ಕೇಂದ್ರಪಾರ (ಒಡಿಶಾ): ಆಘಾತಕಾರಿ ಘಟನೆಯೊಂದರಲ್ಲಿ ಜಿಲ್ಲೆಯ ರಾಜನಗರ ತಾಲೂಕಿನ ರಾಜೇಂದ್ರನಗರ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು (ತಂದೆ, ತಾಯಿ, ಮಗ) ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಮೃತರನ್ನು ಶ್ರೀದಾಮ್ ಮಂಡಲ (53), ಅವರ ಪತ್ನಿ ಜಯಂತಿ ಮಂಡಲ (45), ಪುತ್ರ ಪರಿಖಿತ ಮಂಡಲ (27) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಶ್ರೀದಾಮ್ ಛಾವಣಿಯ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಗ್ರಾಮಸ್ಥರು ಶ್ರೀದಾಮ್ ಅವರ ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಶ್ರೀದಾಮ್ ಅವರ ಮೃತದೇಹವನ್ನು ಛಾವಣಿಯಿಂದ ಕೆಳಗಿಳಿಸಿದ್ದಾರೆ. ಆಗ ಅವರ ಪತ್ನಿ ಮತ್ತು ಮಗ ಮನೆಯೊಳಗೆ ಶವವಾಗಿ ಬಿದ್ದಿರುವುದು ಗೊತ್ತಾಗಿದೆ.