ಕರ್ನಾಟಕ

karnataka

ETV Bharat / bharat

ನಾಗ್ಪುರದಲ್ಲಿ ಎರಡು 'ಹಿಟ್ ಅಂಡ್ ರನ್' ಕೇಸ್ ; ಇಬ್ಬರು ಸಾವು - hit and run case - HIT AND RUN CASE

ನಾಗ್ಪುರದಲ್ಲಿ ನಡೆದ ಎರಡು ಹಿಟ್ ಅಂಡ್ ರನ್ ಕೇಸ್​ನಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

nagpura
ನಾಗ್ಪುರ (ETV Bharat)

By ETV Bharat Karnataka Team

Published : Jul 9, 2024, 10:30 PM IST

Updated : Jul 9, 2024, 10:59 PM IST

ನಾಗ್ಪುರದಲ್ಲಿ ಹಿಟ್​ ಅಂಡ್​ ರನ್ (ETV Bharat)

ನಾಗ್ಪುರ (ಮಹಾರಾಷ್ಟ್ರ) :ಇತ್ತೀಚಿಗೆ ಮುಂಬೈನ ವರ್ಲಿ ಮತ್ತು ಪುಣೆಯಲ್ಲಿ 'ಹಿಟ್ ಅಂಡ್ ರನ್' ಪ್ರಕರಣಗಳು ವರದಿಯಾಗಿತ್ತು. ಇದೀಗ ಉಪ ರಾಜಧಾನಿ ನಾಗ್ಪುರದಲ್ಲಿ ಎರಡು ಹಿಟ್ ಅಂಡ್ ರನ್ ಘಟನೆಗಳು ಬೆಳಕಿಗೆ ಬಂದಿವೆ. ಎರಡು ಘಟನೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಶಾಲಾ ಬಸ್ ಡಿಕ್ಕಿಯಾಗಿ ವೃದ್ಧರೊಬ್ಬರು ಮೃತಪಟ್ಟರೆ, ಮತ್ತೊಂದು ಘಟನೆಯಲ್ಲಿ ಊಟ ಮುಗಿಸಿ ಬೈಕ್​​ನಲ್ಲಿ ಹೊರಟಿದ್ದ ಯುವಕನಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಇದರಿಂದ ಯುವಕ ಸಾವನ್ನಪ್ಪಿದ್ದಾನೆ.

ಶಾಲಾ ಬಸ್‌ಗೆ ಡಿಕ್ಕಿ ಹೊಡೆದು ವೃದ್ಧ ಸಾವು: ನಾಗಪುರ ನಗರದ ಹುಡ್ಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಛೋಟಾ ತಾಜ್‌ಬಾಗ್‌ನಿಂದ ತುಕ್ಡೋಜಿ ಪುತಲ್ ಚೌಕ್​​ನಲ್ಲಿರುವ ವೈಟುಕೆ ಕಂಪ್ಯೂಟರ್ಸ್​ ಎದುರು ಈ ಘಟನೆ ನಡೆದಿದೆ. ರತ್ನಾಕರ್ ರಾಮಚಂದ್ರ ದೀಕ್ಷಿತ್ (63) ಸೈಕಲ್​ನಲ್ಲಿ ಯಾವುದೋ ಕೆಲಸಕ್ಕೆ ಹೋಗುತ್ತಿದ್ದರು. ಅದೇ ವೇಳೆ, ಶಾಲಾ ಬಸ್ ಚಾಲಕ ನಿರ್ಲಕ್ಷತನದಿಂದ ಅತಿವೇಗದಲ್ಲಿ ಬಸ್ ಚಲಾಯಿಸಿದ್ದು, ಬಸ್ ರತ್ನಾಕರ್ ದೀಕ್ಷಿತ್ ಅವರ ಸೈಕಲ್​ಗೆ ಡಿಕ್ಕಿ ಹೊಡೆದಿದೆ.

ಇದರಿಂದ ಕೆಳಗೆ ಬಿದ್ದು ಬಸ್ಸಿನ ಹಿಂಬದಿಯ ಚಕ್ರಕ್ಕೆ ಸಿಲುಕಿದ್ದಾರೆ. ಗಾಯಾಳು ರತ್ನಾಕರ್ ದೀಕ್ಷಿತ್​ನನ್ನು ಜನರು ಚಿಕಿತ್ಸೆಗಾಗಿ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ನಂತರ ಹುಡಕೇಶ್ವರ ಪೊಲೀಸರು ಶಾಲಾ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಅಪರಿಚಿತ ವಾಹನ ಡಿಕ್ಕಿ: ರಾಹುಲ್ ತೆಕಚಂದ್ ಖೈರ್ವಾರ್ (23) ಯುವಕ ರಾತ್ರಿ ಊಟ ಮುಗಿಸಿ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ಸಾಂದೀಪನಿ ಶಾಲೆಯ ಮುಂಭಾಗದ ಡಾಭಾ ರಿಂಗ್ ರಸ್ತೆಯಲ್ಲಿ ಅಪರಿಚಿತ ವಾಹನ ರಾಹುಲ್ ಅವರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ರಾಹುಲ್ ಖೈರ್ವಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಿಕಿತ್ಸೆಗಾಗಿ ಅವರನ್ನು ಮೇಯೊ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಪೊಲೀಸರು ಅಪರಿಚಿತ ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ :ಪುಣೆಯಲ್ಲಿ 2 ಹಿಟ್​-ಅಂಡ್​-ರನ್ ಕೇಸ್​: ಇಬ್ಬರು ಪೊಲೀಸರ ಸಾವು, ಓರ್ವನಿಗೆ ಗಾಯ - Pune hit and run

Last Updated : Jul 9, 2024, 10:59 PM IST

ABOUT THE AUTHOR

...view details