ಮುಂಬೈ:ಲೋಕಸಭೆ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ಹೊರಬಂದ ಹಿನ್ನೆಲೆಯಲ್ಲಿ ಇಂದುಅದಾನಿ ಸಮೂಹದ ಷೇರುಗಳು ಕುಸಿತ ಕಂಡಿವೆ. ಅದಾನಿ ಕಂಪೆನಿಯ ಷೇರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ. ಎನ್‌ಡಿಎ ಮೈತ್ರಿಕೂಟ 350ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು.
ಇಂದಿನ ದಿನದ ವಹಿವಾಟಿನ ಒಂದು ಹಂತದಲ್ಲಿ ಅದಾನಿ ಪೋರ್ಟ್ಸ್ ಷೇರುಗಳು ಶೇ.20ರಷ್ಟು ಕುಸಿದರೆ, ಅದಾನಿ ಎನರ್ಜಿ ಸಲ್ಯೂಷನ್ಸ್ ಶೇ.19.80ರಷ್ಟು, ಅದಾನಿ ಪವರ್ ಶೇರುಗಳು ಶೇ.19.76ರಷ್ಟು, ಅಂಬುಜಾ ಸಿಮೆಂಟ್ಸ್ ಶೇ.19.20ರಷ್ಟು ನಷ್ಟ ಕಂಡವು. ಅದಾನಿ ಗ್ರೂಪ್‌ನ ಮೂಲ ಕಂಪೆನಿಯಾದ ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಶೇ.19.13ರಷ್ಟು ಕುಸಿದಿವೆ. ಅದಾನಿ ಟೋಟಲ್ ಗ್ಯಾಸ್ ಶೇ.18.55, ಅದಾನಿ ಗ್ರೀನ್ ಎನರ್ಜಿ ಶೇ.18.31, ಎನ್ಡಿಟಿವಿ ಶೇ.15.65, ಎಸಿಸಿ ಶೇ.14.49 ಮತ್ತು ಅದಾನಿ ವಿಲ್ಮರ್ ಶೇ.9.81 ಹಣ ಕಳೆದುಕೊಂಡಿವೆ.