ಕರ್ನಾಟಕ

karnataka

ETV Bharat / business

ಜನ್ ಧನ್ ಯೋಜನೆಗೆ 10 ವರ್ಷ: 53 ಕೋಟಿ ಫಲಾನುಭವಿಗಳು, 2.31 ಲಕ್ಷ ಕೋಟಿ ಬ್ಯಾಂಕ್​​​​ ಬ್ಯಾಲೆನ್ಸ್​ - 10 Years Of Jan Dhan Yojana - 10 YEARS OF JAN DHAN YOJANA

ಜನ್ ಧನ್ ಯೋಜನೆ ಆರಂಭವಾಗಿ 10 ವರ್ಷಗಳನ್ನು ಪೂರೈಸಿದೆ. ಹಣಕಾಸಿನ ಒಳಗೊಳ್ಳುವಿಕೆ ಹಾಗೂ ಆರ್ಥಿಕ ಶಿಸ್ತು ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿತ್ತು. ವಿಶೇಷವಾಗಿ ಮಹಿಳೆಯರು, ಯುವಕರು ಮತ್ತು ಬಡತನದ ಅಂಚಿನಲ್ಲಿರುವ ಸಮುದಾಯಗಳಿಗೆ ಆರ್ಥಿಕ ಬಲ ನೀಡುವ ನಿಟ್ಟಿನಲ್ಲಿ ಜನಧನ್ ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

10 Years Of Jan Dhan Yojana: Over 53 Cr Beneficiaries, 2.31 Lakh Cr Balance
ಜನ್ ಧನ್ ಯೋಜನೆಗೆ 10 ವರ್ಷ: 53 ಕೋಟಿ ಫಲಾನುಭವಿಗಳು, 2.31 ಲಕ್ಷ ಕೋಟಿ ಬ್ಯಾಂಕ್​​​​ ಬ್ಯಾಲೆನ್ಸ್​ (ETV Bharat)

By ETV Bharat Karnataka Team

Published : Aug 28, 2024, 11:39 AM IST

ನವದೆಹಲಿ: ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ (ಪಿಎಂಜೆಡಿವೈ) ದಶಮಾನೋತ್ಸವದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಫಲಾನುಭವಿಗಳಿಗೆ ಬುಧವಾರ ಅಭಿನಂದನೆ ಸಲ್ಲಿಸಿದ್ದಾರೆ. ಇಂದು, ನಾವು ಜನ್ ಧನ್‌ ಯೋಜನೆ 10 ವರ್ಷಗಳನ್ನು ಪೂರೈಸಿರುವ ಮಹತ್ವದ ಸಂದರ್ಭದಲ್ಲಿದ್ದೇವೆ. ಎಲ್ಲ ಫಲಾನುಭವಿಗಳಿಗೆ ಅಭಿನಂದನೆಗಳು ಮತ್ತು ಈ ಯೋಜನೆಯನ್ನು ಯಶಸ್ವಿಗೊಳಿಸಲು ಶ್ರಮಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

ಜನ್ ಧನ್ ಯೋಜನೆಯು "ಹಣಕಾಸಿನ ಒಳಗೊಳ್ಳುವಿಕೆ ಹೆಚ್ಚಿಸಲು ಮತ್ತು ಕೋಟಿಗಟ್ಟಲೆ ಜನರಿಗೆ, ವಿಶೇಷವಾಗಿ ಮಹಿಳೆಯರು, ಯುವಕರು ಮತ್ತು ಬಡತನದ ಅಂಚಿನಲ್ಲಿರುವ ಸಮುದಾಯಗಳಿಗೆ ಸಾಮಾಜಿಕ ಘನತೆ ನೀಡುವಲ್ಲಿ" ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರಧಾನಿ ಮೋದಿ ನೆನಪಿಸಿಕೊಂಡಿದ್ದಾರೆ.

PMJDY ಕಾರ್ಯಕ್ರಮವನ್ನು ಪ್ರಧಾನಿ ಮೋದಿಯವರು ಆಗಸ್ಟ್ 28, 2014 ರಂದು ಪ್ರಾರಂಭಿಸಿದರು ಮತ್ತು ಇದು ವಿಶ್ವದ ಅತಿದೊಡ್ಡ ಹಣಕಾಸು ಸೇರ್ಪಡೆ ಯೋಜನೆಯಾಗಿದೆ. 53.14 ಕೋಟಿಗೂ ಹೆಚ್ಚು ಫಲಾನುಭವಿಗಳಿದ್ದು, ಒಟ್ಟು 2,31,236 ಕೋಟಿ ರೂ ಠೇವಣಿ ಕೂಡಾ ಸಂಹ್ರಹವಾಗಿದೆ. ಪಿಎಂಜೆಡಿವೈ ಖಾತೆಗಳು ಮಾರ್ಚ್ 2015 ರಲ್ಲಿ 15.67 ಕೋಟಿಯಿಂದ 3.6 ಪಟ್ಟು ಬೆಳೆದು ಆಗಸ್ಟ್ 14 ರ ಹೊತ್ತಿಗೆ 53.14 ಕೋಟಿಗೆ ಏರಿಕೆ ಕಂಡಿದೆ ಎಂದು ಹಣಕಾಸು ಸಚಿವಾಲಯವು ಇತ್ತೀಚಿನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನು ಓದಿ:ಸೆಪ್ಟೆಂಬರ್​​ನಲ್ಲಿ ಇವೆಲ್ಲ ಬದಲಾವಣೆ: ಈಗಲೇ ನಿಮ್ಮ ಬಜೆಟ್​​ನಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ, ಇಲ್ಲದಿದ್ದರೆ? - Major Rule Changes September

ಆರ್ಥಿಕ ಸಬಲೀಕರಣಕ್ಕೆ ಜನಧನ್​ ಪೂರಕ - ಸೀತಾರಾಮನ್:ಆರ್ಥಿಕ ಒಳಗೊಳ್ಳುವಿಕೆ ಮತ್ತು ಸಬಲೀಕರಣವನ್ನು ಸಾಧಿಸುವ ಸಲುವಾಗಿ ಔಪಚಾರಿಕ ಬ್ಯಾಂಕಿಂಗ್ ಸೇವೆಗಳಿಗೆ ಸಾರ್ವತ್ರಿಕ ಮತ್ತು ಕೈಗೆಟುಕುವ ಪ್ರವೇಶ ಅತ್ಯಗತ್ಯ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ. ಏಕೆಂದರೆ ಇದು ಬಡವರನ್ನು ಆರ್ಥಿಕ ಮುಖ್ಯವಾಹಿನಿಗೆ ತರುತ್ತದೆ ಮತ್ತು ಅಂಚಿನಲ್ಲಿರುವ ಸಮುದಾಯಗಳ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಜನ್ ಧನ್ ಯೋಜನೆಯು ಕಳೆದ ದಶಕದಲ್ಲಿ ದೇಶದ ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಿದೆ. ಈ ಬ್ಯಾಂಕ್ ಖಾತೆಗಳು 2.3 ಲಕ್ಷ ಕೋಟಿ ರೂ ಠೇವಣಿ ಸಂಗ್ರಹಕ್ಕೆ ಕಾರಣವಾಗಿವೆ. 36 ಕೋಟಿಗೂ ಹೆಚ್ಚು ಉಚಿತ ರುಪೇ ಕಾರ್ಡ್‌ಗಳ ವಿತರಣೆಗೆ ಕಾರಣವಾಗಿದೆ. ಈ ಖಾತೆ 2 ಲಕ್ಷ ರೂಪಾಯಿ ಅಪಘಾತ ವಿಮಾ ರಕ್ಷಣೆಯನ್ನು ಸಹ ಒದಗಿಸುತ್ತದೆ ಎಂದು ಸಚಿವ ಸೀತಾರಾಮನ್ ತಿಳಿಸಿದ್ದಾರೆ.

ವಿಶೇಷ ಎಂದರೆ ಈ ಖಾತೆ ತೆರೆಯಲು ಯಾವುದೇ ಶುಲ್ಕಗಳು ಅಥವಾ ನಿರ್ವಹಣೆ ಶುಲ್ಕಗಳು ಇಲ್ಲ. ಕನಿಷ್ಠ ಬ್ಯಾಲೆನ್ಸ್ ಕಾಪಾಡಿಕೊಳ್ಳಬೇಕು ಎಂಬ ನಿರ್ಬಂಧವೂ ಇದರಲ್ಲಿ ಇಲ್ಲ. PMJDY ಯೋಜನೆಯು ಪ್ರತಿ ಬ್ಯಾಂಕ್ ಮಾಡದ ವಯಸ್ಕರಿಗೆ ಒಂದು ಮೂಲ ಬ್ಯಾಂಕ್ ಖಾತೆಯನ್ನು ಒದಗಿಸುತ್ತದೆ. ಈ ಖಾತೆಗೆ, ಯಾವುದೇ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವಿಲ್ಲ ಮತ್ತು ಈ ಖಾತೆಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ.

PMJDY ಖಾತೆದಾರರು ತುರ್ತುಸ್ಥಿತಿಗಳನ್ನು ಸರಿದೂಗಿಸಲು 10,000 ವರೆಗಿನ ಓವರ್‌ಡ್ರಾಫ್ಟ್​ ಪಡೆಯಲು ಕೂಡಾ ಅರ್ಹರಾಗಿದ್ದಾರೆ. ಶೇ.67ರಷ್ಟು ಖಾತೆಗಳನ್ನು ಗ್ರಾಮೀಣ ಅಥವಾ ಅರೆನಗರ ಪ್ರದೇಶಗಳಲ್ಲಿ ತೆರೆಯಲಾಗಿದ್ದು, ಶೇ.55ರಷ್ಟು ಖಾತೆಗಳನ್ನು ಮಹಿಳೆಯರೇ ಓಪನ್​ ಮಾಡಿದ್ದಾರೆ ಎಂದು ಹಣಕಾಸು ಸಚಿವರು ಹೇಳಿದರು.

ಇದನ್ನು ಓದಿ:ದರ್ಶನ್ ಮತ್ತು ಸಹಚರರು ರಾಜ್ಯದ ವಿವಿಧ ಕಾರಾಗೃಹಗಳಿಗೆ ಸ್ಥಳಾಂತರ; ದಾಸ ಬಳ್ಳಾರಿ ಜೈಲಿಗೆ - DARSHAN JAIL SHIFT

ABOUT THE AUTHOR

...view details