ಕರ್ನಾಟಕ

karnataka

ETV Bharat / bharat

ಮನೆ ಮಾಲೀಕನ ನಿರ್ಲಕ್ಷ್ಯಕ್ಕೆ ಯುವಕ ಬಲಿ; ನೀರಿನ ಸಂಪಿಗೆ ಬಿದ್ದು ಪ್ರಾಣ ಕಳೆದುಕೊಂಡ ಸಾಫ್ಟ್​ವೇರ್​ ಉದ್ಯೋಗಿ - Young Man Dies - YOUNG MAN DIES

ಮನೆ ಮಾಲೀಕನ ನಿರ್ಲಕ್ಷ್ಯಕ್ಕೆ ನಿರ್ಲಕ್ಷ್ಯದಿಂದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾರೆ. ತೆರೆದ ನೀರಿನ ತೊಟ್ಟಿಗೆ ಬಿದ್ದು ಯುವಕ ಮೃತಪಟ್ಟಿದ್ದಾನೆ. ಹೈದರಾಬಾದ್​ನಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

YOUNG MAN FALLING INTO WATER SUMP  SMALL NEGLIGENCE  HYDERABAD
ನೀರಿನ ಸಂಪಿಗೆ ಬಿದ್ದು ಪ್ರಾಣ ಕಳೆದುಕೊಂಡ ಸಾಫ್ಟ್​ವೇರ್​ ಉದ್ಯೋಗಿ

By ETV Bharat Karnataka Team

Published : Apr 22, 2024, 4:53 PM IST

Updated : Apr 22, 2024, 5:14 PM IST

ನೀರಿನ ಸಂಪಿಗೆ ಬಿದ್ದು ಪ್ರಾಣ ಕಳೆದುಕೊಂಡ ಸಾಫ್ಟ್​ವೇರ್​ ಉದ್ಯೋಗಿ

ಹೈದರಾಬಾದ್​ (ತೆಲಂಗಾಣ):ಮನೆಯ ಮಾಲೀಕನಒಂದು ಸಣ್ಣ ನಿರ್ಲಕ್ಷ್ಯ ಜೀವವನ್ನೇ ಬಲಿ ತೆಗೆದುಕೊಂಡಿದೆ. ಒಂದು ಕುಟುಂಬದ ಅತೀವ ದುಃಖಕ್ಕೆ ಕಾರಣವಾಗಿದೆ. ಮನೆಯಲ್ಲಿದ್ದ ನೀರಿನ ನಲ್ಲಿ ತೆರೆದಿದ್ದ ವೇಳೆ ಅದನ್ನು ಗಮನಿಸದ ಯುವಕನೊಬ್ಬ ಆಕಸ್ಮಿಕವಾಗಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಇಲ್ಲಿನ ಗಚಿಬೌಲಿಯಲ್ಲಿ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಇಲ್ಲಂದಂನ ಆರ್‌ಟಿಸಿ ಉದ್ಯೋಗಿ ಖಲೀಲ್ ಅವರ ಪುತ್ರ ಅಕ್ಮಲ್ ಸುಫಿಯಾನ್ ಖಮ್ಮಂನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಕ್ಮಲ್ ಅವರನ್ನು ತರಬೇತಿಗಾಗಿ ಕಂಪನಿಯು ಹೈದರಾಬಾದ್‌ಗೆ ಕಳುಹಿಸಿತ್ತು ಮತ್ತು ಗಚಿಬೌಲಿಯ ಅಂಜಯ್ಯ ನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಉಳಿಯಲು ವ್ಯವಸ್ಥೆ ಮಾಡಿತ್ತು. ಬೆಳಗ್ಗೆ ಅಕ್ಮಲ್​ ಜಿಮ್‌ಗೆ ಹೋಗಿ ಬಾಳೆಹಣ್ಣು ಖರೀದಿಸಿ ಫ್ಲಾಟ್‌ಗೆ ಬಂದರು.

ಮನೆಯ ಮಾಲೀಕರು ಆವರಣದಲ್ಲಿರುವ ಸಂಪ್​ಗೆ ಮೋಟಾರ್ ಹಾಕಿ ಮನೆಯೊಳಗೆ ಹೋಗಿದ್ದಾರೆ. ಅದೇ ವೇಳೆ ಅಪಾರ್ಟ್​ಮೆಂಟ್​ಗೆ ಬಂದ ಅಕ್ಮಲ್, ನೀರಿನ ಟ್ಯಾಂಕ್​ ಓಪನ್​ ಆಗಿರುವುದನ್ನು ಗಮನಿಸದ ಯುವಕ ದಿಢೀರ್​ ಆಯತಪ್ಪಿ ಸಂಪ್​ನೊಳಗೆ ಬಿದ್ದಿದ್ದಾನೆ. ಶಬ್ಧ ಕೇಳಿದ ಮಾಲೀಕರು ಹೊರ ಬಂದು ಗಮನಿಸಿದ್ದು, ಸಂಪು ಆಳವಾಗಿದ್ದರಿಂದ ಯುವಕ ಕಂಡುಬಂದಿಲ್ಲ. ಪಕ್ಕದಲ್ಲಿ ಬಾಳೆ ಕವರ್ ಬಿದ್ದಿರುವುದನ್ನು ಗಮನಿಸಿದ ಮಾಲೀಕನಿಗೆ ಅನುಮಾನ ಬಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಯುವಕ ನೀರಿನ ಸಂಪಿಗೆ ಬಿದ್ದಿರುವುದು ತಿಳಿದಿದೆ. ಕೂಡಲೇ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅದಾಗಲೇ ಅಕ್ಮಲ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮನೆಯ ಮಾಲೀಕರ ನಿರ್ಲಕ್ಷ್ಯದಿಂದ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ತೆರೆದ ನೀರಿನ ತೊಟ್ಟಿಗೆ ಬಿದ್ದು ಯುವಕ ಮೃತಪಟ್ಟಿದ್ದಾನೆ. ಹೈದರಾಬಾದ್​ನಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಓದಿ:ಮನೆ ಮಗನಿಂದಲೇ ಕೊಲೆಗೆ ಸುಪಾರಿ: ಗದಗದ ನಾಲ್ವರ ಕೊಲೆ ಪ್ರಕರಣ ಭೇದಿಸಿದ ಪೊಲೀಸರು, 8 ಮಂದಿ ಬಂಧನ - Gadag Family Murder

Last Updated : Apr 22, 2024, 5:14 PM IST

ABOUT THE AUTHOR

...view details