ಕರ್ನಾಟಕ

karnataka

ETV Bharat / bharat

ಆನ್​ಲೈನ್​ ಗೇಮಿಂಗ್​ ಚಟಕ್ಕೆ ಹಣ ಸುರಿದ ಯುವಕ; ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ - Online Gaming Addiction - ONLINE GAMING ADDICTION

ದಿಢೀರ್​​ ಶ್ರೀಮಂತರಾಗಲು ಸಾಮಾನ್ಯ ಜನರು ಈ ರೀತಿಯ ಶಾರ್ಟ್‌ಕಟ್‌ಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಬಳಿಕ, ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

youth-addicted-to-online-gaming-allegedly-died-by-suicide
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Jul 12, 2024, 1:13 PM IST

ರಾಜಸ್ಥಾನ​: ಆನ್​ಲೈನ್​ ಗೇಮಿಂಗ್​ ಗೀಳಿಗೆ ಒಳಗಾಗಿದ್ದ 22 ವರ್ಷದ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ರಾಜಸ್ಥಾನದ ರಾಜಸ್ಮಂದ್​ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಬಿಕಾವಸ್ ಗ್ರಾಮದ ರೇಗಾರ್ ಬಸ್ತಿ ನಿವಾಸಿ ಶಿವರಾಜ್​ ಸಾವನ್ನಪ್ಪಿದ್ದಾನೆ. ಆನ್​ಲೈನ್​ ಆಟದ ಚಟಕ್ಕೆ ಒಳಗಾಗಿದ್ದ ಯುವಕ, ತನ್ನ ಉಳಿತಾಯದ ಹಣವನ್ನೆಲ್ಲ ಇದಕ್ಕೆ ಸುರಿದಿದ್ದಾನೆ. ಅಲ್ಲದೇ, ಪೋಷಕರ ಅಕೌಂಟ್​ನಿಂದಲೂ 70 ಸಾವಿರ ಹಣ ಡ್ರಾ ಮಾಡಿ, ಅದನ್ನೂ ಗೇಮಿಂಗ್​ಗೆ ಬಳಕೆ ಮಾಡಿದ್ದ. ಆದರೆ, ಆಟದಲ್ಲಿ ಸೋತ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗಂಭೀರ ಸ್ಥಿತಿಯಲ್ಲಿದ್ದ ಯುವಕನನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅಮೆಟ್​ ಪೊಲೀಸ್​​ ಠಾಣೆ ಸಬ್​ ಇನ್ಸ್​​ಪೆಕ್ಟರ್​​ ಭುರ್ಸಿಂಗ್​​, ಶಾಪ್‌ವೊಂದರಲ್ಲಿ ಶಿವರಾಜ್​ ಕೆಲಸ ಮಾಡುತ್ತಿದ್ದ. ಆನ್​ಲೈನ್​ ಗೇಮಿಂಗ್​ ಚಟಕ್ಕೆ ಒಳಗಾಗಿದ್ದ. ತನ್ನೆಲ್ಲಾ ಉಳಿತಾಯದ ಹಣವನ್ನು ಗೇಮ್ಸ್​​ಗೆ ವ್ಯಯಿಸಿದ್ದ. ಪೋಷಕರ ಉಳಿತಾಯ ಖಾತೆಯಿಂದ 70 ಸಾವಿರ ಹಣ ಡ್ರಾ ಮಾಡಿ ಅದನ್ನೂ ಆನ್​ಲೈನ್​ ಗೇಮಿಂಗ್​ಗೆ ಬಳಕೆ ಮಾಡಿದ್ದ. ಇದರಿಂದ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ತೀವ್ರವಾಗಿ ಮುಜುಗರಗೊಂಡಿದ್ದ" ಎಂದು ಮಾಹಿತಿ ನೀಡಿದರು.

ಆತ್ಮಹತ್ಯೆ ಪರಿಹಾರವಲ್ಲ: ಆತ್ಮಹತ್ಯೆಯಂತಹ ಯೋಚನೆ ಹೊಂದಿದಲ್ಲಿ ಅಥವಾ ಈ ವಿಚಾರದಲ್ಲಿ ಸ್ನೇಹಿತರ ಬಗ್ಗೆ ಚಿಂತೆಗೆ ಒಳಗಾಗಿದ್ದರೆ ಅಥವಾ ಯಾವುದೇ ಭಾವನಾತ್ಮಕ ಬೆಂಬಲ ಬೇಕೆಂದು ಅನಿಸಿದ್ದಲ್ಲಿ, ನಿಮಗೆ ಸಾಂತ್ವನ ನೀಡಲು ಸದಾ ಒಬ್ಬರಿದ್ದಾರೆ ಎಂಬುದನ್ನು ಮರೆಯಬೇಡಿ. ಇದಕ್ಕಾಗಿ ಆರೋಗ್ಯ ಇಲಾಖೆಯ ಟೆಲಿ ಮಾನಸ್​ ಟೋಲ್​ ಫ್ರಿ ಸಂಖ್ಯೆ 14416 ಅಥವಾ 1-800-891-4416 ಕರೆ ಮಾಡಬಹುದು. ನಿಮ್ಮದೇ ಭಾಷೆಯಲ್ಲಿ ಅವರು ವ್ಯವಹರಿಸುತ್ತಾರೆ.

ಇದನ್ನೂ ಓದಿ: ಅಧಿಕಾರ ದುರ್ಬಳಕೆ ಆರೋಪ: ಪ್ರೊಬೇಷನರಿ ಅವಧಿಯಲ್ಲೇ ಐಎಎಸ್​ ಅಧಿಕಾರಿ ಎತ್ತಂಗಡಿ

ABOUT THE AUTHOR

...view details