ನವದೆಹಲಿ: ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಎಡಿಬಿ, 2024-25ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯನ್ನ ಈ ಹಿಂದಿನ ಶೇಕಡಾ 6.7 ರಿಂದ ಶೇಕಡಾ ಶೇ 7ಕ್ಕೆ ಏರಿಸಿದೆ, ಸಾರ್ವಜನಿಕ ಮತ್ತು ಖಾಸಗಿ ವಲಯದ ಹೂಡಿಕೆಯಲ್ಲಿ ಕಂಡು ಬಂದ ಬೇಡಿಕೆಯಿಂದಾಗಿ ಸದೃಢ ಆರ್ಥಿಕ ಬೆಳವಣಿಗೆ ಉಂಟಾಗಿದೆ ಎಂದು ಎಡಿಬಿ ಹೇಳಿದೆ.
2024-25ರ ಬೆಳವಣಿಗೆಯ ಅಂದಾಜಿನ ಪ್ರಕಾರ, 2022-23ರ ಆರ್ಥಿಕ ವರ್ಷದಲ್ಲಿ ಬೆಳವಣಿಗೆ ದರ 7.6 ಪ್ರತಿ ಶತಕ್ಕಿಂತ ಕಡಿಮೆ ಇತ್ತು. ಬಲವಾದ ಹೂಡಿಕೆಯು 2022 - 23ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಗೆ ಕಾರಣವಾಗಿದೆ ಎಂದು ಅದು ತನ್ನ ವರದಿಯಲ್ಲಿ ಹೇಳಿದೆ. ಎಡಿಬಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತೀಯ ಆರ್ಥಿಕತೆಯು 2024-25 ರ ಆರ್ಥಿಕ ವರ್ಷದಲ್ಲಿ ಶೇಕಡಾ 6.7 ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಂದಾಜು ಮಾಡಿತ್ತು. ಇದೀಗ ಈ ಅಂದಾಜನ್ನು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಪರಿಷ್ಕರಿಸಿದೆ.
2023 ರ ಆರ್ಥಿಕ ವರ್ಷದಲ್ಲಿ ಉತ್ಪಾದನೆ ಮತ್ತು ಸೇವೆಗಳಲ್ಲಿ ಬಲವಾದ ಆವೇಗ ಕಂಡು ಬಂದಿದ್ದರಿಂದ ಭಾರತದ ಆರ್ಥಿಕತೆಯು ದೃಢವಾಗಿ ಬೆಳವಣಿಗೆ ಕಂಡಿದೆ. ಬಲವಾದ ಬೇಡಿಕೆ ಹಾಗೂ ಹಣದುಬ್ಬರದ ಇಳಿಮುಖ ಪ್ರವೃತ್ತಿಯಿಂದಾಗಿ ಆರ್ಥಿಕತೆ ಮತ್ತಷ್ಟು ಚೇತರಿಕೆ ಕಂಡಿದೆ. ಶುಕ್ರವಾರ ಬಿಡುಗಡೆಯಾದ ಏಷ್ಯನ್ ಡೆವಲಪ್‌ಮೆಂಟ್ ಔಟ್‌ಲುಕ್‌ನ ಏಪ್ರಿಲ್ ಆವೃತ್ತಿಯಲ್ಲಿ ಹೇಳಲಾಗಿದೆ.