ಕರ್ನಾಟಕ

karnataka

ETV Bharat / bharat

ಕನಸಿಗೆ ನೆರವಾದ ಸೋಷಿಯಲ್​ ಮೀಡಿಯಾ; ಹೀಗಿದೆ ಕಣಿವೆಯ ಮಹಿಳಾ ಉದ್ಯಮಿಗಳ ಯಶೋಗಾಥೆ.. ಅಷ್ಟಕ್ಕೂ ಏನಿವರ ಸಾಧನೆ? - INSPIRING STORY FOR BUSSINESS

ಸಾಮಾಜಿಕ ಮಾಧ್ಯಮಗಳು - ತಂತ್ರಜ್ಞಾನಗಳು ಅನೇಕ ಜನರಿಗೆ ಯಶಸ್ವಿ ಉದ್ಯಮಿಗಳಾಗಿ ರೂಪಿಸಿದೆ. ಕಣಿವೆ ನಾಡಿನಲ್ಲಿ ಈ ರೀತಿ ಬದುಕು ಕಟ್ಟಿಕೊಂಡಿರುವ ಕುರಿತ ಫರ್ವೇಜ್​​​ ಉದ್​ ದಿನ್​ ಅವರ ಲೇಖನ ಇಲ್ಲಿದೆ.

youth-becoming-self-sufficient-in-online-business
ಉದ್ಯಮದಲ್ಲಿ ಯಶಸ್ಸುಕಂಡ ಶೇಕ್​ ಆಸೀಫ್ (ಈಟಿವಿ ಭಾರತ್​)

By ETV Bharat Karnataka Team

Published : Nov 8, 2024, 4:53 PM IST

ಶ್ರೀನಗರ, ಜಮ್ಮು- ಕಾಶ್ಮೀರ: ಸಾಮಾಜಿಕ ಮಾಧ್ಯಮಗಳು ಮತ್ತು ತಂತ್ರಜ್ಞಾನಗಳು ಉದ್ಯಮದ ಅವಕಾಶವನ್ನು ಹೆಚ್ಚಿಸಿದೆ. ಅದರಲ್ಲೂ ಮಹಿಳೆಯರು ತಮ್ಮ ಸ್ಮಾರ್ಟ್​​ಫೋನ್​ ಮತ್ತು ಲ್ಯಾಪ್​ಟಾಪ್​ ಬಳಕೆ ಮಾಡಿಕೊಂಡು ಸುಲಭವಾಗಿ ಗ್ರಾಹಕರನ್ನು ತಲುಪುವಂತಾಗಿದೆ. ಇಂದು, ಕೇವಲ ಯುವಕರು ಮಾತ್ರವಲ್ಲದೇ, ಯುವತಿಯರು ಕೂಡ ಮನೆಯಿಂದಲೇ ಯಶಸ್ವಿ ಉದ್ಯಮ ನಡೆಸುತ್ತಿದ್ದಾರೆ. ಲಾಕ್​ಡೌನ್​ ಸಮಯದಲ್ಲಿ ಆನ್​ಲೈನ್​ ಅಥವಾ ಡಿಜಿಟಲ್​ ಉದ್ಯಮವೂ ಹೆಚ್ಚು ಗಮನವನ್ನು ಸೆಳೆಯಿತು. ವಿಶೇಷವಾಗಿ ಆರ್ಥಿಕ ಬಿಕ್ಕಟ್ಟಿನ ನಡುವೆ ಮನೆಯ ಹಣಕಾಸು ನಿರ್ವಹಣೆಯಲ್ಲಿ ಮಹಿಳೆಯರ ಬೆಂಬಲ ಅತ್ಯಗತ್ಯವಾಗಿದೆ.

ನೈಸರ್ಗಿಕ ಉತ್ಪನ್ನಗಳ ಉದ್ಯಮದಲ್ಲಿ ಯಶಸ್ಸು: ಈ ಕುರಿತು ಮಾತನಾಡಿರುವ ಶ್ರೀನಗರ್​ ಭಗತ್​ನ 40 ವರ್ಷದ ಸನ ಅಫ್ತಬ್​, ಉದ್ಯಮದ​ ಆರಂಭದ ಗಾತ್ರಕ್ಕಿಂತ ಅದನ್ನು ಪ್ರಾರಂಭಿಸಲು ಧೈರ್ಯಬೇಕು ಎಂದಿದ್ದಾರೆ. 'ಸಾಮಾಜಿಕ ಜಾಲತಾಣದ ಮೂಲಕ ಕೆಲವು ವರ್ಷಗಳ ಹಿಂದೆ ನೈಸರ್ಗಿಕ ಸೋಪ್​, ಸೌಂದರ್ಯ ವರ್ಧಕಗಳ ಉತ್ಪನ್ನಗಳನ್ನು ಆನ್​ಲೈನ್​ ಡೆಲಿವರಿ ಆರಂಭಿಸಿದೆ. ಆರಂಭದಲ್ಲಿ ಹೋಮ್​ಮೇಡ್​ ಸೋಪ್​ ತಯಾರಿಸಿದ್ದು, ಬಳಿಕ ಅಡುಗೆ ಮನೆಯ ಉತ್ಪನ್ನಗಳಿಂದ ಕೂಡಿದ ಮೌಂಟೇನ್​​ ಸೋಪ್ ಆರಂಭಿಸಿದೆ. ತನ್ನ ಈ ವಸ್ತುಗಳನ್ನು ಇನ್​​​​ಸ್ಟಾಗ್ರಾಂ ಮತ್ತು ಫೇಸ್​ಬುಕ್​ ಮೂಲಕ ಪ್ರಚಾರ ನಡೆಸಿದೆ. ತಕ್ಷಣಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾದವು. ಬೇಡಿಕೆ ಹೆಚ್ಚಿದಂತೆ ಸನಾ ತನ್ನ ಉತ್ಪನ್ನಗಳ ವಿಸ್ತರಣೆಯನ್ನು ಹೆಚ್ಚಿಸಿ, ಆರ್ಗ್ಯಾನಿಕ್​​ ​ ಸೋಪ್​ ಜೊತೆಗೆ ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟ ಪ್ರಾರಂಭಿಸಿದೆ ಎನ್ನುತ್ತಾರೆ'. ​

ಎನ್​ಐಟಿಯಲ್ಲಿ ಎಂಬಿಎ ಪದವೀಧರೆಯಾಗಿರುವ ಸನಾ ಅಫ್ತಾಬ್​​​ನ ಪೆರ್ಡೆಕ್ಸ್ ಉದ್ಯಮದಲ್ಲಿ​ ಆರಂಭದಲ್ಲಿ ಸೀಮಿತ ಗ್ರಾಹಕರನ್ನು ಹೊಂದಿದ್ದರು. ಇಂದು ಇವರು ಕೇವಲ ಜಮ್ಮು ಮತ್ತು ಕಾಶ್ಮೀರದಿಂದ ಮಾತ್ರವಲ್ಲ, ದೇಶದ ಇತರ ಭಾಗಗಳಿಂದಲೂ ಬೇಡಿಕೆ ಹೊಂದಿದ್ದಾರೆ. ಪ್ರತಿಯೊಬ್ಬರಿಗೂ ಆರಂಭ ಎಂಬುದಕ್ಕೆ ಗಮನ ನೀಡಿದೆ. ಡಿಜಿಟಲ್​ ಮಾರ್ಕೆಟ್​ ನನ್ನ ಉದ್ಯಮಕ್ಕೆ ಸಾಕಷ್ಟು ಲಾಭ ನೀಡಿತು. ಆದಾಗ್ಯೂ ಇದು ಸುಲಭವಾಗಿರಲಿಲ್ಲ. ನಿಮಗೆ ಜ್ಞಾನವಿದ್ಧರೆ, ಅದರ ಸವಾಲುಗಳನ್ನು ಮೆಟ್ಟಿ ನಿಲ್ಲಬಹುದಾಗಿದೆ. ಸಣ್ಣ ನಗರದ ಮಹಿಳೆಯರಿಗೆ ಈ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮ ಅನೇಕ ಅವಕಾಶ ನೀಡಿದೆ. ಭವಿಷ್ಯದಲ್ಲಿ ಕೂಡ ಅನೇಕ ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಾರೆ ಎಂಬ ಭರವಸೆ ಇದೆ.

ಕಲಿಕೆ ನಿಂತರೂ ಬದುಕಿಗೆ ನೆರವಾದ ತಂತ್ರಜ್ಞಾನ: ಇನ್ನು ಶ್ರೀನಗರದ ಬತಮಲೊದ 30 ವರ್ಷದ ಶೇಕ್​ ಆಸೀಫ್ ಹಣಕಾಸು ಮುಗ್ಗಟ್ಟಿನಿಂದ​​ 8ನೇ ತರಗತಿ ಇರುವಾಗಲೇ ಕಲಿಕೆಯಿಂದ ದೂರ ಉಳಿದರು. ಆದಾಗ್ಯೂ, ನಂತರದ ದಿನದಲ್ಲಿ ಇನ್ಫೋಟೆಕ್​ನಿಂದ ಪ್ರಯೋಜನ ಪಡೆದವರು. ವೆಬ್​ ಡಿಸೈನಿಂಗ್​ ಮತ್ತು ಡೆವಲ್ಮೆಂಟ್​ನಲ್ಲಿ ತಜ್ಞರಾದರು. ಇಂದು ಆಸೀಫ್​ ಆನ್​ಲೈನ್​ ಕಂಪ್ಯೂಟರ್​ ತರಬೇತಿ ನೀಡುತ್ತಿದ್ದಾರೆ. ತಮ್ಮಂತೆ ಕಲಿಕೆ ಅಪೂರ್ಣಗೊಂಡವರಿಗೆ ಕಲಿಸಿ ಇತರರಿಗೆ ಮಾದರಿಯಾಗಿದ್ದಾರೆ.

'2019ರ ನಂತರ ಅನೇಕ ಜನರು ಆನ್​ಲೈನ್​ ಉದ್ಯಮ ಆರಂಭಿಸುವಂತೆ ಸಲಹೆ ನೀಡಿದರು. ಇದಕ್ಕೆ ಮುಂಚೆ ಆಫ್​ಲೈನ್​ ಉದ್ಯಮ, ಹೆಚ್ಚು ನೈಜ ಮತ್ತು ಲಾಭದಾಯಕವಾಗಿತ್ತು. ಇವರ ಪ್ರಕಾರ, ಕಾಶ್ಮೀರದಲ್ಲಿ ವಿದ್ಯಾವಂತ ಯುವಕರು ಹೆಚ್ಚು ಆನ್​ಲೈನ್​ ಉದ್ಯಮದ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಕಡಿಮೆ ಬಂಡವಾಳ. ಆನ್​ಲೈನ್​ ಮೂಲಕವೇ ಆರ್ಡರ್​ ಕೋರಿಯರ್​ ಮೂಲಕ ಉತ್ಪನ್ನ ಸಾಗಣೆ ಮಾಡುತ್ತಿದ್ದಾರೆ'.

ಐತಿಹಾಸಿಕವಾಗಿ ಮಹಿಳೆಯರು ಉದ್ಯಮ ಜಗತ್ತಿನಲ್ಲಿ ಲಿಂಗ ತಾರತಮ್ಯ ಅನುಭವಿಸುತ್ತಾರೆ. ಆದಾಗ್ಯೂ, ಸಾಮಾಜಿಕ ಮಾಧ್ಯಮ ಮತ್ತು ಆನ್​ಲೈನ್​ ತಾಣಗಳು ಅನೇಕ ವಲಯದಲ್ಲಿ ಪುರುಷರ ಅಧಿಪತ್ಯವನ್ನು ಮುರಿಯಲು ಸಹಾಯ ಮಾಡಿದೆ. ಇದರಿಂದ ಕೂಡ ಮಹಿಳೆಯರು ಸಾಕಷ್ಟು ಹಣಗಳಿಸುತ್ತಿದ್ದಾರೆ.

ಬೇಕಿಂಗ್​ನಲ್ಲಿ ಯಶಸ್ಸು: ಸನಾ ಇಮ್ತಿಯಾಸ್​ ಹೋಮ್​ ಬೇಕರ್​ ಆಗಿದ್ದು, ವಿಶಿಷ್ಟ ರೀತಿಯ, ವಿನ್ಯಾಸ ಮತ್ತು ರಚನೆಯ ಕೇಕ್​ ತಯಾರು ಮಾಡುತ್ತಿದ್ದಾರೆ. ದಿನಕ್ಕೆ ನಾಲ್ಕರಿಂದ ಐದು ಆರ್ಡರ್​ ಪಡೆಯುತ್ತಿದ್ದಾರೆ. 2017ರಿಂದ ತಮ್ಮ ಮನೆಯಲ್ಲಿನ ಒಂದು ಕೋಟೆಯಲ್ಲಿ ಹೋಮ್​ ಬೇಕಿಂಗ್​ ಉದ್ಯಮ ಆರಂಭಿಸಿದ್ದಾರೆ. ಇದೀಗ ಇವರು ಮಾತ್ರವಲ್ಲದೇ, ನಾಲ್ಕು ಜನ ಮಹಿಳೆಯರಿಗೆ ಕೆಲಸ ನೀಡಿದ್ದಾರೆ. 'ಸ್ವೀಟ್​ ಟೆಮ್ಟೇಷನ್'​ ಎಂಬ ಹೆಸರಿನಲ್ಲಿ ಸನಾ ಸಾಮಾಜಿಕ ಜಾಲತಾಣದಲ್ಲಿ ಕೇಕ್​ ವಿನ್ಯಾಸ ಶೇರ್​ ಮಾಡುತ್ತಾರೆ. ಈ ಮೂಲಕ ಮದುವೆ, ಹುಟ್ಟುಹಬ್ಬ ಸೇರಿದಂತೆ ಇತರ ಸಂದರ್ಭದಲ್ಲಿ ಆರ್ಡರ್​​ ಪಡೆಯುತ್ತಾರೆ.

'ಬಾಲ್ಯದಿಂದಲೇ ಸನಾಗೆ ಈ ಬೇಕಿಂಗ್​ ಆಸಕ್ತಿ ಇತ್ತಂತೆ, ಇದು ಬಳಿಕ ಉದ್ಯಮದ ಪ್ಯಾಷನ್​ ಆಗಿ ರೂಪುಗೊಂಡು ಅದರಲ್ಲಿಯೇ ಕೋರ್ಟ್​ ಮಾಡಿದರು. ನನ್ನ ಆನ್​ಲೈನ್​ ಉದ್ಯಮವೂ ದಿನದಿಂದ ದಿನಕ್ಕೆ ಬೆಳವಣಿಗೆ ಕಾಣುತ್ತಿದೆ. ಇನ್​ಸ್ಟಾಗ್ರಾಂ ಮತ್ತು ಫೇಸ್​ಬುಕ್​ ನನ್ನ ಉದ್ಯಮವನ್ನು ಹೆಚ್ಚಿಸುವ ಜೊತೆಗೆ ಹೊಸ ಗ್ರಾಹಕರನ್ನು ನೀಡುವಲ್ಲಿ ಸಹಾಯ ಮಾಡಿತ್ತು. ಡಿಜಿಟಲ್​ ಮಾರ್ಕೆಟಿಂಗ್​ ದೊಡ್ಡ ಮಟ್ಟದ ಗ್ರಾಹಕರನ್ನು ಕ್ಷಣಮಾತ್ರದಲ್ಲಿ ತಲುಪುವಂತೆ ಮಾಡಿತು. ನನ್ನ ಗ್ರಾಹಕರಿಗೆ ಮನೆಯಲ್ಲಿಯೇ ಕುಳಿತು ಶಾಪಿಂಗ್​ ಮಾಡುವ ಸೌಲಭ್ಯವನ್ನು ನೀಡಿತು' ಎನ್ನುತ್ತಾರೆ ಅವರು.

ಇದನ್ನೂ ಓದಿ: ಆನ್​ಲೈನ್​ ಮೆಡಿಸಿನ್ ಕ್ಷೇತ್ರಕ್ಕೆ ಲಗ್ಗೆಯಿಟ್ಟ ಅಮೆಜಾನ್: ಬೆಂಗಳೂರಿನಲ್ಲಿ ಸೇವೆ ಪ್ರಾರಂಭ

ABOUT THE AUTHOR

...view details