ಕರ್ನಾಟಕ

karnataka

ETV Bharat / business

ದಾಖಲೆಯ ರ‍್ಯಾಲಿ ನಂತರ ಷೇರು ಮಾರುಕಟ್ಟೆಯಲ್ಲಿ ಭಾರಿ ಏರಿಳಿತ - Stock Market Update - STOCK MARKET UPDATE

ಗುರುವಾರ (ಜೂ.13 ರಂದು) ದಾಖಲೆಯ ರ‍್ಯಾಲಿ ನಂತರ, ಇಂದು (ಶುಕ್ರವಾರು) ಷೇರು ಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಕಂಡುಬಂದಿದೆ.

stock market  BSE  NSE  All time record
ಷೇರು ಮಾರುಕಟ್ಟೆ - ಸಂಗ್ರಹ ಚಿತ್ರ (IANS)

By PTI

Published : Jun 14, 2024, 1:34 PM IST

ಮುಂಬೈ:ಹಿಂದಿನ ದಿನದ ದಾಖಲೆಯ ರ‍್ಯಾಲಿ ಮತ್ತು ವಿದೇಶಿ ಹೊಡಿಕೆ ಹೊರ ಹರಿವಿನ ನಂತರ ಲಾಭ ತೆಗೆದುಕೊಳ್ಳುವಿಕೆಯ ಮಧ್ಯೆಯೇ ಶುಕ್ರವಾರ ಬೆಳಗ್ಗೆ 9.30 ವಹಿವಾಟಿನಲ್ಲಿ ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ಕುಸಿದವು. ಬಳಿಕ ಬೆಳಗ್ಗೆ 11 ಗಂಟೆಗೆ ನಂತರ ಷೇರು ಮಾರುಕಟ್ಟೆಯ ಸೂಚ್ಯಂಕಗಳು ಹಸಿರು ಬಣ್ಣದತ್ತ ತಿರುಗಿದವು.

ಆರಂಭಿಕ ವಹಿವಾಡಿನಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 206.18 ಪಾಯಿಂಟ್‌ಗಳ ಕುಸಿತ ಕಂಡು 76,604.72ಕ್ಕೆ ತಲುಪಿತ್ತು. ಎನ್‌ಎಸ್‌ಇ ನಿಫ್ಟಿ 61.5 ಅಂಕ ಕುಸಿದು 23,337.40ಕ್ಕೆ ತಲುಪಿತ್ತು. ಇಂದು (ಶುಕ್ರವಾರ) ವರದಿ ಬರೆಯುವ ವೇಳೆ, ಮಧ್ಯಹ್ನ 1.16ಕ್ಕೆ ಬಿಎಸ್‌ಇ ಸೆನ್ಸೆಕ್ಸ್ 158 ಪಾಯಿಂಟ್‌ಗಳ ಏರಿಕೆ ಕಂಡು 76,966ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 61 ಅಂಕ ಜಿಗಿತ ಕಂಡು 23,459ಕ್ಕೆ ತಲುಪಿದೆ.

ಲಾಭ ಮತ್ತು ನಷ್ಟುದಲ್ಲಿರುವ ಷೇರುಗಳು?:30 ಸೆನ್ಸೆಕ್ಸ್ ಕಂಪನಿಗಳಲ್ಲಿ, ಟೆಕ್ ಮಹೀಂದ್ರಾ, ಜೆಎಸ್‌ಡಬ್ಲ್ಯೂ ಸ್ಟೀಲ್, ಎಚ್‌ಸಿಎಲ್ ಟೆಕ್ನಾಲಜೀಸ್, ಎನ್‌ಟಿಪಿಸಿ, ಬಜಾಜ್ ಫಿನ್‌ಸರ್ವ್, ಕೋಟಕ್ ಮಹೀಂದ್ರಾ ಬ್ಯಾಂಕ್, ವಿಪ್ರೋ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಷೇರುಗಳು ಇಂದು (ಶುಕ್ರವಾರ) ಕಡಿಮೆ ಲಾಭ ಗಳಿಕೆಯ ಪಟ್ಟಿಯಲ್ಲಿ ಕಂಡು ಬಂದಿವೆ.

ಟೈಟಾನ್, ಏಷ್ಯನ್ ಪೇಂಟ್ಸ್, ಮಹೀಂದ್ರಾ ಮತ್ತು ಮಹೀಂದ್ರಾ ಮತ್ತು ಹಿಂದೂಸ್ತಾನ್ ಯೂನಿಲಿವರ್ ಅತಿ ಹೆಚ್ಚು ಲಾಭ ಗಳಿಸಿದವು ಷೇರುಗಾಳಗಿವೆ. ಏಷ್ಯನ್ ಮಾರುಕಟ್ಟೆಗಳಲ್ಲಿ, ಸಿಯೋಲ್ ಏರಿಕೆ ಕಂಡುಬಂದೆ, ಟೋಕಿಯೊ, ಶಾಂಘೈ ಮತ್ತು ಹಾಂಕಾಂಗ್ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಬಂದಿದೆ. ಇನ್ನು ಅಮೆರಿಕ ಷೇರು ಮಾರುಕಟ್ಟೆಯ ಸೂಚ್ಯಂಕಗಳು ಗುರುವಾರ ಮಿಶ್ರ ವಹಿವಾಟಿನಲ್ಲಿ ಕೊನೆಗೊಂಡಿವೆ.

ವಿನಿಮಯ ಮಾಹಿತಿಯ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ 3,033 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

"ಬಜೆಟ್‌ವರೆಗೆ ಯಾವುದೇ ಪ್ರಮುಖ ಇವೆಂಟ್​ಗಳು ಕಾರಣ, ಸಮೀಪಾವಧಿಯಲ್ಲಿ ಮಾರುಕಟ್ಟೆಯ ಸೂಚ್ಯಂಕಗಳಲ್ಲಿ ಏರಿಳಿತ ಸಾಮಾನ್ಯ" ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.

ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ $ 82.41 ಗೆ ಶೇಕಡಾ 41 ರಷ್ಟು ಕುಸಿದಿದೆ.

ಸಾರ್ವಕಾಲಿಕ ದಾಖಲೆ: ಬಿಎಸ್‌ಇ ಗುರುವಾರ 538.89 ಪಾಯಿಂಟ್‌ಗಳು ಜಿಗಿತ (ಶೇ. 0.70) ಕಂಡು ಬಂದಿದ್ದು, 77,145.46ಕ್ಕೆ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು. ನಂತರ 76,810.90ಕ್ಕೆ ತನ್ನ ಕೊನೆಯ ವಹಿವಾಟು ನಡೆಯಿತು. ಮಾರುಕಟ್ಟೆ ಮುಕ್ತಾಯದ ವೇಳೆ 204.33 ಪಾಯಿಂಟ್‌ಗಳು (ಶೇ 0.27) ಏರಿಕೆ ಕಂಡಿತ್ತು. ನಿಫ್ಟಿ 75.95 ಪಾಯಿಂಟ್‌ಗಳು (ಶೇ. 0.33) ಏರಿಕೆಯಾಗಿ 23,398.90ಕ್ಕೆ ತಲುಪಿತ್ತು. ದಿನದ ಕೊನೆಯಲ್ಲಿ 158.1 ಪಾಯಿಂಟ್‌ಗಳು (ಶೇ. 0.67) ಏರಿಕೆ ಕಂಡು ಗರಿಷ್ಠ 23,481.05ಕ್ಕೆ ತಲುಪಿತ್ತು.

"ಹೂಡಿಕೆದಾರರು ಅನಿಶ್ಚಿತತೆಗಳ ನಡುವೆ ಬಲವರ್ಧನೆಯನ್ನು ನಿರೀಕ್ಷಿಸುತ್ತಿದ್ದಾರೆ. ಜೊತೆಗೆ ಕೇಂದ್ರದ ಬಜೆಟ್ ಘೋಷಣೆ ಮತ್ತು ಅಮೆರಿಕ ಫೆಡರಲ್ ರಿಸರ್ವ್‌ನ ಮುಂದಿನ ದರ ಕಡಿತಕ್ಕಾಗಿ ಕಾಯುತ್ತಿದ್ದಾರೆ" ಎಂದು ಮೆಹ್ತಾ ಈಕ್ವಿಟೀಸ್ ಲಿಮಿಟೆಡ್‌ನ ಹಿರಿಯ ವಿಪಿ ಪ್ರಶಾಂತ್ ತಾಪ್ಸೆ ತಿಳಿಸಿದರು.

ಇದನ್ನೂ ಓದಿ:ಏಪ್ರಿಲ್​ನಲ್ಲಿ ಭಾರತದ ಕೈಗಾರಿಕಾ ಉತ್ಪಾದನೆ ಶೇ 5ರಷ್ಟು ಬೆಳವಣಿಗೆ - Industrial Production Of India

ABOUT THE AUTHOR

...view details