ಕರ್ನಾಟಕ

karnataka

ETV Bharat / business

ಅಮೆರಿಕದಲ್ಲಿ ಡೊನಾಲ್ಡ್​ ಟ್ರಂಪ್​ ಗೆಲುವು ಭಾರತೀಯ ಆರ್ಥಿಕತೆಗೆ ಬೂಸ್ಟ್​: ತಜ್ಞರ ಅಭಿಮತ - TRUMP WIN TO BOOST INDIAN ECONOMY

ಟ್ರಂಪ್ 2.0 ಅಡಿಯಲ್ಲಿ ಭಾರತ - ಅಮೆರಿಕ ಸಂಬಂಧಗಳನ್ನು ಬಲಪಡಿಸುವುದು ಜಾಗತಿಕ ಆರ್ಥಿಕ ದೃಷ್ಟಿಯಲ್ಲಿ ಭಾರತವನ್ನು ಮತ್ತಷ್ಟು ಸಂಯೋಜಿಸಲು ಸಹಾಯ ಮಾಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಬಗ್ಗೆ ಸೌರಭ್ ಶುಕ್ಲಾ ವರದಿ ಇಲ್ಲಿದೆ.

Trump  Win to Boost Indian Economy: Experts
ಅಮೆರಿಕದಲ್ಲಿ ಡೊನಾಲ್ಡ್​ ಟ್ರಂಪ್​ ಗೆಲುವು ಭಾರತೀಯ ಆರ್ಥಿಕತೆಗೆ ಬೂಸ್ಟ್​: ತಜ್ಞರ ಅಭಿಮತ (File Photo)

By ETV Bharat Karnataka Team

Published : Nov 6, 2024, 10:53 PM IST

ನವದೆಹಲಿ:ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಟ್ರಂಪ್​ ಶ್ವೇತಭವನಕ್ಕೆ ಮರಳಿರುವುದು ಭಾರತದ ಮೇಲೆ ದೂರಗಾಮಿ ಪರಿಣಾಮ ಬೀರುವ ನಿರೀಕ್ಷೆಯಿದೆ. ಚುನಾವಣಾ ಫಲಿತಾಂಶವು ಭಾರತದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.

ಭಾರತ ಮತ್ತು ಅಮೆರಿಕ ನಡುವಣ ಸಂಬಂಧಗಳ ಬಲವರ್ಧನೆಯು ಹೆಚ್ಚಿನ ವ್ಯಾಪಾರ, ಹೂಡಿಕೆ ಮತ್ತು ಉದ್ಯೋಗಾವಕಾಶಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ಅಂತಿಮವಾಗಿ ಭಾರತದಲ್ಲಿ ಆರ್ಥಿಕ ಬೆಳವಣಿಗೆಯನ್ನು ಟ್ರಂಪ್​ ಅವರ ಈ ಗೆಲುವು ಉತ್ತೇಜಿಸುತ್ತದೆ ಎಂದು ಬಹುತೇಕ ಆರ್ಥಿಕ ವಿಶ್ಲೇಷಕರ ವಾದವಾಗಿದೆ. ಎರಡೂ ದೇಶಗಳು ತಮ್ಮ ಅಸ್ತಿತ್ವದಲ್ಲಿರುವ ಸಂಬಂಧವನ್ನು ಕಾಪಾಡಿಕೊಂಡರೆ, ಜಾಗತಿಕ ಆರ್ಥಿಕತೆಯನ್ನು ಮತ್ತಷ್ಟು ಸಂಯೋಜಿಸಲು ಭಾರತಕ್ಕೆ ಒಂದು ಅವಕಾಶವಾಗಿ ಕಂಡುಬರುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

NITI ಆಯೋಗದ ಮಾಜಿ ಉಪಾಧ್ಯಕ್ಷ ರಾಜೀವ್ ಕುಮಾರ್ ಈ ಬಗ್ಗೆ ಮಾತನಾಡಿದ್ದು, ಅಮೆರಿಕದ ಚುನಾವಣಾ ಫಲಿತಾಂಶಗಳು ಭಾರತಕ್ಕೆ ಹೊಸ ಹೂಡಿಕೆಗಳನ್ನು ಆಕರ್ಷಿಸುವುದಲ್ಲದೇ, ಅಮೆರಿಕದಲ್ಲಿ ವಾಸಿಸುವ ಭಾರತೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇಂದು ಸೆನ್ಸೆಕ್ಸ್ 901.50 ಪಾಯಿಂಟ್‌ಗಳಷ್ಟು ಏರಿಕೆ ಕಂಡರೆ, ನಿಫ್ಟಿ 273.05 ಅಂಕಗಳನ್ನು ಹೆಚ್ಚಳ ದಾಖಲಿಸಿದೆ. ಇದು ದೀರ್ಘಾವಧಿಯಲ್ಲಿ ಭಾರತೀಯ ಮಾರುಕಟ್ಟೆಗಳು ಮತ್ತು ರಫ್ತುಗಳೆರಡೂ ಬಲಗೊಳ್ಳುವ ಸೂಚನೆ ನೀಡುತ್ತಿದ್ದು, ಉಭಯ ದೇಶಗಳ ಸಂಬಂಧದಿಂದ ಪ್ರಯೋಜನ ಪಡೆಯುತ್ತವೆ ಎಂದು ಆರ್ಥಿಕ ತಜ್ಞ ದೇವೇಂದ್ರ ಕುಮಾರ್ ಮಿಶ್ರಾ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಗೆಲುವು ಭಾರತದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು ಎಂದು ರಾಜೀವ್ ಕುಮಾರ್ ಹೈಲೈಟ್ ಮಾಡಿದ್ದಾರೆ. ವ್ಯಾಪಾರ ನೀತಿಗಳಿಗೆ ಟ್ರಂಪ್ ಅವರ ನೀತಿ ಸ್ಪಷ್ಟವಾಗಿದೆ ಎಂದು ಅವರು ಗಮನ ಸೆಳೆದರು. ಟ್ರಂಪ್ ಚೀನಾದಂತಹ ದೇಶಗಳ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸಿದ್ದಾರೆ, ಇದು ಭಾರತಕ್ಕೆ ಅಮೆರಿಕದ ಜೊತೆ ತನ್ನ ವ್ಯಾಪಾರ ಹೆಚ್ಚಿಸಲು ಅವಕಾಶಗಳನ್ನು ಸೃಷ್ಟಿಸುತ್ತದೆ. ಟ್ರಂಪ್ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವತ್ತ ಗಮನಹರಿಸುವುದರೊಂದಿಗೆ, ಕಾನೂನುಬದ್ಧವಾಗಿ ಅಮೆರಿಕದಲ್ಲಿರುವ ಭಾರತೀಯ ವೃತ್ತಿಪರರು ತಮ್ಮ ಗಳಿಕೆಯಲ್ಲಿ ಹೆಚ್ಚಳವನ್ನು ಕಾಣಬಹುದು.

ದೇವೇಂದ್ರ ಕುಮಾರ್ ಮಿಶ್ರಾ ಅವರು ಷೇರು ಮಾರುಕಟ್ಟೆಯಲ್ಲೂ ಸಕಾರಾತ್ಮಕ ಪರಿಣಾಮ ಬೀರಬಹುದು ಎಂದು ಅಂದಾಜಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವಿನ ಬಲವಾದ ರಾಜಕೀಯ ಸಂಬಂಧವು ಉಭಯ ದೇಶಗಳ ನಡುವೆ ಗಟ್ಟಿಯಾದ ವ್ಯಾಪಾರ ಬಾಂಧವ್ಯ ಬೆಳೆಸಲು ಸಹಾಯ ಮಾಡಿದೆ ಎಂದು ಅವರು ವಿವರಿಸಿದರು. ಟ್ರಂಪ್‌ ಅವರ "ಅಮೆರಿಕ ಫಸ್ಟ್" ನೀತಿಯು ಅಮೆರಿಕದ ಹಿತಾಸಕ್ತಿಗಳಿಗೆ ಆದ್ಯತೆ ನೀಡುವುದರ ಮೇಲೆ ಕೇಂದ್ರೀಕೃತವಾಗಿದೆ. ಮತ್ತೊಂದು ಕಡೆ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ಉತ್ತೇಜಿಸುವ ನಿರೀಕ್ಷೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ:ಅಮೆರಿಕದ 'ಸೆಕೆಂಡ್​ ಲೇಡಿ' ಗೌರವಕ್ಕೆ ಪಾತ್ರರಾದ ತೆಲುಗು ಮಹಿಳೆ: ಯಾರೀ ಉಷಾ ಚಿಲುಕುರಿ?

ABOUT THE AUTHOR

...view details