ಕರ್ನಾಟಕ

karnataka

ETV Bharat / business

ರಿಸ್ಕ್​ ಕಡಿಮೆ, ಆದಾಯ ಹೆಚ್ಚು: ಇವು ಟಾಪ್ 10 ಸರ್ಕಾರಿ ಉಳಿತಾಯ ಯೋಜನೆಗಳು! - BEST GOVT SAVING SCHEMES IN INDIA

ಜೀವನದಲ್ಲಿ ಆರ್ಥಿಕವಾಗಿ ನೆಲೆನಿಲ್ಲಬೇಕೆ? ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಯೋಜನೆಗಳ ಬಗ್ಗೆ ತಿಳಿಯಿರಿ!

best-saving-schemes-in-india-2024-know-these-schemes
ರಿಸ್ಕ್​ ಕಡಿಮೆ, ಆದಾಯ ಹೆಚ್ಚು: ಇವು ಟಾಪ್ 10 ಸರ್ಕಾರಿ ಉಳಿತಾಯ ಯೋಜನೆಗಳು! (ETV Bharat)

By ETV Bharat Karnataka Team

Published : Oct 31, 2024, 1:52 PM IST

Best Saving Schemes In India 2024:'ಹಣವೇ ಎಲ್ಲದಕ್ಕೂ ಮೂಲ - ಈ ಹಣದ ಮೌಲ್ಯವನ್ನು ತಿಳಿದುಕೊಳ್ಳುವುದು ತೀರಾ ಅಗತ್ಯ. ಹಣವನ್ನು ಉಳಿಸುವುದರಿಂದ ಭವಿಷ್ಯದಲ್ಲಿ ಯಾವುದೇ ಆರ್ಥಿಕ ಸಮಸ್ಯೆಗಳಿಲ್ಲದೇ ನೆಮ್ಮದಿಯ ಜೀವನ ನಡೆಸಬಹುದು. ನಿಮ್ಮ ಹಣಕಾಸಿನ ಗುರಿಯನ್ನು ಸಹ ಸುಲಭವಾಗಿ ಸಾಧಿಸಲಾಗುತ್ತದೆ. ಭಾರತದಲ್ಲಿನ ಟಾಪ್-10 ಉಳಿತಾಯ ಯೋಜನೆಗಳನ್ನು ನೋಡೋಣ.

1. ಸ್ಥಿರ ಠೇವಣಿಗಳು - Fixed Deposit : ಯಾವುದೇ ಅಪಾಯವಿಲ್ಲದೇ ಉತ್ತಮ ಆದಾಯವನ್ನು ಗಳಿಸಲು ಬಯಸುವವರಿಗೆ ತೆರಿಗೆ ಉಳಿಸುವ ಸ್ಥಿರ ಠೇವಣಿಗಳು ಉತ್ತಮ ಆಯ್ಕೆಯಾಗಿದೆ. ಆದಾಯ ತೆರಿಗೆ ನಿಯಮ, ಸೆಕ್ಷನ್ 80 ಸಿ ಅಡಿ ಸ್ಥಿರ ಠೇವಣಿಗಳ ಮೇಲೆ ರೂ.1.5 ಲಕ್ಷದವರೆಗೆ ತೆರಿಗೆ ಕಡಿತವನ್ನು ಪಡೆಯಬಹುದು.

2.ULIP :ಯುನಿಟ್ ಲಿಂಕ್ಡ್ ಇನ್ಶೂರೆನ್ಸ್ ಯೋಜನೆಗಳು (ULIP) ವಿಮೆ ಮತ್ತು ಹೂಡಿಕೆಗಳ ಸಂಯೋಜನೆಯಾಗಿದೆ. ವಿಮಾ ಕಂಪನಿಯು ಈ ಯೋಜನೆಯಲ್ಲಿ ನಾವು ಹೂಡಿಕೆ ಮಾಡುವ ಹಣದ ಒಂದು ಭಾಗವನ್ನು ಜೀವ ವಿಮೆಗಾಗಿ ನಿಗದಿಪಡಿಸುತ್ತದೆ. ಉಳಿದ ಹಣವನ್ನು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಅಥವಾ ಸಾಲದ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದು ವಿಮೆಯ ಜೊತೆಗೆ ದೀರ್ಘಾವಧಿಯಲ್ಲಿ ನಿಮಗೆ ಉತ್ತಮ ಆದಾಯವನ್ನು ತಂದು ಕೊಡುತ್ತದೆ.

3. ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ELSS) : ಈ ಇಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆಯು ಮ್ಯೂಚುಯಲ್ ಫಂಡ್ ಹೋಲುತ್ತದೆ. ಆದರೆ ಇದರ ಲಾಕ್‌ಇನ್ ಅವಧಿ ಕೇವಲ 3 ವರ್ಷಗಳು. ಈ ಯೋಜನೆಯಲ್ಲಿ ನಿಮ್ಮ ಹೂಡಿಕೆಯ 80 ಪ್ರತಿಶತವನ್ನು ಈಕ್ವಿಟಿ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದು ನಿಮಗೆ ಉತ್ತಮ ಆದಾಯವನ್ನು ನೀಡುತ್ತದೆ ಮತ್ತು ತೆರಿಗೆ ವಿನಾಯಿತಿಗಳನ್ನು ಸಹ ನೀಡುತ್ತದೆ.

4. ರಾಷ್ಟ್ರೀಯ ಪಿಂಚಣಿ ಯೋಜನೆ (NPS) : ನಿವೃತ್ತಿಯ ನಂತರ ಮಾಸಿಕ ಪಿಂಚಣಿ ಪಡೆಯಲು ನಿರೀಕ್ಷಿಸುವವರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ತುಂಬಾ ಒಳ್ಳೆಯ ಆಯ್ಕೆ ಆಗಿದೆ.

5. ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) : ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳಲ್ಲಿ ಲಭ್ಯವಿದೆ. ಇವುಗಳಲ್ಲಿ ಹೂಡಿಕೆ ಮಾಡಿದರೆ ಬಡ್ಡಿ ರೂಪದಲ್ಲಿ ನಿಮಗೆ ನಿಶ್ಚಿತ ಆದಾಯ ಸಿಗುತ್ತದೆ.

ಭಾರತದಲ್ಲಿ ಸರ್ಕಾರದ ಉಳಿತಾಯ ಯೋಜನೆಗಳು

6.ಸುಕನ್ಯಾ ಸಮೃದ್ಧಿ ಯೋಜನೆ :ಇದು 10 ವರ್ಷದೊಳಗಿನ ಹೆಣ್ಣು ಮಕ್ಕಳಿಗಾಗಿ ವಿಶೇಷವಾಗಿ ರೆಡಿ ಮಾಡಲಾದ ಸರ್ಕಾರಿ ಯೋಜನೆಯಾಗಿದೆ. ಪೋಷಕರು ಅಥವಾ ಪಾಲಕರು ಗರಿಷ್ಠ ಎರಡು ಹೆಣ್ಣು ಮಕ್ಕಳಿಗೆ 2 ಪ್ರತ್ಯೇಕ ಖಾತೆಗಳನ್ನು ತೆರೆಯಬಹುದು. ಖಾತೆ ತೆರೆದ 21 ವರ್ಷಗಳ ನಂತರ ಅಥವಾ ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಮದುವೆ ವೆಚ್ಚಕ್ಕಾಗಿ ಈ ಯೋಜನೆಯಿಂದ ಹಣವನ್ನು ಹಿಂಪಡೆಯಬಹುದು.

7. ಪ್ರಧಾನ ಮಂತ್ರಿ ವಯ ವಂದನಾ ಯೋಜನೆ(PMVVY) : ಭಾರತೀಯ ಜೀವ ವಿಮಾ ನಿಗಮ (LIC) 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಿಂಚಣಿ ನೀಡಲು ಈ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ವಾರ್ಷಿಕ ಶೇ 8ರ ಬಡ್ಡಿ ದರದಲ್ಲಿ ಪಿಂಚಣಿ ನೀಡಲಾಗುವುದು. ಆದರೆ ಹೂಡಿಕೆದಾರರು ಈ ಪಿಂಚಣಿಯನ್ನು ಒಂದು ತಿಂಗಳು/ 3 ತಿಂಗಳು/ 6 ತಿಂಗಳು/ 12 ತಿಂಗಳ ಅವಧಿಯೊಂದಿಗೆ ತೆಗೆದುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ.

8. ಸಾರ್ವಜನಿಕ ಭವಿಷ್ಯ ನಿಧಿ (PPF): PPF ಭಾರತದಲ್ಲಿನ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯ ಬಡ್ಡಿ ದರವು ವಾರ್ಷಿಕ 7.1% ಆಗಿದೆ. ಇದಲ್ಲದೇ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿ ತೆರಿಗೆ ವಿನಾಯಿತಿಗಳಿವೆ. ಅಸಲು ಮಾತ್ರವಲ್ಲದೇ ಬಡ್ಡಿಗೂ ತೆರಿಗೆ ವಿನಾಯಿತಿ ಇದೆ.

9. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ: ಅಪಾಯ-ಮುಕ್ತ ಮತ್ತು ಉತ್ತಮ ಲಾಭದಾಯಕ ಯೋಜನೆಗಳನ್ನು ಹುಡುಕುತ್ತಿರುವವರಿಗೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವು ಉತ್ತಮ ಆಯ್ಕೆಯಾಗಿದೆ. ದೇಶದ ಯಾವುದೇ ಅಂಚೆ ಕಚೇರಿಗೆ ಭೇಟಿ ನೀಡಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯ ಮೂಲಕ ಗಳಿಸಿದ ಆದಾಯಕ್ಕೂ ತೆರಿಗೆ ವಿನಾಯಿತಿ ಇದೆ.

10. ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು : ಬ್ಯಾಂಕ್ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಿದರೆ, ಮಧ್ಯೆದಲ್ಲಿ ಹಿಂಪಡೆಯಲು ಸಾಮಾನ್ಯವಾಗಿ ಸಾಧ್ಯವಿಲ್ಲ. ಆದರೆ ಅಂಚೆ ಕಚೇರಿ ಯೋಜನೆಗಳಲ್ಲಿ ಹಾಗಲ್ಲ. ಅಗತ್ಯವಿದ್ದರೆ, ಸಣ್ಣ ಸೂಚನೆ ನೀಡುವ ಮೂಲಕ ಯೋಜನೆಯ ಹಣವನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಹಿಂಪಡೆಯಬಹುದು. ಹಾಗಾದರೆ ಈಗ ಲಭ್ಯವಿರುವ ಅತ್ಯುತ್ತಮ ಅಂಚೆ ಕಚೇರಿ ಯೋಜನೆಗಳನ್ನು ನೋಡೋಣ.

  • ಪೋಸ್ಟ್ ಆಫೀಸ್ ಉಳಿತಾಯ ಖಾತೆ (SB)
  • ಸಾರ್ವಜನಿಕ ಭವಿಷ್ಯ ನಿಧಿ ಖಾತೆ (PPF)
  • ಹಿರಿಯ ನಾಗರಿಕರ ಉಳಿತಾಯ ಯೋಜನೆ ಖಾತೆ (SCSS)
  • ಸುಕನ್ಯಾ ಸಮೃದ್ಧಿ ಖಾತೆ (SSA)
  • ಕಿಸಾನ್ ವಿಕಾಸ್ ಪತ್ರ (ಕೆವಿಪಿ)
  • ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ
  • PM ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆ, 2021

ಗಮನಿಸಿ: ಈ ಲೇಖನದಲ್ಲಿ ಉಲ್ಲೇಖಿಸಲಾದ ಎಲ್ಲ ಅಂಶಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ಪ್ರಮುಖ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ವೈಯಕ್ತಿಕ ಹಣಕಾಸು ವೃತ್ತಿಪರರ ಸಲಹೆಯನ್ನು ಪಡೆಯುವುದು ಯಾವಾಗಲೂ ಒಳ್ಳೆಯದು.

ABOUT THE AUTHOR

...view details