ಬೆಂಗಳೂರು:ಜನಪ್ರಿಯ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಅಮೆಜಾನ್ ಮತ್ತೊಂದು ಮೆಗಾ ಸೇಲ್ಗೆ ಸಿದ್ಧವಾಗಿದೆ. ಕಂಪನಿ ಇತ್ತೀಚೆಗೆ ವಾರ್ಷಿಕ ಗ್ರೇಟ್ ಸಮ್ಮರ್ ಸೇಲ್ನ ದಿನಾಂಕಗಳನ್ನು ಪ್ರಕಟಿಸಿದೆ. ಮೇ 2ರ ಮಧ್ಯಾಹ್ನದಿಂದ ಈ ಸೇಲ್ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ, ಈ ದೊಡ್ಡ ಮಾರಾಟ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಮಾತ್ರ ಅಮೆಜಾನ್ ಇನ್ನೂ ಬಹಿರಂಗಪಡಿಸಿಲ್ಲ. ಮತ್ತೊಂದು ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಕೂಡ 'ಬಿಗ್ ಸೇವಿಂಗ್ ಡೇಸ್ ಸೇಲ್' ದಿನಾಂಕಗಳನ್ನು ಪ್ರಕಟಿಸಿದೆ. ಈ ಸೇಲ್ ಮೇ 3 ರಿಂದ ಮೇ 9 ರವರೆಗೆ ನಡೆಯಲಿದೆ.
ಇಂದಿನ ತಡರಾತ್ರಿಯಿಂದಲೇ ಸೇಲ್ ಆರಂಭ: ಅಮೆಜಾನ್ ಪ್ರೈಮ್ ಸದಸ್ಯರಿಗೆ ಮೇ 1 ರ ಮಧ್ಯರಾತ್ರಿ 12 ರಿಂದಲೇ ಆಫರ್ ಲಭ್ಯವಿರುತ್ತದೆ. ಇದರರ್ಥ ಪ್ರೈಮ್ ಚಂದಾದಾರರು ಈ ಮಾರಾಟದಲ್ಲಿ ನೀಡುವ ರಿಯಾಯಿತಿಗಳು, ಕೊಡುಗೆಗಳು ಮತ್ತು ಡೀಲ್ಗಳನ್ನು ಎಲ್ಲರಿಗಿಂತ ಒಂದು ದಿನ ಮುಂಚಿತವಾಗಿ ಪಡೆಯಬಹುದು.
ಅತ್ಯುತ್ತಮ ಆಫರ್ಗಳಿವು: ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ನಲ್ಲಿ ICICI ಬ್ಯಾಂಕ್, ಒನ್ ಕಾರ್ಡ್ ಮತ್ತು ಬ್ಯಾಂಕ್ ಆಫ್ ಬರೋಡಾ ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇ 10 ರಷ್ಟು ತ್ವರಿತ ರಿಯಾಯಿತಿಯನ್ನು ನೀಡಲಾಗುತ್ತದೆ.
- ಖರೀದಿದಾರರಿಗೆ EMI ಸೌಲಭ್ಯವನ್ನು ಸಹ ಒದಗಿಸಲಾಗಿದೆ.
- ಈ ಮಾರಾಟದ ಸಮಯದಲ್ಲಿ ಮಾಡಿದ ಮೊದಲ ಆರ್ಡರ್ನಲ್ಲಿ ಉಚಿತ ಡೆಲಿವರಿ ಸೌಲಭ್ಯ ನೀಡಲಾಗಿದೆ. ಇದಲ್ಲದೇ, ಸ್ವಾಗತ ಬಹುಮಾನದ ಹೆಸರಿನಲ್ಲಿ ಶೇ 20ರಷ್ಟು ಕ್ಯಾಶ್ಬ್ಯಾಕ್ ಸಹ ನೀಡಲಾಗುತ್ತದೆ.
- ಸ್ಮಾರ್ಟ್ ವಾಚ್ಗಳು, ಪುಸ್ತಕಗಳು, ಉಡುಪುಗಳು ಮತ್ತು ಎಲೆಕ್ಟ್ರಾನಿಕ್ಸ್ಗಳ ಮೇಲೆ ದೊಡ್ಡ ಕೊಡುಗೆಗಳು ಮತ್ತು ರಿಯಾಯಿತಿಗಳಿವೆ.
- ಈ ಸೇಲ್ನಲ್ಲಿ ಅಮೆಜಾನ್ ಅಲೆಕ್ಸಾ ಸಾಧನಗಳು, ಫೈರ್ ಟಿವಿ ಮತ್ತು ಕಿಂಡಲ್ ಸಾಧನಗಳ ಮೇಲೆ ಭಾರಿ ರಿಯಾಯಿತಿಗಳು ಮತ್ತು ಕೊಡುಗೆಗಳು ಇರುತ್ತವೆ ಎಂದು ವರದಿಯಾಗಿದೆ.