ಕರ್ನಾಟಕ

karnataka

ETV Bharat / bharat

ಟಿವಿ ಆ್ಯಂಕರ್​ನ ಕಿಡ್ನಾಪ್ ಮಾಡಿ, ಮದುವೆಗೆ ಬೇಡಿಕೆಯಿಟ್ಟ ಯುವತಿ! ಇದರ ಹಿಂದಿದೆ ಕುತೂಹಲಕಾರಿ ಕಹಾನಿ - TV anchor kidnapped in Hyderabad

ಹೈದರಾಬಾದ್​ನಲ್ಲಿ ತೆಲುಗು ಟಿವಿ ಚಾನೆಲ್​ನ ಆ್ಯಂಕರ್​ನನ್ನು ಅಪಹರಿಸಿ, ಮದುವೆಗೆ ಬೇಡಿಕೆಯಿಟ್ಟ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.

Young woman arrested for kidnapping TV anchor in Hyderabad
ಟಿವಿ ಆ್ಯಂಕರ್​ನ ಕಿಡ್ನಾಪ್ ಮಾಡಿ, ಮದುವೆಗೆ ಬೇಡಿಕೆಯಿಟ್ಟ ಯುವ

By ETV Bharat Karnataka Team

Published : Feb 23, 2024, 8:57 PM IST

ಹೈದರಾಬಾದ್​ (ತೆಲಂಗಾಣ):ತೆಲುಗು ಟಿವಿ ಚಾನೆಲ್​ನಲ್ಲಿ ಆ್ಯಂಕರ್ ಕೆಲಸ ಮಾಡುತ್ತಿದ್ದ ಪ್ರಣವ್​ ಎಂಬುವರನ್ನು ಅಪಹರಿಸಿದ ಆರೋಪದ ಮೇಲೆ ಯುವತಿಯೊಬ್ಬಳನ್ನು ಹೈದರಾಬಾದ್​ ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವ ಇಚ್ಛೆಯಿಂದ ಈ ಕಿಡ್ನಾಪ್ ಮಾಡಿರುವುದಾಗಿ ಆರೋಪಿ ಯುವತಿ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ತ್ರಿಷ್ಣಾ ಎಂಬ ಯುವತಿಯೇ ಬಂಧನಕ್ಕೊಳಗಾಗಿದ್ದು, ಇದೇ ಫೆಬ್ರವರಿ 10ರಂದು ಮಧ್ಯರಾತ್ರಿ ಪ್ರಣಣ್​ ಅವರನ್ನು ಮದುವೆಯಾಗಲು ಐದು ಜನರೊಂದಿಗೆ ಸೇರಿಕೊಂಡು ಕಿಡ್ನಾಪ್ ಮಾಡಿದ್ದಳು. ನಂತರ ರಾತ್ರಿಯಿಡೀ ಕೋಣೆಯಲ್ಲಿ ಇರಿಸಿ, ತನ್ನನ್ನು ಮದುವೆಯಾಗುವಂತೆ ಬೇಡಿಕೆ ಇರಿಸಿದ್ದಳು. ಇದಾದ ಬಳಿಕ ಫೆ.11ರಂದು ಪ್ರಣಬ್​ ಅವರನ್ನು ಬಿಡುಗಡೆ ಮಾಡಿದ್ದಳು. ಅಲ್ಲಿಂದ ಬಂದ ಪ್ರಣವ್ ಉಪ್ಪಾಲ್ ಠಾಣೆಯ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿ ತ್ರಿಷ್ಣಾಳನ್ನು ಬಂಧಿಸಿದ್ದಾರೆ.

ಫೋಟೋ ನೋಡಿ ಚಾಟ್ ಮಾಡಿ ಅವಾಂತರ: ಈ ಘಟನೆ ಬಗ್ಗೆ ಮಾಹಿತಿ ನೀಡಿದ ಎಸಿಪಿ ಪುರುಷೋತ್ತಮ ರೆಡ್ಡಿ, ಪ್ರಣವ್ ಸಾಫ್ಟ್​ವೇರ್​ ಇಂಜಿನಿಯರ್​ ಆಗಿದ್ದು, ಟಿವಿ ಚಾನೆಲ್​ನಲ್ಲಿ ಪಾರ್ಟ್​ಟೈಮ್​ ಆ್ಯಂಕರಿಂಗ್​ ಸಹ ಮಾಡುತ್ತಿದ್ದಾರೆ. ಆರೋಪಿ ತ್ರಿಷ್ಣಾ ಡಿಜಿಟಲ್ ಮಾರ್ಕೆಟಿಂಗ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ಮ್ಯಾಟ್ರಿಮೋನಿ ಸೈಟ್‌ವೊಂದರಲ್ಲಿ ಪ್ರಣವ್ ಫೋಟೋಗಳ ಬಳಕೆ ಮಾಡಿ ಯಾರೋ ಖಾತೆಯನ್ನು ಸೃಷ್ಠಿಸಿದ್ದರು. ಈ ಫೋಟೋಗಳನ್ನು ನೋಡಿದ ತ್ರಿಷ್ಣಾ, ಈ ಖಾತೆಯು ನಿಜವಾಗಿಯೂ ಪ್ರಣವ್ ಅವರದ್ದೇ ಇರಬೇಕೆಂದು ಭಾವಿಸಿದ್ದಳು ಎಂದು ತಿಳಿಸಿದರು.

ಹೀಗಾಗಿ ಪ್ರಣವ್ ಎಂದೇ ತಿಳಿದು ನಿರಂತರವಾಗಿ ತ್ರಿಷ್ಣಾ ಚಾಟ್​ ಮಾಡುತ್ತಿದ್ದಳು. ಆದರೆ, ಒಂದು ದಿನ ಏಕಾಏಕಿ ಚಾಟಿಂಗ್ ಮಾಡುವುದು ಬಂದ್​ ಆಗಿದೆ. ಆಗ ಪ್ರಣವ್​ ತನ್ನನ್ನು ನಿರ್ಲಕ್ಷಿಸುತ್ತಿದ್ದಾನೆ ಎಂಬ ಭಾವನೆ ಆಕೆಯಲ್ಲಿ ಮೂಡಿದೆ. ಅಲ್ಲದೇ, ಆತನ ಜಾಡನ್ನು ತ್ರಿಷ್ಣಾ ಪತ್ತೆ ಹಚ್ಚಲು ಹೋದಾಗ ಚೈತನ್ಯ ರೆಡ್ಡಿ ಎಂಬಾತ ಪ್ರಣವ್ ಫೋಟೋಗಳ ಬಳಸಿ ಚಾಟ್ ಮಾಡುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಇದಾದ ಬಳಿಕ ಸ್ವತಃ ತ್ರಿಷ್ಣಾಳೇ ಪ್ರಣವ್​ ಅವರನ್ನೂ ಸಂಪರ್ಕಿಸಿ ಮ್ಯಾಟ್ರಿಮೋನಿ ಸೈಟ್‌ವೊಂದರಲ್ಲಿ ಆತನ ಫೋಟೋಗಳ ಬಳಕೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾಳೆ. ಇದರಿಂದ ಆಗಲೇ ಪ್ರಣವ್​ ತನ್ನ ಫೋಟೋಗಳನ್ನು ಬೇರೆಯವರು ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿ ಪೊಲೀಸರಿಗೆ ದೂರು ನೀಡಿದ್ದರು. ಇದರ ನಂತರ ನೇರವಾಗಿ ಪ್ರಣವ್​ ಜೊತೆಗೆ ತ್ರಿಷ್ಣಾ ಮಾತನಾಡುವುದನ್ನು ಶುರು ಮಾಡಿದ್ದಳು ಎಂದು ಎಸಿಪಿ ಮಾಹಿತಿ ನೀಡಿದರು.

ಇದರ ನಡುವೆ ಇದೇ ತಿಂಗಳ 10ರಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರಣವ್ ಅವರನ್ನು ಐದು ಜನರೊಂದಿಗೆ ಸೇರಿ ಕಿಡ್ನಾಪ್ ಮಾಡಿದ್ದಾಳೆ. ಆಗ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಈ ವೇಳೆ, ಪ್ರಣವ್ ಉಪಾಯ ಮಾಡಿ ಅವರಿಂದ ತಪ್ಪಿಸಿಕೊಂಡು ಹೊರ ಬಂದಿದ್ದಾರೆ. ನಂತರ ತನ್ನ ಕಿಡ್ನಾಪ್​ ಮಾಡಿರುವ ಬಗ್ಗೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಯುವತಿಯನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ:ಪ್ರೀತಿ ತಿರಸ್ಕರಿಸಿದ್ದ ಶಿಕ್ಷಕನ ಮೇಲೆ ದ್ವೇಷ - ಪತ್ನಿ, ಪುತ್ರಿಯ ಮಾನಹಾನಿ: ಪೋಕ್ಸೋ ಕಾಯ್ದೆಯಡಿ ಯುವತಿ ಅರೆಸ್ಟ್

ABOUT THE AUTHOR

...view details