ಉತ್ತರಾಖಂಡ್: ಡೆಹ್ರಾಡೂನ್ ನಿವಾಸಿಯಾದ ಮಹಿಳೆಯೊಬ್ಬರನ್ನು ವಿಡಿಯೋ ಕಾಲ್ ಮೂಲಕ 30 ಗಂಟೆಗಳ ಕಾಲ ಡಿಜಿಟಲ್ ಗೃಹ ಬಂಧನಕ್ಕೆ ಒಳಗಾಗಿಸಿ 10.5 ಲಕ್ಷ ರೂ ದೋಚಿರುವ ಘಟನೆ ವರದಿಯಾಗಿದೆ. ದಲ್ನವಾಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕೊರಿಯರ್ ಮೂಲಕ ಆಕ್ಷೇಪಾರ್ಹ ವಸ್ತುಗಳಿದ್ದು ಈ ಸಂಬಂಧ ನಿಮ್ಮನ್ನು ಬಂಧಿಸಲಾಗುವುದು. ಈ ಬಂಧನವನ್ನು ತಪ್ಪಿಸಬೇಕು ಎಂದರೆ, ತನಿಖೆಗೆ ಸಹಕರಿಸುವಂತೆ ಹೇಳಿ ಆಕೆಯ ಮನೆಯಲ್ಲಿಯೇ ಗೃಹ ಬಂಧನಕ್ಕೆ ಒಳಪಡಿಸಲಾಗಿದೆ. ಮಹಿಳೆ ನೀಡಿದ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನ ಸಾರಾಂಶ: ಜುಲೈ 31ರಂದು ತಮ್ಮ ಹೆಸರಿನಲ್ಲಿ ಕೊರಿಯರ್ವೊಂದು ಥೈಲ್ಯಾಂಡ್ಗೆ ಹೋಗುತ್ತಿದ್ದು, ಅದರಲ್ಲಿ ಕೆಲವು ಅನುಮಾನಾಸ್ಪದ ವಸ್ತುಗಳಿವೆ ಎಂದು ತಿಳಿಸಿದರು. ಅಲ್ಲದೇ, ಈ ಸಂಬಂಧ ಹೆಚ್ಚಿನ ವಿವರಣೆಗೆ ಮುಂಬೈ ಕ್ರೈಂ ಬ್ರಾಂಚ್ಗೆ ಕರೆ ವರ್ಗಾವಣೆ ಮಾಡಲಾಗುವುದು ಎಂದು ಸ್ಕೈಪ್ ವಿಡಿಯೋ ಕಾಲ್ನಲ್ಲಿ ಸಂಪರ್ಕದಲ್ಲಿರುವಂತೆ ಹೇಳಿದರು.
ವಿಚಾರಣೆ ನೆಪದಲ್ಲಿ 30 ಗಂಟೆಗಳ ಕಾಲ ನನ್ನನ್ನು ವಿಡಿಯೋ ಕಾಲ್ನಲ್ಲಿರುವಂತೆ ನೋಡಿಕೊಂಡರು. ನನ್ನ ಜೊತೆಗೆ ಪೊಲೀಸ್ ಯುನಿಫಾರ್ಮ್ನಲ್ಲಿದ್ದ ವ್ಯಕ್ತಿಯೊಬ್ಬರು ಮಾತನಾಡಿದರು. ಆತ ಮಾತನಾಡುತ್ತಾ, ಸರಿಯಾಗಿ ಮಾಹಿತಿ ನೀಡದೇ ಹೋದಲ್ಲಿ ಮುಂಬೈ ಕ್ರೈಂ ಬ್ರಾಂಚ್ ಮುಂದೆ ಬರಬೇಕಾಗಬಹುದು ಎಂದು ಎಚ್ಚರಿಕೆ ನೀಡಿದರು.
ಆತನ ಎಲ್ಲಾ ಪ್ರಶ್ನೆಗಳಿಗೆ ವಿಡಿಯೋ ಕರೆ ಮೂಲಕ ಉತ್ತರಿಸಿದೆ. ಈ ವೇಳೆ ಆತ ನನ್ನ ಎಲ್ಲಾ ಉತ್ತರಗಳನ್ನು ಮುಂಬೈ ಕ್ರೈಂ ಬ್ರಾಂಚ್ಗೆ ಕಳುಹಿಸಲಾಗುವುದು. ನೀವು ಕಳುಹಿಸಿದ ಕೊರಿಯರ್ ತಡೆಯಲು ಮತ್ತು ಬಂಧನದಿಂದ ತಪ್ಪಿಸಿಕೊಳ್ಳಲು 10.50 ಲಕ್ಷ ರೂ ಪಾವತಿ ಮಾಡಬೇಕು ಎಂದು ಹೇಳಿದ. ಇದರಿಂದ ಭಯಗೊಂಡು ಹಣವನ್ನು ಹೇಗೋ ಮಾಡಿ ಹೊಂದಿಸಿದೆ ಎಂದು ತಿಳಿಸಿದ್ದಾರೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ದಲ್ನವಾಲಾ ಪೊಲೀಸ್ ಮುಖ್ಯಸ್ಥ ಮನೋಜ್ ನೈನ್ವಾಲ್ ಅಪರಿಚಿತ ಆರೋಪಿ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ ಕೆಲವು ದಿನಗಳ ಹಿಂದೆ ಕೊರಿಯರ್ವೊಂದನ್ನು ಕಳುಹಿಸಿದ್ದು, ಈ ದತ್ತಾಂಶವನ್ನು ಸೈಬರ್ ಮಾಹಿತಿ ಮೂಲಕ ಕದ್ಧು ಆಕೆಯನ್ನು ಬೆದರಿಸಲಾಗಿದೆ. ಮಹಿಳೆ ದೂರಿನ ಆಧಾರದ ಮೇಲೆ ಮತ್ತು ಮೊಬೈಲ್ ಸಂಖ್ಯೆ ಆಧಾರಿಸಿ ಪತ್ತೆ ಕಾರ್ಯ ನಡೆಸಲಾಗುವುದು ಎಂದರು.
ಇದನ್ನೂ ಓದಿ: ಕೋಚಿಂಗ್ ಸೆಂಟರ್ಗಳು ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿವೆ: ಸುಪ್ರೀಂ ಕೋರ್ಟ್ ಗರಂ