ಹೈದರಾಬಾದ್: ಯಾವುದೇ ಸಸ್ಯ ಅಥವಾ ಮರಕ್ಕೆ ಕೀಟಬಾಧೆ ಕಂಡು ಬಂದರೆ ಅದು ನಿಷ್ಪ್ರಯೋಜಕವಾಗುತ್ತದೆ. ವಿವಿಧ ರಾಸಾಯನಿಕಗಳನ್ನು ಸಿಂಪಡಿಸುವ ಮೂಲಕ ನಾವು ಅವುಗಳನ್ನು ಸಂರಕ್ಷಿಸುತ್ತೇವೆ. ಆದರೆ, ಈ ಪ್ರಪಂಚದಲ್ಲಿ ಈ ಮರಕ್ಕೆ ಫಂಗಸ್ ಕೊಟ್ಟರೆ ಮಾತ್ರ ಸದೃಢವಾಗಿ ಬೆಳೆಯುತ್ತದೆ. ಹಾಗಾದರೆ ಆ ಮರ ಯಾವುದು? ಶಿಲೀಂಧ್ರ ಎಂದರೇನು ಎಂಬುದರ ಬಗ್ಗೆ ಒಂದೊಂದಾಗಿಯೇ ತಿಳಿಯುತ್ತಾ ಹೋಗೋಣ.
ಇದು ರೈತರಿಗೆ ಲಾಭದಾಯಕ ಮರ: ಅಗರ್ ವುಡ್ ಪರಿಮಳಯುಕ್ತ ಮರ. ಎಣ್ಣೆ ಮತ್ತಿತರ ಉತ್ಪನ್ನಗಳನ್ನು ಇದರಿಂದಲೇ ತಯಾರಿಸಲಾಗುತ್ತದೆ. ಹೀಗಾಗಿ ಇದು ರೈತರಿಗೆ ಲಾಭದಾಯಕ ಮರವಾಗಿದೆ. ಈ ಮರಗಳಿಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ಮರಗಳನ್ನು ನಮ್ಮ ದೇಶದಲ್ಲೂ ಅದರಲ್ಲೂ ಈ ಭಾಗದಲ್ಲೂ ಬೆಳೆಯಬಹುದಾಗಿದೆ. ಚಿನ್ನದಂತಹ ಒಂದು ಮರ ಬೆಳೆದರೆ, ಅದು ಹಣದ ಸುರಿಮಳೆಯನ್ನೇ ಹರಿಸುತ್ತದೆ.
ಪರಿಮಳಯುಕ್ತ ಅಗರ್ ಬತ್ತಿಗಳು ಮತ್ತು ಅತ್ತರ್, ಈ ಅಗರ್ವುಡ್ ಮರದಿಂದ ತಯಾರಿಸಲಾಗುತ್ತದೆ. ಇದನ್ನು ಸಿಂಗಾಪುರ, ಲಾವೋಸ್, ತೈವಾನ್, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥಾಯ್ಲೆಂಡ್ನಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಅರಬ್ ದೇಶಗಳಲ್ಲಿ ಮರ ಮತ್ತು ಸಂಬಂಧಿತ ಉತ್ಪನ್ನಗಳನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ದೇಶದ ಅಸ್ಸಾಂ, ಮಿಜೋರಾಂ, ತ್ರಿಪುರಾ ರಾಜ್ಯಗಳಲ್ಲಿ ಈಗ ಹೆಚ್ಚಾಗಿ ಕಂಡುಬರುತ್ತಿದೆ. ಈ ಅಗರ್ ವುಡ್ ಇತ್ತೀಚೆಗೆ ದಕ್ಷಿಣ ಭಾರತದ ರಾಜ್ಯಗಳಿಗೂ ತಲುಪಿದೆ. ಅಗರ್ವುಡ್ ಶ್ರೀಗಂಧಂ ಮತ್ತು ಕೆಂಪು ಚಂದನದಂತಹ ಪರಿಮಳಯುಕ್ತ ಮರಗಳಿಗೆ ಹೋಲಿಕೆ ಮಾಡಲಾಗುತ್ತಿದೆ.
ನಾಲ್ಕೇ ವರ್ಷದಲ್ಲಿ ಬರಲಿದೆ ಆದಾಯ: ಶ್ರೀಗಂಧ ಮತ್ತು ಕೆಂಪು ಚಂದನದ ಮರಗಳು ಬಹುಬೇಗನೇ ಆದಾಯ ತಂದು ಕೊಡುವುದಿಲ್ಲ. ಚಂದನ ಹಾಗೂ ಕೆಂಪು ಚಂದನದ ಮರಗಳಿಂದ ಆದಾಯ ಬರಬೇಕು ಎಂದರೆ ಸುಮಾರು ಮೂವತ್ತು ವರ್ಷಗಳಷ್ಟು ಕಾಯಬೇಕು. ಅದೇ ಅಗರ್ ವುಡ್ ಮರಗಳನ್ನು ಬೆಳೆಸಿದರೆ ನಾಲ್ಕು ವರ್ಷದಲ್ಲೇ ಆದಾಯ ಸಿಗುತ್ತದೆ. ಒಮ್ಮೆ ಮರಗಳನ್ನು ಬೆಳೆಸಿದರೆ, ಈ ಅಗರ್ವುಡ್ ಮರವು ನಲವತ್ತು ವರ್ಷಗಳವರೆಗೆ ಅನೇಕ ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ. ಈ ಮರಗಳು ಬಹಳ ಬೇಗನೇ ಬೆಳೆಯುತ್ತವೆ. ನಾಟಿ ಮಾಡಿದ ನಾಲ್ಕು ವರ್ಷಗಳ ನಂತರ, ಮರವು ದಪ್ಪವಾದಾಗ, ಕಾಂಡದಲ್ಲಿ ರಂಧ್ರಗಳನ್ನು ಮಾಡಿ ಶಿಲೀಂಧ್ರವನ್ನು ಹೊರ ತರಲಾಗುತ್ತದೆ.
ಏನಿದು ಶೀಲಿಂದ್ರ?:ಮರದ ಮೇಲೆ ಶಿಲೀಂಧ್ರವು ಬೆಳೆದಂತೆ, ಕಾಂಡದೊಳಗೆ ರಾಳದಂತಹ ವಸ್ತುವನ್ನು ಬಿಡುಗಡೆ ಮಾಡುತ್ತದೆ. ಇದು ಕಾಂಡದೊಂದಿಗೆ ಬೆಸೆದು ಕೆಲವು ರಾಸಾಯನಿಕಗಳನ್ನು ಬಿಡುಗಡೆ ಮಾಡುವುದರಿಂದ, ಅಗರ್ವುಡ್ ಮರವು ಪರಿಮಳಯುಕ್ತವಾಗುತ್ತದೆ. ಕಾಂಡದ ಒಳಗೆ ಸುಗಂಧ ದ್ರವ್ಯದ ಮರದ ಪದರವು ಕಪ್ಪು ಮತ್ತು ಗಾಢ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಕಟುವಾದ ವಾಸನೆಯ ಭಾಗವು ರೈತರಿಗೆ ದೊಡ್ಡ ಲಾಭವನ್ನು ತಂದು ಕೊಡುತ್ತದೆ.