ದೇಶದಲ್ಲಿ ಇಂದು ಬಹುತೇಕ ಜನರು ಸ್ವಂತ ಬ್ಯಾಂಕ್ ಖಾತೆ ಹೊಂದಿದ್ದಾರೆ. ಸರ್ಕಾರದ ಯೋಜನೆಗಳು, ಸಂಬಳ ಮತ್ತು ಇತರ ಹಣಕಾಸಿನ ವ್ಯವಹಾರಗಳನ್ನು ನಡೆಸಲು ಉಳಿತಾಯ ಖಾತೆಯನ್ನು ಹೊಂದಿಯೇ ಹೊಂದಿರುತ್ತಾರೆ. ಈ ಖಾತೆ ಮೂಲಕ ನಿಮ್ಮ ಹಣವನ್ನು ಸುರಕ್ಷಿತವಾಗಿ ಸಂಗ್ರಹಿಸುವುದಲ್ಲದೆ ಸಣ್ಣ ಬಡ್ಡಿಯನ್ನೂ ಗಳಿಸುತ್ತವೆ. ಅಷ್ಟೇ ಅಲ್ಲ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಮಾತ್ರ ನೀವು ಡಿಜಿಟಲ್ ವಹಿವಾಟುಗಳನ್ನು ನಡೆಸಲು ಸಾಧ್ಯವಾಗುತ್ತದೆ.
ಉದಾಹರಣೆಗೆ ಫೋನ್ ಪೇ, ಪೇಟಿಎಂ ಸೇರಿದಂತೆ ಇತರ ಯುಪಿಐ ಬಳಕೆಗೆ ಬ್ಯಾಂಕ್ ಖಾತೆ ಇರಲೇಬೇಕಾಗುತ್ತದೆ. ಇನ್ನು ಒಂದು ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಸಂಗ್ರಹಿಸಬಹುದು? ಅದಕ್ಕೇನಾದರೂ ಮಿತಿ ಇದೆಯೇ? ನಗದು ಬ್ಯಾಲೆನ್ಸ್ ಮಿತಿಯನ್ನು ಮೀರಿದರೆ ಯಾವುದೇ ಸಮಸ್ಯೆಗಳಿವೆಯೇ? ಎಂಬ ಡೌಟ್ ನಿಮಗಿದೆಯೇ. ಖಂಡಿತ ಉಳಿತಾಯ ಖಾತೆಗೆ ಕೆಲ ಮಿತಿಗಳಿವೆ. ಆ ಬಗ್ಗೆ ಈ ತಿಳಿದುಕೊಳ್ಳೋಣ
ಹೆಚ್ಚಿನ ಬಳಕೆದಾರರು ಉಳಿತಾಯ ಖಾತೆಯ ಮೂಲಕ ವಹಿವಾಟು ನಡೆಸುತ್ತಿದ್ದಾರೆ. ಉಳಿತಾಯ ಖಾತೆಯಲ್ಲಿ ಯಾವುದೇ ಮೊತ್ತವನ್ನು ಜಮಾ ಮಾಡಬಹುದು. ಅದಕ್ಕೆ ಯಾವುದೇ ಮಿತಿಯಿಲ್ಲ. ಆದರೆ ಆದಾಯ ತೆರಿಗೆ ಇಲಾಖೆಯು ಆರ್ಥಿಕ ವರ್ಷದಲ್ಲಿ ಉಳಿತಾಯ ಖಾತೆಯಲ್ಲಿ ಠೇವಣಿ ಇಡಬಹುದಾದ ಮೊತ್ತಕ್ಕೆ 10 ಲಕ್ಷ ರೂ.ಗಳ ಮಿತಿಯನ್ನು ವಿಧಿಸಿದೆ. ಆದ್ದರಿಂದ, ನೀವು 10 ಲಕ್ಷ ರೂಗಳಿಗಿಂತ ಹೆಚ್ಚು ಹಣದ ಠೇವಣಿ ಮಾಡಿದರೆ, ನೀವು ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತೀರಿ. ಆ ಹಣದ ಮೇಲೆ ನೀವು ತೆರಿಗೆ ಪಾವತಿಸಬೇಕಾಗಬಹುದು. ಅಲ್ಲದೇ 10 ಲಕ್ಷಕ್ಕಿಂತ ಹೆಚ್ಚು ಠೇವಣಿ ಇಟ್ಟರೆ ಐಟಿ ಇಲಾಖೆಗೆ ಮಾಹಿತಿ ನೀಡಬೇಕು.
ನಿಮ್ಮ ಉಳಿತಾಯ ಖಾತೆಯಲ್ಲಿ 10 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟಿದ್ದರೆ ಆದಾಯ ತೆರಿಗೆ ಇಲಾಖೆ ನಿಗಾ ಇಟ್ಟಿರುತ್ತದೆ. ನಿಮ್ಮ ಉಳಿತಾಯ ಖಾತೆಯ ಠೇವಣಿ ಇತಿಹಾಸವನ್ನು ಪರಿಶೀಲಿಸಿ. ಅದೇ ರೀತಿ, ಒಂದು ಹಣಕಾಸು ವರ್ಷದಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಠೇವಣಿ ಹೊಂದಿರುವ ಉಳಿತಾಯ ಖಾತೆಗಳ ಬಗ್ಗೆ ಬ್ಯಾಂಕ್‌ಗಳು ಐಟಿ ಇಲಾಖೆಗೆ ಮಾಹಿತಿ ನೀಡುತ್ತವೆ. ಇದರೊಂದಿಗೆ ಐಟಿ ಇಲಾಖೆಯು ಉಳಿತಾಯ ಖಾತೆದಾರರಿಗೆ ನೋಟಿಸ್ ಕಳುಹಿಸುವ ಸಾಧ್ಯತೆಯೂ ಇದೆ. ಎಫ್‌ಡಿಗಳಲ್ಲಿ ನಗದು ಠೇವಣಿ, ಮ್ಯೂಚುವಲ್ ಫಂಡ್‌ಗಳು, ಬಾಂಡ್‌ಗಳು, ಷೇರುಗಳಲ್ಲಿನ ಹೂಡಿಕೆಗಳು, ಫಾರೆಕ್ಸ್ ಕಾರ್ಡ್‌ಗಳು ಮುಂತಾದ ವಿದೇಶಿ ಕರೆನ್ಸಿ ಖರೀದಿಗಳಿಗೆ 10 ಲಕ್ಷದ ಮಿತಿ ಅನ್ವಯವಾಗುತ್ತದೆ.
ಇದನ್ನು ಓದಿ:ಸಾರ್ವಕಾಲಿಕ ದಾಖಲೆಯತ್ತ ಷೇರು ಮಾರುಕಟ್ಟೆ: ಯಾವ ಷೇರುಗಳಿಗೆ ಲಾಭ, ನಷ್ಟ? - STOCK Market