ಕರ್ನಾಟಕ

karnataka

ETV Bharat / bharat

ಜಮ್ಮು ಕಾಶ್ಮೀರ: ಇಬ್ಬರು ಗ್ರಾಮ ರಕ್ಷಕರನ್ನು ಗುಂಡಿಟ್ಟು ಹತ್ಯೆಗೈದ ಉಗ್ರರು

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದೆ. ಗುರುವಾರ ಕಿಶ್ತ್ವಾರ್‌ನಲ್ಲಿ ಇಬ್ಬರು ಗ್ರಾಮ ರಕ್ಷಕರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.

ಜಮ್ಮು ಕಾಶ್ಮೀರ: ಇಬ್ಬರು ಗ್ರಾಮ ರಕ್ಷಕರನ್ನು ಗುಂಡಿಟ್ಟು ಹತ್ಯೆಗೈದ ಉಗ್ರರು
ಗಸ್ತು ತಿರುಗುತ್ತಿರುವ ಭದ್ರತಾ ಪಡೆ (ETV Bharat)

By PTI

Published : Nov 8, 2024, 7:14 AM IST

ಜಮ್ಮು ಕಾಶ್ಮೀರ:ಜಮ್ಮು ಕಾಶ್ಮೀರದ ಕಿಶ್ತ್ವಾರ್‌ ಜಿಲ್ಲೆಯಲ್ಲಿ ಗುರುವಾರ ಇಬ್ಬರು ಗ್ರಾಮ ರಕ್ಷಕರನ್ನು (ವಿಲೇಜ್ ಡಿಫೆನ್ಸ್ ಗಾರ್ಡ್ಸ್‌) ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಈ ಘಟನೆಯನ್ನು ಅಲ್ಲಿನ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ನಜೀರ್ ಅಹ್ಮದ್ ಮತ್ತು ಕುಲ್ದೀಪ್ ಕುಮಾರ್ ಹತ್ಯೆಯಾದವರು. ಇವರು ಒಹ್ಲಿ- ಕುಂಟ್ವಾರಾ ನಿವಾಸಿಗಳಾಗಿದ್ದಾರೆ. ತಮ್ಮ ಜಾನುವಾರುಗಳನ್ನು ಮೇಯಿಸಲು ಉಧ್ವಾರಿ ಪ್ರದೇಶದ ಮುಂಜ್ಲಾ ಧರ್ ಅರಣ್ಯ ಪ್ರದೇಶಕ್ಕೆ ಹೋಗಿದ್ದರು. ಈ ವೇಳೆ ಶಸ್ತ್ರಸಜ್ಜಿತ ಉಗ್ರರು ಇಬ್ಬರ ಮೇಲೆ ಮನಬಂದಂತೆ ಗುಂಡು ಹಾರಿಸಿ ಅತ್ಯಂತ ಅಮಾನುಷವಾಗಿ ಕೊಂದು ಹಾಕಿದ್ದಾರೆ. ಇಬ್ಬರ ಮೃತದೇಹಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಇಬ್ಬರು ಸಂಜೆಯಾದರೂ ಮನೆಗೆ ಮರಳದ ಕಾರಣ ನಾಪತ್ತೆಯಾಗಿರುವ ಕುರಿತು ದೂರು ಸ್ವೀಕರಿಸಿದ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದರು. ನಂತರ ಉಗ್ರರ ದುಷ್ಕೃತ್ಯ ಬೆಳಕಿಗೆ ಬಂದಿದೆ.

ಹತ್ಯೆಯ ಹೊಣೆ ಹೊತ್ತ ಕಾಶ್ಮೀರಿ ಟೈಗರ್ಸ್: ಪಾಕಿಸ್ತಾನ ಉಗ್ರವಾದಿ ಸಂಘಟನೆ ಜೈಶ್-ಇ-ಮೊಹಮ್ಮದ್‌ನ ಭಾಗವಾದ ಕಾಶ್ಮೀರಿ ಟೈಗರ್ಸ್ ಈ ಹತ್ಯೆಯ ಹೊಣೆ ಹೊತ್ತುಕೊಂಡಿದೆ.

ಈ ಕುರಿತು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ನಾ ಪ್ರತಿಕ್ರಿಯಿಸಿ, "ಇಂಥ ಅಮಾನುಷ ಕೃತ್ಯ ಎಸಗುವ ಉಗ್ರವಾಗಿ ಸಂಘಟನೆಗಳನ್ನು ನಾಶಪಡಿಸಲು ನಾವು ಕಟಿಬದ್ಧರಾಗಿದ್ದೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಹೈಡ್ರಾಮಾ: ಸದನ ಮುಂದೂಡಿಕೆ

ABOUT THE AUTHOR

...view details