉತ್ಪಾದನೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು 1.52 ಲಕ್ಷ ಕೋಟಿ ನೀಡಲಾಗಿದೆ. ಈ ಕ್ರಮದ ಮೂಲಕ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಒಳಗೊಂಡಂತೆ ಎಣ್ಣೆ ಬೀಜಗಳಿಗೆ ಆತ್ಮನಿರ್ಭರಾತ್ ಮತ್ತು ತರಕಾರಿ ಉತ್ಪಾದನೆಗೆ ದೊಡ್ಡ ಗಾತ್ರದ ಕ್ಲಸರ್ ಸೇರಿದಂತೆ ಕೃಷಿ ವಲಯದಲ್ಲಿನ ಉತ್ಪಾದನೆ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ.
ಸಾಸಿವೆ, ಕಡಲೆಕಾಯಿ, ಎಳ್ಳು, ಸೋಯಾಬೀನ್ ಮತ್ತು ಸೂರ್ಯಕಾಂತಿ ಮುಂತಾದ ಎಣ್ಣೆ ಬೀಜಗಳ ಉತ್ಪಾದನೆಗೆ ಆತ್ಮನಿರ್ಭರಾತ್ ಸಾಧಿಸುವ ಗುರಿ ಹೊಂದಿದ್ದು, ಈ ಮೂಲಕ ಅವುಗಳ ಉತ್ಪಾದನೆ, ಸಂಗ್ರಹಣೆ ಮತ್ತು ಮಾರುಕಟ್ಟೆ ಬಲಕ್ಕೆ ಮುಂದಾಗಲಾಗಿದೆ.
ತರಕಾರಿಗಳ ಉತ್ಪಾದನೆ ಪ್ರಮುಖ ಬಳಕೆ ಕೇಂದ್ರದಲ್ಲಿ ಬೃಹತ್ ಗಾತ್ರದ ಕ್ಲಸರ್ ಅಭಿವೃದ್ಧಿ ಮಾಡಲಾಗಿದೆ. ತರಕಾರಿಗಳ ಸಂಗ್ರಹ, ಶೇಖರಣೆ ಮತ್ತು ಉತ್ಪನ್ನಗಳ ವಹಿವಾಟಿಗೆ ಪೂರೈಕೆ ಸರಪಳಿಗೆ ರೈತ ಉತ್ಪಾದನಾ ಸಂಘಟನೆ, ಸಹಕಾರ ಮತ್ತು ಸ್ಟಾರ್ಟ್ಅಪ್ಗಳ ಉತ್ತೇಜನೆ ನೀಡಲಾಗಿದೆ. (ಐಎಎನ್ಎಸ್)
ಇದನ್ನೂ ಓದಿ:ವಯನಾಡ್ ಭೂಕುಸಿತ ಸಂತ್ರಸ್ತರಿಗೆ ಸಹಾಯಹಸ್ತ; ಹೃದಯ ಗೆದ್ದ ಆಟೋ ಚಾಲಕಿಯ ನಿರ್ಧಾರ