ಕರ್ನಾಟಕ

karnataka

ETV Bharat / bharat

ವ್ಯಾನ್​​ಗೆ ಟ್ರಕ್​ ಡಿಕ್ಕಿ: ಮದುವೆ ಮುಗಿಸಿ ವಾಪಸ್​ ಬರುತ್ತಿದ್ದ 9 ಜನರ ದುರ್ಮರಣ - Rajasthan Road Accident - RAJASTHAN ROAD ACCIDENT

ವ್ಯಾನ್​ಗೆ ವೇಗದೂತ ಟ್ರಕ್​ ಡಿಕ್ಕಿಯಾಗಿ 9 ಜನರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ವ್ಯಾನ್​​ಗೆ ಟ್ರಕ್​ ಡಿಕ್ಕಿ: ಮದುವೆ ಮುಗಿಸಿ ವಾಪಸ್​ ಆಗುತ್ತಿದ್ದ 9 ಜನರ ದಾರುಣ ಸಾವು
ವ್ಯಾನ್​​ಗೆ ಟ್ರಕ್​ ಡಿಕ್ಕಿ: ಮದುವೆ ಮುಗಿಸಿ ವಾಪಸ್​ ಆಗುತ್ತಿದ್ದ 9 ಜನರ ದಾರುಣ ಸಾವು

By ETV Bharat Karnataka Team

Published : Apr 21, 2024, 9:42 AM IST

ಜಲವಾರ್:ರಾಜಸ್ಥಾನದ ಜಲಾವರ್-ಅಕ್ಲೇರಾದ ಪಚೋಲಾ ಎಂಬಲ್ಲಿ ಕಳೆದ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಬಂದ ಟ್ರಕ್ಕೊಂದು ಓಮಿನಿ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವ್ಯಾನ್​ನಲ್ಲಿದ್ದ 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಮೃತಪಟ್ಟ ಜನರು ತಮ್ಮ ಸಂಬಂಧಿಕರ ಮದುವೆ ಸಮಾರಂಭಕ್ಕೆ ತೆರಳಿ ವಾಪಸ್​ ಆಗುತ್ತಿದ್ದರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ವ್ಯಾನ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಟ್ರಕ್​ ಚಾಲಕನನ್ನು ಬಂಧಿಸಲಾಗಿದೆ.

ಅಕ್ಲೇರಾ ಪೊಲೀಸ್ ಠಾಣೆ ಪ್ರಭಾರಿ ಸಂದೀಪ್ ಬಿಷ್ಣೋಯ್ ಪ್ರತಿಕ್ರಿಯಿಸಿ, "ಅಕ್ಲೇರಾ ಸಮೀಪದ ಡುಂಗರ್ ಗ್ರಾಮದ ಬಗ್ರಿ ಸಮುದಾಯದ ಒಂಭತ್ತು ಜನರು ಶನಿವಾರ ತಮ್ಮ ಸಂಬಂಧಿಕರ ವಿವಾಹ ಸಮಾರಂಭಕ್ಕೆಂದು ಮಧ್ಯಪ್ರದೇಶಕ್ಕೆ ತೆರಳಿದ್ದರು. ಮದುವೆ ಮುಗಿಸಿ ವಾಪಸ್​ ಆಗುವಾಗ ವೇಗವಾಗಿ ಬಂದ ಟ್ರಕ್​ ಅವರ ವ್ಯಾನ್‌ಗೆ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ. ಮೃತದೇಹಗಳನ್ನು ಅಕ್ಲೇರಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿಡಲಾಗಿದೆ. ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.

ಇದನ್ನೂ ಓದಿ:ಭೀಕರ ಅಪಘಾತ: ಮಹಾರಾಷ್ಟ್ರಕ್ಕೆ ಮದುವೆಗೆಂದು ತೆರಳುತ್ತಿದ್ದ ಬಾಗಲಕೋಟೆಯ ಐವರು ದುರ್ಮರಣ - Road Accident

ABOUT THE AUTHOR

...view details