ಕರ್ನಾಟಕ

karnataka

ETV Bharat / business

₹3 ಸಾವಿರ ಕೋಟಿ ನೀಡಿ ಒಡಿಶಾದ ಗೋಪಾಲ್​ಪುರ ಬಂದರು ಪಾಲು ಖರೀದಿಸಿದ ಅದಾನಿ ಪೋರ್ಟ್ಸ್ - Adani Ports

ಮೂರು ಸಾವಿರ ಕೋಟಿ ರೂ. ನೀಡಿ ಗೋಪಾಲ್​ಪುರ ಬಂದರಿನಲ್ಲಿ ಅದಾನಿ ಪೋರ್ಟ್ಸ್​ ಪಾಲು ಖರೀದಿಸಿದೆ.

Adani Ports acquires Gopalpur Port in Odisha for Rs 3,080 crore
Adani Ports acquires Gopalpur Port in Odisha for Rs 3,080 crore

By ETV Bharat Karnataka Team

Published : Mar 26, 2024, 2:07 PM IST

ಅಹ್ಮದಾಬಾದ್: ಗೋಪಾಲ್ ಪುರ ಪೋರ್ಟ್ ಲಿಮಿಟೆಡ್‌ನಲ್ಲಿನ (ಜಿಪಿಎಲ್) ಎಸ್​ಪಿ ಗ್ರೂಪ್​ನ ಶೇಕಡಾ 56 ರಷ್ಟು ಮತ್ತು ಒರಿಸ್ಸಾ ಸ್ಟೀವ್ ಡೋರ್ಸ್ ಲಿಮಿಟೆಡ್ (ಒಎಸ್ಎಲ್) ನ ಶೇಕಡಾ 39 ರಷ್ಟು ಪಾಲನ್ನು 3,080 ಕೋಟಿ ರೂ.ಗೆ ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ (ಎಪಿಎಸ್ಇಝಡ್) ಸ್ವಾಧೀನಪಡಿಸಿಕೊಂಡಿದೆ ಎಂದು ಕಂಪನಿ ಮಂಗಳವಾರ ತಿಳಿಸಿದೆ.

ದೇಶದ ಪೂರ್ವ ಕರಾವಳಿಯಲ್ಲಿರುವ ಗೋಪಾಲ್ ಪುರ ಬಂದರು 20 ಎಂಎಂಟಿಪಿಎ (ವರ್ಷಕ್ಕೆ ಮಿಲಿಯನ್ ಮೆಟ್ರಿಕ್ ಟನ್) ಸರಕು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಒಡಿಶಾ ಸರ್ಕಾರವು 2006 ರಲ್ಲಿ ಜಿಪಿಎಲ್​ಗೆ 30 ವರ್ಷಗಳ ಅವಧಿಯ ತೆರಿಗೆ ರಿಯಾಯಿತಿಯನ್ನು ನೀಡಿದೆ. ಇದನ್ನು ತಲಾ 10 ವರ್ಷಗಳಂತೆ ಮತ್ತೆ ಎರಡು ಬಾರಿ ವಿಸ್ತರಿಸಬಹುದು.

ಎಂಟರ್​ ಪ್ರೈಸ್ ಮೌಲ್ಯದ ಜೊತೆಗೆ, ಮಾರಾಟಗಾರರು ಒಪ್ಪಿಕೊಂಡಂತೆ ಕೆಲ ಷರತ್ತುಗಳ ಈಡೇರಿಕೆಗೆ ಒಳಪಟ್ಟು 5.5 ವರ್ಷಗಳ ನಂತರ 270 ಕೋಟಿ ರೂ.ಗಳನ್ನು ಪಾವತಿಸುವ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.

"ಗೋಪಾಲ್ ​ಪುರ ಬಂದರನ್ನು ಸ್ವಾಧೀನಪಡಿಸಿಕೊಳ್ಳುವುದರಿಂದ ನಮ್ಮ ಗ್ರಾಹಕರಿಗೆ ಹೆಚ್ಚು ಸಮಗ್ರ ಮತ್ತು ಸುಧಾರಿತ ಸೇವೆಗಳನ್ನು ನೀಡಲು ನಮಗೆ ಅನುವು ಮಾಡಿಕೊಡುತ್ತದೆ. ಒಡಿಶಾ ಮತ್ತು ನೆರೆಯ ರಾಜ್ಯಗಳ ಗಣಿಗಾರಿಕೆ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಆಯಕಟ್ಟಿನ ಜಾಗದಲ್ಲಿ ಈ ಬಂದರು ಇದೆ. ಇದರಿಂದ ಒಳನಾಡಿನಲ್ಲಿ ನಮ್ಮ ಲಾಜಿಸ್ಟಿಕ್ಸ್ ವ್ಯವಹಾರವನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ" ಎಂದು ಎಪಿ ಎಸ್ಇಝಡ್ ವ್ಯವಸ್ಥಾಪಕ ನಿರ್ದೇಶಕ ಕರಣ್ ಅದಾನಿ ಹೇಳಿದರು.

ಕಬ್ಬಿಣ ಮತ್ತು ಉಕ್ಕು, ಅಲ್ಯುಮಿನಾ ಮತ್ತು ಇತರ ಖನಿಜ ಆಧಾರಿತ ಕೈಗಾರಿಕೆಗಳ ಬೆಳವಣಿಗೆಯಲ್ಲಿ ಈ ಬಂದರು ಪ್ರಮುಖ ಪಾತ್ರ ವಹಿಸುತ್ತದೆ. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಬಂದರನ್ನು ವಿನ್ಯಾಸಗೊಳಿಸಲು ಮತ್ತು ವಿಸ್ತರಿಸಲು ಸಂಪೂರ್ಣ ಅವಕಾಶವಿದೆ.

ಹಣಕಾಸು ವರ್ಷ 2024 ರಲ್ಲಿ, ಜಿಪಿಎಲ್ ಸುಮಾರು 11.3 ಎಂಎಂಟಿ ಸರಕು ಸಾಗಾಟವನ್ನು ನಿರ್ವಹಿಸಲಿದೆ (ವರ್ಷದಿಂದ ವರ್ಷಕ್ಕೆ ಶೇಕಡಾ 52ರಷ್ಟು ಬೆಳವಣಿಗೆ) ಮತ್ತು 520 ಕೋಟಿ ರೂ.ಗಳ ಆದಾಯ ಗಳಿಸಲಿದೆ (ವರ್ಷದಿಂದ ವರ್ಷಕ್ಕೆ ಶೇಕಡಾ 39ರಷ್ಟು ಬೆಳವಣಿಗೆ) ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ 232 ಕೋಟಿ ರೂ.ಗಳ ಇಬಿಐಟಿಡಿಎ (ವರ್ಷದಿಂದ ವರ್ಷಕ್ಕೆ ಶೇಕಡಾ 65ರಷ್ಟು ಬೆಳವಣಿಗೆ) ಸಾಧಿಸುತ್ತದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ತೆರಿಗೆ ಉಳಿತಾಯಕ್ಕೆ 10 ಬೆಸ್ಟ್​ ಹೂಡಿಕೆ ವಿಧಾನಗಳು ಇಲ್ಲಿವೆ ನೋಡಿ - Tax saving

For All Latest Updates

ABOUT THE AUTHOR

...view details