ನವದೆಹಲಿ:ಭಾರತಕ್ಕೆ ಪರ್ಯಾಯ ಸಮುದ್ರ ವ್ಯಾಪಾರ ಮಾರ್ಗವನ್ನು ನೀಡಲು ಅರ್ಮೇನಿಯಾ ಮುಂದೆ ಬಂದಿದ್ದು, ಆ ಬಗ್ಗೆ ರೈಸಿನಾ ಸಮ್ಮೇಳನದಲ್ಲಿ ವಿಷಯ ಪ್ರಸ್ತಾಪವಾಗಿದೆ. ವಿಶೇಷವಾಗಿ ಯುರೋಪ್‌ನೊಂದಿಗೆ ಪರ್ಯಾಯ ಮಾರ್ಗ ಹಂಚಿಕೊಳ್ಳುವ ಮಾತನಾಡಿದೆ. ಈ ಬಗ್ಗೆ ಆ ದೇಶದ ಕಾರ್ಮಿಕ ಹಾಗೂ ಸಾಮಾಜಿಕ ವ್ಯವಹಾರಗಳ ಸಚಿವ ನರೆಕ್ ಈ ವಿಷಯವನ್ನು ದೆಹಲಿಯಲ್ಲಿ ನಡೆದ ರೈಸಿನಾ ಸಮ್ಮೇಳನದಲ್ಲಿ ಪ್ರಸ್ತಾಪಿಸಿದ್ದಾರೆ.
ಅರ್ಮೇನಿಯನ್ ಸರ್ಕಾರವು ಉತ್ತರ - ದಕ್ಷಿಣ ಸಾರಿಗೆ ಕಾರಿಡಾರ್ (INSTC), ಗಲ್ಫ್ ಕಪ್ಪು ಸಮುದ್ರ ಸಾರಿಗೆ ಮತ್ತು ಚಬಹಾರ್ ಬಂದರು ಅಭಿವೃದ್ಧಿಯಂತಹ ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ಯೋಜನೆಗಳಲ್ಲಿ ತನ್ನ ಪಾಲುದಾರಿಕೆಯನ್ನು ರೂಪಿಸಲು ಬದ್ಧವಾಗಿದೆ ಎಂದು ಅವರು ಘೋಷಿಸಿದ್ದಾರೆ. ಇದು ಭಾರತ ಮತ್ತು ನಡುವಿನ ಸಹಯೋಗದ ಪ್ರಯತ್ನವಾಗಿದೆ ಎಂದು ಇರಾನ್ ಸಚಿವರೂ ಸಹ ಹೇಳಿದ್ದಾರೆ. ರೈಸಿನಾ ಸಮ್ಮೇಳನ ರಾಜಕೀಯ ಮತ್ತು ವಿಶ್ವ ಆರ್ಥಿಕ ವ್ಯವಹಾರಗಳ ಕುರಿತು ಭಾರತದಲ್ಲಿ ನಡೆಯುತ್ತಿರುವ ಪ್ರಮುಖ ಸಭೆ ಆಗಿದೆ. ಜಾಗತಿಕ ಸಮುದಾಯವು ಎದುರಿಸುತ್ತಿರುವ ಅತ್ಯಂತ ಸವಾಲಿನ ಸಮಸ್ಯೆಗಳನ್ನು ಪರಿಹರಿಸಲು ಸಮ್ಮೇಳನದಲ್ಲಿ ಸಂವಾದ- ಚರ್ಚೆಗಳನ್ನು ನಡೆಸಲಾಗುತ್ತಿದೆ.
ಕೆಂಪು ಸಮುದ್ರದ ಮೇಲೆ ಹೌತಿ ಉಗ್ರರ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗದ ತುರ್ತು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಇಂತಹ ಪ್ರಸ್ತಾಪದ ಬಗ್ಗೆ ಮಾತನಾಡಿದ ಅರ್ಮೇನಿಯನ್ ಸಚಿವರು, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಯುರೋಪ್ ಮತ್ತು ಪಶ್ಚಿಮದೊಂದಿಗೆ ವ್ಯಾಪಾರ ಮಾಡಲು ಪರ್ಯಾಯ ಸಮುದ್ರ ಮಾರ್ಗಗಳನ್ನು ಹುಡುಕುತ್ತಿವೆ. ಈ ಸಂದರ್ಭದಲ್ಲಿ ಈ ವಿಚಾರ ಮಹತ್ವವಾಗಿದೆ ಎಂದು ಹೇಳಿದರು. ಕೆಂಪು ಸಮುದ್ರದಂತಹ ಸಾಂಪ್ರದಾಯಿಕ ಮಾರ್ಗಗಳಲ್ಲಿ ಭದ್ರತಾ ದೃಷ್ಟಿಯಿಂದ ಪರ್ಯಾಯ ಸಮುದ್ರ ಮಾರ್ಗಗಳ ಹುಡುಕಾಟ ಈಗ ಹೆಚ್ಚು ಮಹತ್ವ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಅರ್ಮೆನಿಯನ್ ಸಚಿವರ ಈ ಪ್ರಸ್ತಾಪ ಭಾರಿ ಗಮನ ಸೆಳೆದಿದೆ.