ಕರ್ನಾಟಕ

karnataka

ETV Bharat / bharat

ತಿರುಪತಿ ತಿಮ್ಮಪ್ಪನ ವೈಕುಂಠ ದರ್ಶನ ಟಿಕೆಟ್​: ಜನವರಿಯಲ್ಲಿ ಸರ್ವ ದರ್ಶನ ಟೋಕನ್‌ ವಿತರಣೆ - TIRUMALA SARVA DARSHAN TOKENS

ಜನವರಿಯಲ್ಲಿ ವೆಂಕಟೇಶ್ವರನ ಸರ್ವದರ್ಶನ ಟೈಮ್ ಸ್ಲಾಟ್ ಟೋಕನ್‌ಗಳನ್ನು ನೀಡಲಾಗುವುದು ಎಂದು ಟಿಟಿಡಿ ಹೇಳಿದೆ. ಜನವರಿ 10, 11 ಮತ್ತು 12 ರಂದು 1.20 ಲಕ್ಷ ಟೋಕನ್‌ಗಳ ವಿತರಣೆ ನಡೆಯಲಿದೆ.

Etv Bharat
Etv Bharat (Etv Bharat)

By ETV Bharat Karnataka Team

Published : Dec 26, 2024, 10:45 AM IST

ತಿರುಪತಿ, ಆಂಧ್ರಪ್ರದೇಶ: ತಿಮ್ಮಪ್ಪನ ವೈಕುಂಠ ದರ್ಶನಕ್ಕಾಗಿ ಜನವರಿ 10 ರಿಂದ 12ರ ವರೆಗೆ ಟೋಕನ್​ ನೀಡಲಾಗುವುದು ಎಂದು ಟಿಟಿಡಿ ಪ್ರಕಟಣೆ ಹೊರಡಿಸಿದೆ. ಈ ಬಾರಿ ಸಾಮಾನ್ಯ ಜನರು ಹೆಚ್ಚಾಗಿ ಪಾಲ್ಗೊಳ್ಳುವುದಕ್ಕಾಗಿ ಮೊದಲ ಆದ್ಯತೆ ನೀಡಲಾಗಿದೆ ಎಂದು ಟಿಟಿಡಿ ಇಒ ಶ್ಯಾಮಲಾ ರಾವ್ ಮತ್ತು ಹೆಚ್ಚುವರಿ ಇಒ ವೆಂಕಯ್ಯ ಚೌಧರಿ ಹೇಳಿದ್ದಾರೆ.

ಸರ್ವದರ್ಶನ ಟಿಕೆಟ್​ ಗಳ ಮಾರಾಟಕ್ಕಾಗಿ ತಿರುಮಲದ ಒಂದು ಕೇಂದ್ರದಲ್ಲಿ ನಾಲ್ಕು ಕೌಂಟರ್​ ಮತ್ತು ತಿರುಪತಿಯಲ್ಲಿರುವ 8 ಕೇಂದ್ರಗಳಲ್ಲಿನ 87 ಕೌಂಟರ್‌ಗಳು ಸೇರಿದಂತೆ ಒಟ್ಟು 91 ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಬಹಿರಂಗಪಡಿಸಲಾಗಿದೆ.

ಜನವರಿ 10, 11 ಮತ್ತು 12 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5ಗಂಟೆವರೆಗೆ 1.20 ಲಕ್ಷ ಟೋಕನ್‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಇಒ ಶ್ಯಾಮಲಾ ರಾವ್ ಹೇಳಿದರು. ಉಳಿದ ದಿನಾಂಕಗಳ ಬಗ್ಗೆ ಒಂದು ದಿನ ಮುಂಚಿತವಾಗಿ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಭಕ್ತರು ತಮ್ಮ ಆಧಾರ್ ಕಾರ್ಡ್ ತೋರಿಸಿ ಸರ್ವದರ್ಶನ ಟೈಮ್ ಸ್ಲಾಟ್ ಟೋಕನ್ ಪಡೆಯಬೇಕು, ಟೋಕನ್ ಇಲ್ಲದ ಭಕ್ತರಿಗೆ ಈ ಹತ್ತು ದಿನಗಳಲ್ಲಿ ತಿಮ್ಮಪ್ಪನ ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಲಾಗಿದೆ.

ಇದನ್ನು ಓದಿ:ತಿರುಮಲದ ಶ್ರೀವಾಣಿ ದರ್ಶನ ಟಿಕೆಟ್‌ಗಾಗಿ ಮುಗಿ ಬಿದ್ದ ಜನ: ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತ ಭಕ್ತರ ದಂಡು

ABOUT THE AUTHOR

...view details