ಜೈಪುರ (ರಾಜಸ್ಥಾನ): ಬುಂದಿ ಜಿಲ್ಲೆಯ ನೈನ್ವಾ ಉಪ ಜಿಲ್ಲಾ ಆಸ್ಪತ್ರೆಯ ಹೊರಗಿನ ಬೆಂಚ್‌ನಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಹಿನ್ನೆಲೆ ರಾಜಸ್ಥಾನದ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಸೋಮವಾರ ವೈದ್ಯರು ಮತ್ತು ಎಎನ್‌ಎಂ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
ತನಿಖಾ ಸಮಿತಿ ರಚನೆ:ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಹೆರಿಗೆ ಕೊಠಡಿಗೆ ಕರೆದೊಯ್ಯುವ ಬದಲು ಭಾನುವಾರ ಆಸ್ಪತ್ರೆಯ ಹೊರಭಾಗದ ಬೆಂಚಿನ ಮೇಲೆ ಕೂರುವಂತೆ ಸೂಚಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶುಭ್ರಾ ಸಿಂಗ್ ಪ್ರಕರಣದ ತನಿಖೆಗಾಗಿ ತನಿಖಾ ಸಮಿತಿಯನ್ನು ರಚಿಸಿದ್ದಾರೆ.
ಸಾರ್ವಜನಿಕ ಆರೋಗ್ಯ ನಿರ್ದೇಶಕ ಹೇಳಿಕೆ:ಪ್ರಕರಣದ ಕುರಿತು ಬುಂದಿ ಜಿಲ್ಲಾಧಿಕಾರಿಯಿಂದ ಮಾಹಿತಿ ಕೇಳಲಾಗಿದ್ದು, ವರದಿ ಸಲ್ಲಿಸುವಂತೆ ನೈನ್ವಾ ಉಪವಿಭಾಗಾಧಿಕಾರಿಗೆ ಸೂಚಿಸಲಾಗಿದೆ. ಅಧಿಕಾರಿಗಳಿಂದ ಬಂದ ಮಾಹಿತಿ ಆಧರಿಸಿ, ಈ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ವೈದ್ಯರು ಮತ್ತು ಎಎನ್‌ಎಂ ಸಿಬ್ಬಂದಿ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ ಎಂದು ಸಾರ್ವಜನಿಕ ಆರೋಗ್ಯ ನಿರ್ದೇಶಕ ರವಿಪ್ರಕಾಶ್ ಮಾಥೂರ್ ತಿಳಿಸಿದ್ದಾರೆ.