ಕರ್ನಾಟಕ

karnataka

ETV Bharat / business

ಈ ವಾರ 340 ಮಿಲಿಯನ್ ಡಾಲರ್​ ಫಂಡಿಂಗ್ ಸಂಗ್ರಹಿಸಿದ 27 ಸ್ಟಾರ್ಟ್​ಅಪ್​ಗಳು - startup funding

ಭಾರತದ 27 ಸ್ಟಾರ್ಟ್​ಅಪ್​ಗಳು ಈ ವಾರ 340 ಮಿಲಿಯನ್ ಡಾಲರ್ ಫಂಡಿಂಗ್ ಪಡೆದುಕೊಂಡಿವೆ.

27 Indian startups secure over $340 million in funding this week
27 Indian startups secure over $340 million in funding this week ((image : IANS))

By ETV Bharat Karnataka Team

Published : May 5, 2024, 7:42 PM IST

ನವದೆಹಲಿ: ಭಾರತದ ಕನಿಷ್ಠ 27 ಸ್ಟಾರ್ಟ್​ಅಪ್​ಗಳು ಈ ವಾರ 340 ಮಿಲಿಯನ್​​ ಡಾಲರ್​ಗೂ ಹೆಚ್ಚು ಫಂಡಿಂಗ್ ಮೊತ್ತವನ್ನು ಸಂಗ್ರಹಿಸಿವೆ. ದೇಶೀಯ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಲ್ಲಿನ ಈ ಒಪ್ಪಂದಗಳ ಪೈಕಿ 9 ಬೆಳವಣಿಗೆಯ ಹಂತದ ಒಪ್ಪಂದಗಳು ಮತ್ತು 11 ಆರಂಭಿಕ ಹಂತದ ಒಪ್ಪಂದಗಳು ಸೇರಿವೆ.

ಮಣಿಪಾಲ್ ಎಜುಕೇಶನ್ ಅಂಡ್ ಮೆಡಿಕಲ್ ಗ್ರೂಪ್ (ಎಂಇಎಂಜಿ) ಮತ್ತು ಇತರ ಕಂಪನಿಗಳ ನೇತೃತ್ವದ ಸ್ಟಾರ್ಟ್​ಅಪ್​ ಫಾರ್ಮ್ ಈಸಿ 216 ಮಿಲಿಯನ್ ಡಾಲರ್ ಸಂಗ್ರಹಿಸಿದೆ. ಇಂಪ್ಯಾಕ್ಟ್ ಇನ್ವೆಸ್ಟ್​ಮೆಂಟ್​ ಎಕ್ಸ್​ಚೇಂಜ್​ (ಐಐಎಕ್ಸ್) ಮತ್ತು ಬ್ಲೂಆರ್ಚರ್ಡ್ ಮೈಕ್ರೋಫೈನಾನ್ಸ್ ಫಂಡ್​ನಿಂದ ಕಿನಾರಾ ಕ್ಯಾಪಿಟಲ್ 24.4 ಮಿಲಿಯನ್ ಡಾಲರ್ ಫಂಡಿಂಗ್ ಪಡೆದುಕೊಂಡಿದೆ.

ಆರೋಗ್ಯ ಕ್ಷೇತ್ರದಲ್ಲಿ ಪೋರ್ಟಿಯಾ ಮೆಡಿಕಲ್ ಹಕ್ಕುಗಳ ವಿತರಣೆಯ ಮೂಲಕ $ 19.87 ಮಿಲಿಯನ್ ಫಂಡಿಂಗ್ ಪಡೆದಿದೆ. ಇನ್ನು ಎಲೆಕ್ಟ್ರಿಕ್ ವೆಹಿಕಲ್ (ಇವಿ) ಸ್ಟಾರ್ಟ್ಅಪ್ ಚಾರ್ಜ್ ಜೋನ್ ಬ್ರಿಟಿಷ್ ಇಂಟರ್ ನ್ಯಾಷನಲ್ ಇನ್ವೆಸ್ಟ್​ಮೆಂಟ್​ (ಬಿಐಐ) ನಿಂದ 19 ಮಿಲಿಯನ್ ಡಾಲರ್ ಸಂಗ್ರಹಿಸಿದೆ.

ಆರಂಭಿಕ ಹಂತದ ಫಂಡಿಂಗ್​ನಲ್ಲಿ ಆಹಾರ-ಕೃಷಿ ಸ್ಟಾರ್ಟ್ಅಪ್ ಫ್ರೆಶ್ ಫ್ರಮ್ ಫಾರ್ಮ್ (ಎಫ್ 3) ಇನ್ ಫ್ಲೆಕ್ಷನ್ ಪಾಯಿಂಟ್ ವೆಂಚರ್ಸ್​ನ ಭಾಗವಹಿಸುವಿಕೆಯೊಂದಿಗೆ 2 ಮಿಲಿಯನ್ ಡಾಲರ್ ಸಂಗ್ರಹಿಸಿದೆ. ಇದು ವರ್ಷದ ಅಂತ್ಯದ ವೇಳೆಗೆ ವಾರ್ಷಿಕ 100 ಕೋಟಿ ರೂ.ಗಳ ಪುನರಾವರ್ತಿತ ಆದಾಯವನ್ನು (ಎಆರ್​ಆರ್) ತಲುಪುವ ಗುರಿಯನ್ನು ಹೊಂದಿದೆ.

ಎನ್ ಟ್ರಾಕರ್ ಅಂಕಿಅಂಶಗಳ ಪ್ರಕಾರ, ಕನಿಷ್ಠ 11 ಆರಂಭಿಕ ಹಂತದ ಸ್ಟಾರ್ಟ್ಅಪ್​ಗಳು ಈ ವಾರ ಸುಮಾರು 30.31 ಮಿಲಿಯನ್ ಡಾಲರ್ ಫಂಡಿಂಗ್​ ಸಂಗ್ರಹಿಸಿವೆ. ಸ್ಟಾರ್ಟ್ಅಪ್ ಫಂಡಿಂಗ್​ನಲ್ಲಿ ಬೆಂಗಳೂರು ಒಂಬತ್ತು ಡೀಲ್​ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ದೆಹಲಿ-ಎನ್​ಸಿಆರ್ ಮತ್ತು ಮುಂಬೈ ನಂತರದ ಸ್ಥಾನಗಳಲ್ಲಿವೆ. ಕಳೆದ ವಾರ, ಸುಮಾರು 27 ಸ್ಟಾರ್ಟ್ಅಪ್​ಗಳು 222.7 ಮಿಲಿಯನ್ ಡಾಲರ್ ಫಂಡಿಂಗ್ ಪಡೆದುಕೊಂಡಿದ್ದವು.

ಹಿಂದಿನ ವರ್ಷಕ್ಕೆ ಹೋಲಿಸಿದರೆ 2024ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಸ್ಟಾರ್ಟ್ಅಪ್ ಫಂಡಿಂಗ್ ಶೇಕಡಾ 17 ರಷ್ಟು ಕುಸಿತ ಕಂಡಿದೆ. 2021 ರಲ್ಲಿ ಹೂಡಿಕೆ ವೃತ್ತಿಪರರು ಪ್ರತಿದಿನ ಸರಾಸರಿ ಆರು ಡೀಲ್​ಗಳನ್ನು ಪಡೆಯುತ್ತಿದ್ದರು. ಆದರೆ ಈ ಪ್ರಮಾಣ 2024 ರಲ್ಲಿ ಮೂರಕ್ಕೆ ಇಳಿದಿದೆ.

ಭಾರತವು 1.7 ಲಕ್ಷ ನೋಂದಾಯಿತ ಸ್ಟಾರ್ಟ್ಅಪ್​ಗಳನ್ನು ಹೊಂದಿದ್ದು, ಒಟ್ಟಾರೆಯಾಗಿ 1.2 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಮಹಾರಾಷ್ಟ್ರ 5801 ಸ್ಟಾರ್ಟ್ಅಪ್​ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ದೆಹಲಿ ಎನ್​ಸಿಆರ್ 3150, ಕರ್ನಾಟಕ 3032 ಮತ್ತು ತಮಿಳುನಾಡು 2810 ಸ್ಟಾರ್ಟ್ಅಪ್​ಗಳೊಂದಿಗೆ ನಂತರದ ಸ್ಥಾನಗಳಲ್ಲಿವೆ.

ಇದನ್ನೂ ಓದಿ : ಕನಿಷ್ಠ ಬೆಲೆ ಷರತ್ತಿನೊಂದಿಗೆ ಈರುಳ್ಳಿ ರಫ್ತು ನಿಷೇಧ ಹಿಂಪಡೆದ ಕೇಂದ್ರ ಸರ್ಕಾರ - onion exports

For All Latest Updates

ABOUT THE AUTHOR

...view details