ಕರ್ನಾಟಕ

karnataka

ETV Bharat / bharat

ಕನಸಿನಲ್ಲಿ ಮಾನವ ಬಲಿ ಕೇಳಿದ್ದಳಂತೆ ದೇವಿ: ಅಂಗಡಿ ಮಾಲೀಕನ ಹತ್ಯೆ ಬಗ್ಗೆ ಮಹಿಳೆ ಶಾಕಿಂಗ್​ ಹೇಳಿಕೆ - WOMAN KILLS A MAN - WOMAN KILLS A MAN

ಕನಸಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ದೇವಿ ಬಂದು ಮಾನವ ಬಲಿ ನೀಡುವಂತೆ ಕೇಳಿದ ಹಿನ್ನೆಲೆ ಅಂಗಡಿ ಮಾಲೀಕನ ಹತ್ಯೆ ಮಾಡಿದ್ದಾಗಿ ಮಹಿಳೆ ತಿಳಿಸಿದ್ದಾಳೆ.

women-kills-man-sayin-goddess-appeared-in-her-dream-demanding-human-sacrifice
women-kills-man-sayin-goddess-appeared-in-her-dream-demanding-human-sacrifice

By PTI

Published : Apr 13, 2024, 1:51 PM IST

Updated : Apr 13, 2024, 4:57 PM IST

ಅಂಬಾಲ: ಕಳೆದ ನಾಲ್ಕೈದು ದಿನದಂದು ಕನಸಿನಲ್ಲಿ ದೇವಿ ಬಂದು ಮಾನವ ಬಲಿ ಕೇಳಿದಳು ಎಂದು ವ್ಯಕ್ತಿಯೊಬ್ಬನನ್ನು ಮಹಿಳೆ ತನ್ನ ಸಹಾಯಕರ ಜೊತೆ ಸೇರಿ ಹತ್ಯೆ ಮಾಡಿರುವ ಬೀಭತ್ಸ ಘಟನೆಯ ಪ್ರಕರಣ ಹರಿಯಾಣದ ಅಂಬಾಲದಲ್ಲಿ ನಡೆದಿದೆ. ಮಹೇಶ್​ ಗುಪ್ತಾ (44) ಕೊಲೆಯಾದ ವ್ಯಕ್ತಿ. ಕಛ್​​ ಬಜಾರ್​ ಅಂಬಾಲ ಕ್ಯಾಂಟ್​​ನ ನಿವಾಸಿಯಾಗಿದ್ದ ಈತ ದಿನಸಿ ಅಂಗಡಿ ಮಾಲೀಕನಾಗಿದ್ದ. ಇನ್ನು ಕೊಲೆ ಪ್ರಕರಣ ಸಂಬಂಧ ಆರೋಪಿ ಪ್ರಿಯಾ ಮತ್ತು ಆತನಿಗೆ ಸಹಾಯ ಮಾಡಿದ ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ:ಪ್ರಿಯಾ ಮತ್ತು ಆಕೆಯ ಸಹೋದರಿ, ಮಹೇಶ್​ ಗುಪ್ತಾ ಅಂಗಡಿಯಿಂದ ಕೆಲವು ಸಾಮಗ್ರಿಗಳನ್ನು ಖರೀದಿಸಿ, ಮನೆಗೆ ಡೆಲಿವರಿ ನೀಡುವಂತೆ ತಿಳಿಸಿದ್ದರು. ಆ ದಿನದಿಂದ ಗುಪ್ತಾ ನಾಪತ್ತೆಯಾಗಿದ್ದಾರೆ ಎಂದು ಮೃತನ ಸಹೋದರ ಪೊಲೀಸರಿಗೆ ದೂರು ದಾಖಲಿಸಿದ್ದರು. ಸಾಮಗ್ರಿಗಳ ಡೆಲಿವರಿಗೆ ಹೋಗಿದ್ದ ಗುಪ್ತಾ ವಾಪಸ್​ ಆಗದ ಹಿನ್ನೆಲೆ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ, ಫೋನ್​ಗೆ ಕರೆ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಕಡೆಗೆ ಗುಪ್ತಾ ಬೈಕ್​ ಪ್ರಿಯಾ ಮನೆ ಮುಂದೆ ನಿಂತಿರುವುದು ತಿಳಿದುಬಂದಿತ್ತು.

ಈ ಹಿನ್ನೆಲೆ ಗುಪ್ತಾ ಸಹೋದರ ಮತ್ತು ಕೆಲವರು, ಪ್ರಿಯಾ ಮನೆ ಬಾಗಿಲು ತಟ್ಟಿದ್ದರು. ಆದರೆ, ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಈ ವೇಳೆ ಬಲವಂತದಿಂದ ಮನೆ ಬಾಗಿಲು ತೆಗೆದಾಗ ಪ್ರಿಯಾ, ಪ್ರೀತಿ ಮತ್ತು ಹೇಮಂತ್​ ಎಂಬ ಮೂವರು ಆರೋಪಿಗಳು ಮಹೇಶ್​ ಗುಪ್ತಾನ ದೇಹವನ್ನು ಸಾಗಿಸುವ ಪ್ರಯತ್ನ ನಡೆಸಿರುವುದು ಕಂಡು ಬಂದಿದೆ. ಪ್ರಜ್ಞಾಹೀನವಾಗಿ ಬಿದ್ದಿದ್ದ ಗುಪ್ತಾನ ಕತ್ತನ್ನು ಸ್ಕ್ರಾಫ್​​ನಿಂದ ಬಿಗಿದಿರುವುದು ಗೊತ್ತಾಗಿದೆ. ಅಲ್ಲದೇ ಆತನ ಕಾಲು ಮತ್ತು ಕಿವಿ ಹಿಂದೆ ಗಾಯಗಳು ಕಂಡು ಬಂದಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೃತ್ಯ ನಡೆದಿದ್ದು ಗೊತ್ತಾದ ತಕ್ಷಣಕ್ಕೆ ಗುಪ್ತಾನನ್ನು ಆಸ್ಪತ್ರೆಗೆ ಕರೆದೊಯ್ಯುಲಾಯಿತಾದರೂ ಈ ವೇಳೆಗಾಗಲೇ ಆತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು.

ಇನ್ನು ಈ ಸಂಬಂಧ ಪ್ರಕರಣ ದಾಖಲಿಕೊಂಡಿರುವ ಪಡವ್​​​ ಪೊಲೀಸ್​​ ಠಾಣೆಯ ಇನ್ಸ್​​ಪೆಕ್ಟರ್​ ದಿಲೀಪ್​ ಕುಮಾರ್ ಮಾತನಾಡಿ,​ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ವೇಳೆ ಆರೋಪಿ ಪ್ರೀತಿ, ಕನಸಿನಲ್ಲಿ ನಾಲ್ಕೈದು ದಿನದಿಂದ ದೇವಿ ಕನಸಿನಲ್ಲಿ ಬಂದು ಮಾನವ ಬಲಿ ನೀಡುವಂತೆ ಕೇಳುತ್ತಿದ್ದಳು. ಈ ಹಿನ್ನೆಲೆಯಲ್ಲಿ ಕೃತ್ಯ ಎಸಗಿದ್ದಾಗಿ ತಿಳಿಸಿದ್ದಾಳೆ. ಅಷ್ಟೇ ಅಲ್ಲದೆ, ಈಕೆ ಈ ಹಿಂದೆ ಮಹೇಶ್​ ಗುಪ್ತಾ ಅಂಗಡಿಯಲ್ಲಿ ಕೆಲಸ ನಿರ್ವಹಿಸಿದ್ದಳು ಎಂಬುದು ತನಿಖೆ ವೇಳೆ ಬಯಲಾಗಿದೆ. ಸದ್ಯ ಆರೋಪಿಗಳನ್ನು ಕೋರ್ಟ್​​ ಮುಂದೆ ಹಾಜರುಪಡಿಸಿ, ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. (ಪಿಟಿಐ)

ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಬಿಜೆಪಿ ಮುಖಂಡನ ಮೇಲೆ ಗುಂಡಿನ ದಾಳಿ: ಓರ್ವ ಸಾವು, ಮೂವರಿಗೆ ಗಾಯ

Last Updated : Apr 13, 2024, 4:57 PM IST

ABOUT THE AUTHOR

...view details