ಕರ್ನಾಟಕ

karnataka

ETV Bharat / bharat

ತಿರುಚೆಂದುರ್ ದೇವಸ್ಥಾನದ ಆನೆ ದಾಳಿಗೆ ಮಾವುತ ಸೇರಿ ಇಬ್ಬರು ಬಲಿ - TEMPLE ELEPHANT ATTACK

ತಿರುಚೆಂದುರ್ ದೇವಸ್ಥಾನದಲ್ಲಿ ಆನೆ ದಾಳಿ ಮಾಡಿದ ನಂತರ ಮಾವುತ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ದೃಢಪಡಿಸಿದೆ.

Tiruchendur temple elephant
ತಿರುಚೆಂದುರ್ ದೇವಸ್ಥಾನದ ಆನೆ (ETV Bharat)

By ETV Bharat Karnataka Team

Published : Nov 18, 2024, 7:21 PM IST

ಚೆನ್ನೈ (ತಮಿಳುನಾಡು) :ತಿರುಚೆಂದುರ್ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆನೆ ದಾಳಿ ನಡೆಸಿದ ನಂತರ ಮಾವುತ ಸೇರಿದಂತೆ ಇಬ್ಬರು ಮೃತಪಟ್ಟಿರುವುದಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಆನೆ ನಡೆಸಿದ ದಾಳಿಯಲ್ಲಿ ಮಾವುತ ಉದಯಕುಮಾರ್ ಮತ್ತು ಅವರ ಸಂಬಂಧಿ ಶಿಶುಪಾಲನ್ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಇಬ್ಬರನ್ನೂ ತಿರುಚೆಂದುರ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಮಾರ್ಗಮಧ್ಯೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಈ ಬಗ್ಗೆ ದೇವಸ್ಥಾನದ ವ್ಯಾಪ್ತಿಯ ಪೊಲೀಸ್ ಠಾಣೆ ಸಬ್​​ ಇನ್​ಸ್ಪೆಕ್ಟರ್ ಮಾತನಾಡಿ, ಇಂದು ಮಧ್ಯಾಹ್ನ ಆನೆಗೆ ಆಹಾರ ನೀಡುತ್ತಿದ್ದಾಗ ಏಕಾಏಕಿ ಕೋಪಗೊಂಡಿತು. ನಂತರ, ಮಾವುತ ಉದಯಕುಮಾರ್ ಮತ್ತು ಶಿಶುಪಾಲನ್ ಮೇಲೆ ದಾಳಿ ಮಾಡಿದೆ ಎಂದು ತಿಳಿಸಿದ್ದಾರೆ.

ಆನೆ ಆರೈಕೆಗೆ ಮೂರು ಜನ : ತಮಿಳುನಾಡು ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯ ಪ್ರಕಾರ, ದೇವನೈ (28) ಆನೆಯನ್ನು 2006 ರಲ್ಲಿ ದೇವಾಲಯಕ್ಕೆ ಉಡುಗೊರೆಯಾಗಿ ನೀಡಲಾಗಿತ್ತು. ಈ ಆನೆಯ ಆರೈಕೆಯಲ್ಲಿ 3 ಜನರಿದ್ದಾರೆ. ರಾಜಗೋಪುರದ ಬಳಿ ಪ್ರತ್ಯೇಕ ಶೆಡ್‌ನಲ್ಲಿ ಆನೆಯನ್ನು ನಿರ್ವಹಿಸಲಾಗುತ್ತಿದೆ.

ಭಕ್ತರು ಆಹಾರ ಪದಾರ್ಥ ನೀಡುವಂತಿಲ್ಲ: ಆನೆಯ ನಿರ್ವಹಣೆಗೆ ತಿಂಗಳಿಗೆ 75 ಸಾವಿರ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಹೇಳಿದೆ. ಆನೆಗೆ ಯಾವುದೇ ಭಕ್ತರು ತಂದಿರುವ ಆಹಾರ ಪದಾರ್ಥಗಳನ್ನು ನೀಡುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶವನ್ನೂ ಹೊರಡಿಸಲಾಗಿದೆ.

ಇದನ್ನೂ ಓದಿ :ತಿಂಗಳಲ್ಲಿ ನಾಲ್ವರನ್ನು ಬಲಿ ಪಡೆದ ಒಂಟಿ ಸಲಗ: ರಾತ್ರಿ ಹೊರ ಬರಲು ಹೆದರುತ್ತಿರುವ ಜನರು! - man died in elephant attack

ABOUT THE AUTHOR

...view details