ಹೈದರಾಬಾದ್:ಡಿಜಿಟಲ್ ಜಗತ್ತಿನಲ್ಲಿ ಜೀವಿಸುತ್ತಿರುವ ಇಂದಿನ ಕಾಲದಲ್ಲಿ ಚಿಪ್ ಅತ್ಯಗತ್ಯ ಸಾಮಗ್ರಿಯಾಗಿದೆ. ಕಾರಣ, ನಾವು ಬಳಕೆ ಮಾಡುವ ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಮನೆಯಲ್ಲಿ ವೀಕ್ಷಿಸುವ ಟಿವಿ, ಅದನ್ನು ನಿಯಂತ್ರಿಸುವ ರಿಮೋಟ್, ಕಚೇರಿಗಳಲ್ಲಿ ಬಳಕೆ ಮಾಡುವ ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್, ಪ್ರಯಾಣಿಸುವ ಕಾರು, ಸಂಚರಿಸುವ ವಿಮಾನ, ನಭಕ್ಕೆ ಜಿಗಿಯುವ ರಾಕೆಟ್, ಹವಾಮಾನ ಮುನ್ಸೂಚನೆ ನೀಡುವ ಸ್ಯಾಟಲೈಟ್ ಎಲ್ಲದಕ್ಕೂ ಚಿಪ್ಗಳು ಅಗತ್ಯವಾಗಿದೆ.
ಇಂತಹ ಮೈಕ್ರೋ ಚಿಕ್ಗಳನ್ನು ಆಮದು ಮಾಡಿಕೊಳ್ಳಲು ದೇಶವು ಪ್ರತಿ ವರ್ಷ ಲಕ್ಷಾಂತರ ಕೋಟಿ ರೂ ವೆಚ್ಚ ಮಾಡುತ್ತಿವೆ. ಈ ಸಮಸ್ಯೆಗೆ ಇದೀಗ ಹೈದರಾಬಾದ್ನ ಉಸ್ಮಾನಿಯಾ ಯುನಿವರ್ಸಿಟಿ ಪರಿಹಾರ ಕಂಡು ಹಿಡಿದಿದೆ. ಅಲ್ಲದೇ ಚಿಪ್ಗಳ ಆಮದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಶೀಘ್ರದಲ್ಲೇ ಸ್ವಾಫ್ಟ್ವೇರ್ ನಗರವಾಗಿರುವ ಮುತ್ತಿನ ನಗರಿ ಚಿಪ್ ಸಿಟಿಯಾಗಲಿದೆ.
ನೆರವು ನೀಡಲು ಮುಂದೆ ಬಂದ ಕೇಂದ್ರ ಸರ್ಕಾರ:ಪ್ರೊ ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಯುನಿವರ್ಸಿಟಿಯ ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳು ಲಭ್ಯವಿರುವ ಸಂಪನ್ಮೂಲಗಳ ಜೊತೆಗೆ ಫ್ರಿಕ್ವೇನ್ಸಿ ಸಿಂಥಸೈಜರ್ ಸೃಷ್ಟಿಸಲು ಮುಂದಾಗಿದ್ದಾರೆ. ಎರಡು ಮಿಲಿಮೀಟರ್ ಗಾತ್ರದಲ್ಲಿ ಉತ್ಪಾದನೆ ಮಾಡುವ ಕುರಿತು ವರದಿ ತಯಾರಿಸಿದ್ದು, ಇದು ಗಿಗಾಹರ್ಟ್ಜ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು 5 ಕೋಟಿ ನೆರವು ನೀಡಲು ಒಪ್ಪಿದೆ.
ಉಸ್ಮಾನಿಯಾ ಉಂಜಿನಿಯರಿಂಗ್ ಕಾಲೇಜ್ ಜೊತೆಗೆ ಎಲೆಕ್ಟ್ರಾನಿಕ್ ಉತ್ಪನ್ನದ ಮೂರು ಕಂಪನಿಗಳು ಕೂಡ ಈ ಯೋಜನೆ ಪಾಲುದಾರಿಕೆ ಹೊಂದಿದೆ. ಇದಕ್ಕಾಗಿ ಕೇಂದ್ರ ಕೂಡ ಸರಿಹೊಂದುವ ಸಾಫ್ಟ್ವೇರ್ ಕೂಡಾ ನೀಡಿದೆ. ಬೆಂಗಳೂರು ಮೂಲದ ಸೀ-ಡಾಕ್ ಚಿಪ್ನ ಫ್ರಿಕ್ವೇನ್ಸಿ ಸಂಬಂಧಿಸಿದಂತೆ ಸಂಶೋಧನಾ ತಂಡಕ್ಕೆ ತರಬೇತಿ ನೀಡಲಿದೆ. 2023ರಿಂದ ಉಸ್ಮಾನಿಯ ಯುನಿವರ್ಸಿಟಿಯಿಂದ ಸಂಶೋಧನೆ ಆರಂಭಿಸಿದ್ದು, ಈ ವರ್ಷ ಆಗಸ್ಟ್ನಲ್ಲಿ ಶೇ 90ರಷ್ಟು ಕಾರ್ಯ ಮುಗಿಸಿದೆ. ಮುಂದಿನ ಎರಡು ತಿಂಗಳೊಳಗೆ ಚಿಪ್ ಉತ್ಪಾದನೆಯಾಗುವ ಸಾಧ್ಯತೆ ಇದೆ.