Cash Transaction Income Tax Rules:ಆದಾಯ ತೆರಿಗೆ ಇಲಾಖೆಯು ತೆರಿಗೆ ಪಾವತಿದಾರರ ಮೇಲೆ ನಿರಂತರವಾಗಿ ನಿಗಾ ಇಟ್ಟಿರುತ್ತದೆ. ತನ್ನ ಆದಾಯಕ್ಕೆ ಅನುಗುಣವಾಗಿ ತೆರಿಗೆಯನ್ನು ಸರಿಯಾಗಿ ಪಾವತಿಸದ ಯಾವುದೇ ತೆರಿಗೆ ವಂಚಕರ ವಿರುದ್ಧ ಇದು ಕ್ರಮ ತೆಗೆದುಕೊಳ್ಳುತ್ತದೆ. ಬ್ಯಾಂಕ್ ಖಾತೆಗಳನ್ನೂ ಪರಿಶೀಲಿಸುತ್ತದೆ. ವಿಶೇಷವಾಗಿ ನಗದು ಠೇವಣಿ ಮತ್ತು ಹಿಂಪಡೆಯುವಿಕೆಗಳ ಮೇಲೆ ಕೇಂದ್ರೀಕರಿಸುತ್ತದೆ. ಇದು ಮನಿ ಲಾಂಡರಿಂಗ್, ತೆರಿಗೆ ವಂಚನೆ ಮತ್ತು ಇತರ ಕಾನೂನುಬಾಹಿರ ಆರ್ಥಿಕ ಚಟುವಟಿಕೆಗಳನ್ನು ತಡೆಯುವ ಗುರಿಯನ್ನು ಹೊಂದಿದೆ. ಹಾಗೂ ಅಕ್ರಮಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತದೆ. ಐಟಿ ಇಲಾಖೆಯು ಬ್ಯಾಂಕ್ ಖಾತೆಗಳು, ನಗದು ಹಿಂಪಡೆಯುವಿಕೆ ಮತ್ತು ಠೇವಣಿಗಳ ಮೇಲೆ ಕೆಲವು ನಿಯಮಗಳನ್ನು ವಿಧಿಸಿದೆ. ಅವುಗಳೆಂದರೆ?.
ಇದನ್ನು ಓದಿ:ಪ್ಯಾನ್ (PAN) ಕಾರ್ಡ್‌ನಿಂದ ಪ್ರಯೋಜನಗಳೇನು? - PAN Card Benefits
ಠೇವಣಿಗಳ ಮೇಲೆ ಶೇ 60 ಪ್ರತಿಶತ ತೆರಿಗೆ: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 68 ರ ಪ್ರಕಾರ, ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಠೇವಣಿ ಮಾಡುವ ಜನರು ತಮ್ಮ ಆದಾಯದ ಮೂಲವನ್ನು ಬಹಿರಂಗಪಡಿಸಲು ಸಿದ್ಧರಾಗಿರಬೇಕು. ಅವರು ಹಾಗೆ ಮಾಡಲು ವಿಫಲವಾದರೆ, ಶೇ 25ರಷ್ಟು ಹೆಚ್ಚುವರಿ ಶುಲ್ಕ, ಶೇ 4ರಷ್ಟು ಸೆಸ್ ಸೇರಿದಂತೆ ಶೇ 60ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. ಆದಾಯದ ಸರಿಯಾದ ಮೂಲವನ್ನು ಐಟಿ ಇಲಾಖೆಗೆ ಬಹಿರಂಗಪಡಿಸದಿದ್ದರೆ, ಅದು ನೋಟಿಸ್ ಜಾರಿಗೊಳಿಸಿ ಹಣವನ್ನು ಹಿಂಪಡೆಯುತ್ತದೆ.
ಬ್ಯಾಂಕ್ ಉಳಿತಾಯ ಖಾತೆ ಠೇವಣಿಗಳು: ಒಂದು ಹಣಕಾಸು ವರ್ಷದಲ್ಲಿ ಬ್ಯಾಂಕ್ ಉಳಿತಾಯ ಖಾತೆಯಲ್ಲಿ 10 ಲಕ್ಷ ರೂ.ಗಿಂತ ಹೆಚ್ಚಿನ ನಗದು ಠೇವಣಿ ಇಟ್ಟಿದ್ದರೆ, ಅದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ವರದಿ ಮಾಡಬೇಕು. ಚಾಲ್ತಿ ಖಾತೆಯಲ್ಲಿ ಠೇವಣಿ ಮಿತಿ 50 ಲಕ್ಷ ರೂ. ಈ ಮಿತಿ ಮೀರಿದರೆ ಹಣದ ಮೂಲದ ಬಗ್ಗೆ ನಿಖರವಾದ ಮಾಹಿತಿಯನ್ನು ಐಟಿ ಇಲಾಖೆಗೆ ನೀಡಬೇಕು. ಇಲ್ಲದಿದ್ದರೆ, ಗಂಭೀರ ಆರ್ಥಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಇದನ್ನು ಓದಿ:ಅದು ಫೋಲ್ಡ್ ಆದಾಗ ನಮಗೆ ತಿಳಿಸಿ: ಆಪಲ್ ಅನ್ನು ಕಚ್ಚಿ ತಿಂದ ಸ್ಯಾಮ್ಸಂಗ್! - Apple vs Samsung