ಕರ್ನಾಟಕ

karnataka

ETV Bharat / bharat

ಶುದ್ಧ ಸಸ್ಯಾಹಾರಿ ಗ್ರಾಹಕರಿಗಾಗಿ "ಪ್ಯೂರ್ ವೆಜ್ ಮೋಡ್" ಸೇವೆ ಆರಂಭಿಸಿದ ಜೊಮಾಟೊ - Zomato

ಶುದ್ಧ ಸಸ್ಯಾಹಾರಿ ಆಹಾರವನ್ನು ಆರ್ಡರ್​ ಮಾಡುವ ಗ್ರಾಹಕರಿಗಾಗಿ "ಪ್ಯೂರ್ ವೆಜ್ ಮೋಡ್" ಸೇವೆಯನ್ನು ಪ್ರಾರಂಭಿಸುವುದಾಗಿ ಜೊಮಾಟೊ ಘೋಷಿಸಿದೆ.

ಜೊಮಾಟೊ
ಜೊಮಾಟೊ

By ETV Bharat Karnataka Team

Published : Mar 19, 2024, 9:36 PM IST

ನವದೆಹಲಿ : ಜೊಮಾಟೊ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಅವರು ಶುದ್ಧ ಸಸ್ಯಾಹಾರಿ ಗ್ರಾಹಕರಿಗಾಗಿ "ಪ್ಯೂರ್ ವೆಜ್ ಮೋಡ್" ಸೇವೆ ಆರಂಭಿಸುವುದಾಗಿ ಮಂಗಳವಾರ ಘೋಷಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಸರಣಿ ಪೋಸ್ಟ್​ ಮಾಡಿರುವ ದೀಪಿಂದರ್ ಗೋಯಲ್ ಅವರು, ಜಾಗತಿಕವಾಗಿ ಭಾರತ ಅತಿ ಹೆಚ್ಚು ಸಸ್ಯಾಹಾರಿಗಳನ್ನು ಹೊಂದಿರುವ ದೇಶವಾಗಿದೆ. ಆದ್ದರಿಂದ ಹೊಸ ಸೇವೆ ಪ್ರಾರಂಭಿಸಲು ಸಸ್ಯಾಹಾರಿ ಗ್ರಾಹಕರ ಪ್ರತಿಕ್ರಿಯೆಗಳ ಆಧಾರದ ಮೇಲೆ ಆನ್‌ಲೈನ್ ಆಹಾರ ವಿತರಣಾ ವೇದಿಕೆಯಾದ ಜೊಮಾಟೊ ಶೇ 100 ರಷ್ಟು ಶುದ್ಧ ಸಸ್ಯಾಹಾರಿ ಆಹಾರ ಅನುಸರಿಸುವ ಗ್ರಾಹಕರಿಗೆ ಭಾರತದಲ್ಲಿ "ಪ್ಯೂರ್ ವೆಜ್ ಫ್ಲೀಟ್" ಅನ್ನು ಪರಿಚಯಿಸುತ್ತಿದೆ ಎಂದು ತಿಳಿಸಿದ್ದಾರೆ.

ಗ್ರಾಹಕರಿಂದ ನಾವು ಪಡೆದ ಪಡೆದ ಪ್ರಮುಖ ಪ್ರತಿಕ್ರಿಯೆ ಎಂದರೆ, ಸಸ್ಯಾಹಾರಿ ಆಹಾರವನ್ನು ಹೇಗೆ ತಯಾರಿಸುತ್ತೀರಾ? ಆಹಾರವನ್ನು ಹೇಗೆ ನಿರ್ವಹಿಸುತ್ತೀರಾ? ಎಂಬುದರ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಇಂತಹ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮಾಂಸಾಹಾರಿ ಆಹಾರಗಳನ್ನು ನೀಡುವ ಯಾವುದೇ ಸಂಸ್ಥೆಗಳನ್ನು ಹೊರತುಪಡಿಸಿ, ಪ್ರತ್ಯೇಕವಾಗಿ ಸಸ್ಯಾಹಾರಿ ಆಹಾರವನ್ನು ನೀಡುವ ರೆಸ್ಟೋರೆಂಟ್‌ಗಳ ಆಯ್ಕೆಯನ್ನು "ಪ್ಯೂರ್ ವೆಜ್ ಮೋಡ್" ಒಳಗೊಂಡಿದೆ. ಈ ಮೋಡ್ ಯಾವುದೇ ಧಾರ್ಮಿಕ ಅಥವಾ ರಾಜಕೀಯ ಆದ್ಯತೆಗಳನ್ನು ಪೂರೈಸುವುದಿಲ್ಲ. ಸಸ್ಯಾಹಾರಿ ಆಹಾರಗಳನ್ನು ಆರ್ಡರ್​ ಮಾಡಿದಾಗ ಕೆಂಪು ಬಣ್ಣಗಳ ಬದಲಿಗೆ ಹಸಿರು ಡೆಲಿವರಿ ಬಾಕ್ಸ್‌ಗಳನ್ನು ನೀಡಲಾಗುವುದು ಎಂದು ಗೋಯಲ್ ಸ್ಪಷ್ಟಪಡಿಸಿದ್ದಾರೆ.

ವಿಶೇಷವೆಂದರೆ ಆಹಾರವನ್ನು ಡೆಲಿವರಿ ಮಾಡುವವರು ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್‌ಗಳಿಂದ ಪ್ರತ್ಯೇಕವಾಗಿ ಆರ್ಡರ್‌ಗಳನ್ನು ತಲುಪಿಸುತ್ತಾರೆ. ಯಾವುದೇ ಮಾಂಸಾಹಾರಿ ಆಹಾರದ ಡೆಲಿವರಿಯನ್ನು ಮಾಡುವುದಿಲ್ಲ. ಅಲ್ಲದೇ, ಹಸಿರು ಬಣ್ಣದ ಡೆಲಿವರಿ ಬಾಕ್ಸ್​ನೊಂದಿಗೆ ಮಾಂಸಾಹಾರಿ ರೆಸ್ಟೋರೆಂಟ್‌ಗಳಿಗೆ ಪ್ರವೇಶಿಸುವುದನ್ನು ನಿಷೇದಿಸಲಾಗಿದೆ ಎಂದು ಗೋಯಲ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ :ಬೇಸಿಗೆಯಲ್ಲಿ ನಿಮ್ಮ ಮಕ್ಕಳಿಗೆ ಬೇಕು ಟೇಸ್ಟಿ ಮತ್ತು ಆರೋಗ್ಯಕರವಾದ ಈ ತಿನಿಸುಗಳು

ABOUT THE AUTHOR

...view details