ನವದೆಹಲಿ: ದೇಶದ ಪ್ರಖ್ಯಾತ ಸಿನಿಮಾ ಪ್ರದರ್ಶಕ ಕಂಪನಿ ಪಿವಿಆರ್ ಐನಾಕ್ಸ್ ಲಿಮಿಟೆಡ್ 200 ಕೋಟಿ ರೂಪಾಯಿ ವೆಚ್ಚದಲ್ಲಿ ಮುಂದಿನ ವರ್ಷ ಸುಮಾರು 100 ಹೊಸ ಸ್ಕ್ರೀನ್ಗಳನ್ನು ಸೇರ್ಪಡೆ ಮಾಡಲು ಯೋಜಿಸಿದೆ ಎಂದು ಅದರ ಕಾರ್ಯನಿರ್ವಾಹಕ ನಿರ್ದೇಶಕ ಸಂಜೀವ್ ಕುಮಾರ್ ಬಿಜ್ಲಿ ಶುಕ್ರವಾರ ತಿಳಿಸಿದ್ದಾರೆ. ಚಲನಚಿತ್ರಗಳ ಹುಡುಕಾಟ ಮತ್ತು ಬುಕಿಂಗ್ ಸೌಲಭ್ಯಕ್ಕಾಗಿ ಎಐ ಚಾಲಿತ ವಾಟ್ ಸಾಪ್ ಚಾಟ್ ಬಾಟ್, ಮೂವಿ ಜಾಕಿ (ಎಂಜೆ) ಅನ್ನು ಪ್ರಾರಂಭಿಸಿದ ಕಂಪನಿಯು ಪ್ರತಿವರ್ಷ 100 ಸ್ಕ್ರೀನ್ಗಳನ್ನು ಸೇರ್ಪಡೆ ಮಾಡಲು ಯೋಜಿಸಿದೆ.
45 - 50 ಸ್ಕ್ರೀನ್ಗಳನ್ನು ಸ್ಥಗಿತಗೊಳಿಸಿದ್ದೇವೆ:"ಈ ವರ್ಷ ಇಲ್ಲಿಯವರೆಗೆ ನಾವು ಸುಮಾರು 70 ಸ್ಕ್ರೀನ್ಗಳನ್ನು ಸೇರಿಸಿದ್ದೇವೆ ಮತ್ತು ಸುಮಾರು 45 - 50 ಸ್ಕ್ರೀನ್ಗಳನ್ನು ಸ್ಥಗಿತಗೊಳಿಸಿದ್ದೇವೆ. ನಾವು ಈ ವರ್ಷ ಇನ್ನೂ 40 ಸ್ಕ್ರೀನ್ಗಳನ್ನು ಸೇರಿಸಲಿದ್ದೇವೆ ಮತ್ತು 10-15 ಸ್ಕ್ರೀನ್ಗಳನ್ನು ಸ್ಥಗಿತಗೊಳಿಸಲಿದ್ದೇವೆ" ಎಂದು ಬಿಜ್ಲಿ ಪಿಟಿಐಗೆ ತಿಳಿಸಿದರು. ಈ ವರ್ಷ ಸುಮಾರು 75 ಚಿತ್ರಮಂದಿರಗಳನ್ನು ಮುಚ್ಚುವ ಮತ್ತು ಸುಮಾರು 120 ಚಿತ್ರಮಂದಿರಗಳನ್ನು ಸೇರಿಸುವ ಆಲೋಚನೆ ಇತ್ತು. ಸದ್ಯ ನಾವು ಅದೇ ಮಾರ್ಗದಲ್ಲಿ ಸಾಗುತ್ತಿದ್ದೇವೆ ಎಂದು ಅವರು ಹೇಳಿದರು.
ಅಸೆಟ್ ಲೈಟ್ ಮಾದರಿ ಅಳವಡಿಕೆಗೆ ಪ್ರಯತ್ನ:"ನಾವು ಈಗ ಅಸೆಟ್ ಲೈಟ್ ಮಾದರಿಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಡೆವಲಪರ್ಗಳು ದೊಡ್ಡ ಪ್ರಮಾಣದ ಹೂಡಿಕೆ ಮಾಡಲಿದ್ದಾರೆ" ಎಂದು ಅವರು ಹೇಳಿದರು. ಪ್ರಸ್ತುತ, ಪಿವಿಆರ್ ಐನಾಕ್ಸ್ ಭಾರತದಾದ್ಯಂತ 111 ನಗರಗಳಲ್ಲಿ 355 ಚಿತ್ರಮಂದಿರಗಳಲ್ಲಿ 1,744 ಸ್ಕ್ರೀನ್ಗಳನ್ನು ಹೊಂದಿದೆ.