ಹೈದರಾಬಾದ್: ವೈಯಕ್ತಿಕ ಆಕಾಂಕ್ಷೆ ಮತ್ತು ತಾಂತ್ರಿಕ ಆವಿಷ್ಕಾರದ ಪರಿಣಾಮವಾಗಿ ಭೀಮ್ರೆಡ್ಡಿ ಮಾಧವಿ ಮತ್ತು ನಿಶಾ ಡ್ರೋನ್ ತಂತ್ರಜ್ಞಾನದಿಂದ ಪ್ರೇರಣೆಗೊಂಡು ಕೃಷಿ ಕ್ಷೇತ್ರದಲ್ಲಿ ಇದರ ಬಳಕೆಗೆ ಮುಂದಾಗಿದ್ದಾರೆ. ಮೊದಲ ಮಹಿಳಾ ಡ್ರೋನ್ ಪೈಲಟ್ಗಳಾಗಿರುವ ಇವರ ಪ್ರಯಾಣವು ಕುಟುಂಬ ಮತ್ತು ಸಮುದಾಯಗಳು ಸವಾಲುಗಳಿಂದ ಕೂಡಿದ್ದು, ಇವೆಲ್ಲವನ್ನು ಮೀರಿ ಸಾಧನೆ ಮಾಡಿದ್ದಾರೆ.
ಕೃಷಿಯಲ್ಲಿ ಹೊಸತನ ಮತ್ತು ಉದ್ಯೋಗವಕಾಶ ಸೃಷ್ಟಿ; ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಮಾಧವಿ, ಕೃಷಿಕರಾದ ತಂದೆಯ ಕಷ್ಟಗಳನ್ನು ಕಣ್ಣಾರೆ ಕಂಡಿದ್ದಾರೆ. ಕೃಷಿಕರ ಸಂಕಷ್ಟಗಳನ್ನು ನಿವಾರಿಸಲು ಪಣತೊಟ್ಟು ಅದಕ್ಕಾಗಿ ಎದುರಾದ ಸಾಮಾಜಿಕ ಕಟ್ಟುಪಾಡುಗಳನ್ನು ಬದಿಗಿರಿಸಿದ್ದಾರೆ. ಇದೀಗ ಅವರು ರಾಜ್ಯದ ಮೊದಲ ಮಹಿಳಾ ಡ್ರೋನ್ ಪೈಲಟ್ ಆಗುವ ಮೂಲಕ ಈ ಕ್ಷೇತ್ರದಲ್ಲಿನ ಲಿಂಗ ತಾರತಮ್ಯವನ್ನು ಹೋಗಲಾಡಿಸಿದ್ದಾರೆ. ಆವಿಷ್ಕಾರದಲ್ಲಿ ಆಳವಾದ ಆಸಕ್ತಿಯನ್ನು ಹೊಂದಿದ್ದ ಮಾಧವಿ ತಮ್ಮ ತಂದೆಯಂತೆ ಕೃಷಿಯಲ್ಲಿ ತೊಡಗುವ ಕೊತೆಗೆ ಡ್ರೋನ್ ಪೈಲಟ್ ಆಗಿ ಪರಿವರ್ತನೆಗೊಂಡಿದ್ದಾರೆ. ಕೃಷಿಯಲ್ಲಿ ತಂತ್ರಜ್ಞಾನದ ಸಾಮರ್ಥ್ಯದ ಸ್ಫೂರ್ತಿ ಮತ್ತು ಮೌಲ್ಯೀಕರಣದಿಂದ ಎರಡು ಕ್ಷೇತ್ರದಲ್ಲೂ ಕಾರ್ಯನಿರ್ವಹಿಸುವಂತೆ ಪ್ರೇರೇಪಿಸಿದೆ. ಡ್ರೋನ್ ತಂತ್ರಜ್ಞಾನದ ಕಲಿಕೆಯನ್ನು ಸರಳವಾಗಿ ಕಲಿತ ಮಾಧವಿ, ಇದರಿಂದ ಕೃಷಿ ಪದ್ಧತಿ ಉತ್ತಮಗೊಳಿಸುವ ಜೊತೆಗೆ ಗ್ರಾಮೀಣ ಭಾಗದಲ್ಲಿ ಹೊಸ ಉದ್ಯೋಗಾವಕಾಶವನ್ನು ಸಹ ಸೃಷ್ಟಿಸಿದ್ದಾರೆ.