ಕರ್ನಾಟಕ

karnataka

ETV Bharat / business

ಬಗೆಹರಿದ ಭಾರತ್ ಪೇ, ಫೋನ್​ ಪೇ ಟ್ರೇಡ್​ಮಾರ್ಕ್ ವಿವಾದ: 5 ವರ್ಷಗಳ ಹೋರಾಟ ಅಂತ್ಯ - BharatPe PhonePe legal dispute - BHARATPE PHONEPE LEGAL DISPUTE

ಭಾರತ್ ಪೇ ಗ್ರೂಪ್ ಮತ್ತು ಫೋನ್ ಪೇ ಗ್ರೂಪ್ ಕಂಪನಿಗಳು ಟ್ರೇಡ್​ಮಾರ್ಕ್ ಸಂಬಂಧಿತ ತಮ್ಮ ನಡುವಿನ ಎಲ್ಲ ವ್ಯಾಜ್ಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡಿವೆ.

ಟ್ರೇಡ್​ಮಾರ್ಕ್ ವಿವಾದ ಬಗೆಹರಿಸಿಕೊಂಡ ಭಾರತ್ ಪೇ, ಫೋನ್​ ಪೇ
ಟ್ರೇಡ್​ಮಾರ್ಕ್ ವಿವಾದ ಬಗೆಹರಿಸಿಕೊಂಡ ಭಾರತ್ ಪೇ, ಫೋನ್​ ಪೇ (IANS image)

By ETV Bharat Karnataka Team

Published : May 27, 2024, 4:03 PM IST

ಬೆಂಗಳೂರು : ಭಾರತ್ ಪೇ ಗ್ರೂಪ್ ಮತ್ತು ಫೋನ್ ಪೇ ಗ್ರೂಪ್ ಕಂಪನಿಗಳು 'ಪೇ' ಎಂಬ ಟ್ರೇಡ್ ಮಾರ್ಕ್ ಬಳಕೆಗೆ ಸಂಬಂಧಿಸಿದ ದೀರ್ಘಕಾಲದ ಕಾನೂನು ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡಿವೆ ಎಂದು ಭಾನುವಾರ ಪ್ರಕಟಿಸಿವೆ. ಕಳೆದ 5 ವರ್ಷಗಳಿಂದ ಅನೇಕ ನ್ಯಾಯಾಲಯಗಳಲ್ಲಿ ದೀರ್ಘಕಾಲದ ಕಾನೂನು ಹೋರಾಟದ ನಂತರ ಕೊನೆಗೂ ವಿವಾದ ಬಗೆಹರಿದಿದೆ.

"ಈ ಒಪ್ಪಂದವು ಜಾರಿಯಲ್ಲಿರುವ ಎಲ್ಲ ನ್ಯಾಯಾಂಗ ಹೋರಾಟಗಳನ್ನು ಕೊನೆಗೊಳಿಸುತ್ತದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕಂಪನಿಗಳು ಟ್ರೇಡ್ ಮಾರ್ಕ್ ರಿಜಿಸ್ಟ್ರಿಗಾಗಿ ಪರಸ್ಪರರ ವಿರುದ್ಧದ ಎಲ್ಲ ಮೊಕದ್ದಮೆಗಳನ್ನು ಹಿಂತೆಗೆದುಕೊಂಡಿವೆ.

ಈ ಬಗ್ಗೆ ಮಾತನಾಡಿದ ಭಾರತ್ ಪೇ ಮಂಡಳಿಯ ಅಧ್ಯಕ್ಷ ರಜನೀಶ್ ಕುಮಾರ್, ಈ ಕ್ರಮ ಉದ್ಯಮಕ್ಕೆ ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದರು. ಈ ವಿಷಯದಲ್ಲಿ ಎರಡೂ ಪಕ್ಷಗಳು ತೋರಿದ ಪ್ರಬುದ್ಧತೆ ಮತ್ತು ವೃತ್ತಿಪರತೆಯನ್ನು ಅವರು ಶ್ಲಾಘಿಸಿದರು. ವಿವಾದ ಕೊನೆಗೊಂಡಿದ್ದರಿಂದ ಎರಡೂ ಕಂಪನಿಗಳು ದೃಢವಾದ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ತಮ್ಮ ಶಕ್ತಿ ಮತ್ತು ಸಂಪನ್ಮೂಲಗಳನ್ನು ಕೇಂದ್ರೀಕರಿಸಲು ಸಹಾಯಕವಾಗಲಿದೆ ಎಂದು ಅವರು ಹೇಳಿದರು.

ದೆಹಲಿ ಮತ್ತು ಬಾಂಬೆ ಹೈಕೋರ್ಟ್​​ಗಳ ಮುಂದಿರುವ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಇತ್ಯರ್ಥ ಒಪ್ಪಂದದ ಅಡಿಯಲ್ಲಿನ ನಿಯಮಗಳನ್ನು ಅನುಸರಿಸಲು ಎರಡೂ ಸಂಸ್ಥೆಗಳು ಇತರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿವೆ. ಫೋನ್ ಪೇ ಸಂಸ್ಥಾಪಕ ಮತ್ತು ಸಿಇಒ ಸಮೀರ್ ನಿಗಮ್ ಕೂಡ ಸೌಹಾರ್ದಯುತ ವ್ಯಾಜ್ಯ ಪರಿಹಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಫಲಿತಾಂಶವು ಎರಡೂ ಕಂಪನಿಗಳಿಗೆ ಒಟ್ಟಾರೆಯಾಗಿ ಭಾರತೀಯ ಫಿನ್ ಟೆಕ್ ಉದ್ಯಮವನ್ನು ಬೆಳೆಸುವತ್ತ ಸಾಮೂಹಿಕವಾಗಿ ತಮ್ಮ ಶಕ್ತಿಯನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಫೋನ್ ಪೇ ಗ್ರೂಪ್ ಅನ್ನು 2016 ರಲ್ಲಿ ಫ್ಲಿಪ್ ಕಾರ್ಟ್ ಗ್ರೂಪ್ ಸ್ವಾಧೀನಪಡಿಸಿಕೊಂಡಿತು ಮತ್ತು ಇಂದು ಇದು ಭಾರತದ ಅತಿದೊಡ್ಡ ಡಿಜಿಟಲ್ ಪಾವತಿ ವೇದಿಕೆಯಾಗಿದೆ. ಭಾರತದಲ್ಲಿ 400 ದಶಲಕ್ಷಕ್ಕೂ ಹೆಚ್ಚು ನೋಂದಾಯಿತ ಬಳಕೆದಾರರೊಂದಿಗೆ, ಪ್ರತಿ ನಾಲ್ವರು ಭಾರತೀಯರಲ್ಲಿ ಒಬ್ಬರು ಈಗ ಫೋನ್ ಪೇ ಬಳಸುತ್ತಿದ್ದಾರೆ.

ಭಾರತ್ ಪೇ ಅನ್ನು ಮಾರ್ಚ್ 2018 ರಲ್ಲಿ ನಕ್ರಾನಿ ಮತ್ತು ಕೊಲಾಡಿಯಾ ಎಂಬುವರು ಸ್ಥಾಪಿಸಿದರು. ಪ್ರತಿಯೊಬ್ಬರೂ ಸಂಸ್ಥೆಯಲ್ಲಿ ಶೇ 50ರಷ್ಟು ಒಡೆತನವನ್ನು ಹೊಂದಿದ್ದಾರೆ. ಅಶ್ನೀರ್ ಗ್ರೋವರ್ ಜುಲೈ 2018 ರಲ್ಲಿ ಮೂರನೇ ಸಹ-ಸಂಸ್ಥಾಪಕ ಮತ್ತು ಮಂಡಳಿಯ ಸದಸ್ಯರಾಗಿ ಸಂಸ್ಥೆಗೆ ಸೇರಿದರು.

ಇದನ್ನೂ ಓದಿ : ಕೇಂದ್ರದಿಂದ 262 ಲಕ್ಷ ಟನ್ ಗೋಧಿ ಖರೀದಿ: ಎಂಎಸ್​ಪಿಯಡಿ 22 ಲಕ್ಷ ರೈತರಿಗೆ 59 ಸಾವಿರ ಕೋಟಿ ರೂ. ಪಾವತಿ - wheat procurement in full swing

ABOUT THE AUTHOR

...view details