ಹೈದರಾಬಾದ್: ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದು ಪ್ರತಿಭೆ ಇರುತ್ತದೆ. ಕೆಲವರು ಈ ಪ್ರತಿಭೆಯನ್ನು ಪತ್ತೆ ಮಾಡಿ ಸಮಾಜದ ಮುಂದೆ ಪ್ರದರ್ಶಿಸಿ, ಇದಕ್ಕೆ ಉತ್ತಮ ಮಾರ್ಗ ಕಲ್ಪಿಸುತ್ತಾರೆ. ಉತ್ತಮ ಪ್ರದರ್ಶನದ ಕಾರಣದಿಂದಲೇ ಕೆಲವು ಮಂದಿ ಸೂಕ್ತ ವೇದಿಕೆಯನ್ನು ಪಡೆಯುತ್ತಾರೆ. ಸರಿಯಾದ ವೇದಿಕೆ ಸಿಕ್ಕಾಗ ಅವರ ಸೃಜನಶೀಲತೆ ಅನೇಕ ಉದ್ಯೋಗ ಅವಕಾಶಗಳ ಸೃಷ್ಟಿಗೆ ಕಾರಣವಾಗುತ್ತದೆ. ವಿಶ್ವಸಂಸ್ಥೆಯ ಅಧ್ಯಯನ ಪ್ರಕಾರ, ಸೃಜನಶೀಲ ಆರ್ಥಿಕತೆಯು ಜಗತ್ತಿನೆಲ್ಲೆಡೆ 4-5 ಕೋಟಿ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ.
ಸೃಜನಶೀಲತೆಯ ಬಗ್ಗೆ ಸಾರ್ವತ್ರಿಕ ವ್ಯಾಖ್ಯಾನ ಇರುವುದಿಲ್ಲ. ಪರಿಕಲ್ಪನೆಯು ಅರ್ಥವಿವರಣೆಗೆ ಮುಕ್ತವಾಗಿದೆ. ಕಲಾತ್ಮಕ ಅಭಿವ್ಯಕ್ತಿಯಿಂದ ಆರ್ಥಿಕ, ಸಾಮಾಜಿಕ ಮತ್ತು ಸುಸ್ಥಿರ ಅಭಿವೃದ್ಧಿಯ ಸಂದರ್ಭದಲ್ಲಿ ಸಮಸ್ಯೆ ಬಗೆಹರಿಸುವಲ್ಲಿ ಪ್ರಮುಖ ಪಾತ್ರ ಹೊಂದಿದೆ. ಇದನ್ನು ಗಮನದಲ್ಲಿರಿಸಿಕೊಂಡು ವಿಶ್ವಸಂಸ್ಥೆ ಏಪ್ರಿಲ್ 21ಅನ್ನು ವಿಶ್ವ ಸೃಜನಶೀಲತೆ ಮತ್ತು ನಾವೀನ್ಯತೆ ದಿನವನ್ನಾಗಿ ಘೋಷಣೆ ಮಾಡಿದೆ. ಈ ಮೂಲಕ ಮಾನವ ಅಭಿವೃದ್ಧಿಯ ಎಲ್ಲಾ ವಿಷಯಕ್ಕೆ ಸೃಜನಶೀಲತೆ ಮತ್ತು ಅವಿಷ್ಕರಣೆಯ ಪಾತ್ರದ ಕುರಿತು ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ಸೃಜನಶೀಲತೆ ಮತ್ತು ಸಂಸ್ಕೃತಿ: ಸೃಜನಶೀಲತೆ ಆರ್ಥಿಕತೆ ಕುರಿತು ಯಾವುದೇ ಒಂದು ವ್ಯಾಖ್ಯಾನವಿಲ್ಲ. ಮಾನವನ ಕ್ರಿಯಾತ್ಮಕತೆ ಮತ್ತು ಆಲೋಚನೆ ಮತ್ತು ಬೌದ್ಧಿಕ ಶಕ್ತಿ ಇದರ ಮೂಲವಾಗಿದೆ. ಜ್ಞಾನಾಧಾರಿತ ಆರ್ಥಿಕ ಚಟುವಟಿಕೆಗಳು ಸೃಜನಶೀಲತೆಯ ಉದ್ಯಮಕ್ಕೆ ಆಧಾರವಾಗಿದೆ.
ಸೃಜನಶೀಲ ಉದ್ಯಮ: ಇದು ಆಡಿಯೋವಿಶುವಲ್ ಉತ್ಪನ್ನ, ವಿನ್ಯಾಸ, ಹೊಸ ಮಾಧ್ಯಮ, ಕಲೆ ಪ್ರದರ್ಶನ, ಕಲೆ ಪ್ರಕಟಣೆ ಮತ್ತು ದೃಶ್ಯೀಕರಣವನ್ನು ಹೊಂದಿದೆ. ಇದು ರೂಪಾಂತರದ ವಲಯವಾಗಿದ್ದು, ಆದಾಯ ಸೃಷ್ಟಿ, ಉದ್ಯೋಗ ಸೃಷ್ಟಿ ಮತ್ತು ರಫ್ತು ಗಳಿಕೆಯನ್ನು ಹೊಂದಿದೆ.