ಕರ್ನಾಟಕ

karnataka

ETV Bharat / bharat

ಟೆಸ್ಲಾ ಕಾರು ಪಲ್ಟಿಯಾಗಿ ಸ್ಫೋಟ; ಕೆನಡಾದಲ್ಲಿ ನಾಸಿಕ್​ ಯುವಕ ಸೇರಿ ಮೂವರು ಭಾರತೀಯರ ಸಾವು

ಗೆಳತಿಯ ಹುಟ್ಟುಹಬ್ಬ ಆಚರಣೆ ಹಿನ್ನೆಲೆ ಹೊಸದಾಗಿ ಖರೀದಿಸಿದ್ದ ಟೆಸ್ಲಾ ಕಾರಿನಲ್ಲಿ ಪ್ರಯಾಣಿಸುವಾಗ ಅದು ಪಲ್ಟಿಯಾಗಿ ಸ್ಫೋಟಗೊಂಡಿದೆ.

NASIK MAN DIES IN TESLA ACCIDENT
ನಾಸಿಕ್​ ಯುವಕ ಸಾವು (ETV Bharat)

By ETV Bharat Karnataka Team

Published : Oct 30, 2024, 4:00 PM IST

ನಾಸಿಕ್ (ಮಹಾರಾಷ್ಟ್ರ)​:ಐಷಾರಾಮಿ ಕಾರುಗಳಲ್ಲಿ ಒಂದಾಗಿರುವ ಟೆಸ್ಲಾ ರಸ್ತೆಯಲ್ಲಿ ಪಲ್ಟಿಯಾಗಿ ಸ್ಫೋಟಗೊಂಡ ಪರಿಣಾಮ ಮಹಾರಾಷ್ಟ್ರ ಮೂಲದ ಯುವಕ ಮತ್ತು ಆತನ ಇಬ್ಬರು ಸ್ನೇಹಿತರು ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.

ಮಹಾರಾಷ್ಟ್ರದ ನಾಸಿಕ್​ ಮೂಲದ ದಿಗ್ವಜಯ್​ ರಾಜೇಂದ್ರ ಔಸರ್ಕರ್​ ಮೃತ ಯುವಕ. ತನ್ನ ಗೆಳತಿಯ ಹುಟ್ಟುಹಬ್ಬ ಆಚರಣೆ ಹಿನ್ನೆಲೆ ಹೊಸದಾಗಿ ಖರೀದಿಸಿದ್ದ ಟೆಸ್ಲಾ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ.

ದಿಗ್ವಿಜಯ್​ ಅವರು ಅಮೆರಿಕದಲ್ಲಿ ಮೆಕಾನಿಕಲ್​ ಇಂಜಿನಿರಿಂಗ್​ ಪದವಿಯನ್ನು ಪಡೆದಿದ್ದರು. ನಂತರ ಕೆನಡಾದಲ್ಲಿ ಉತ್ತಮ ಕಂಪನಿಯಲ್ಲಿ ಕೆಲಸ ಪಡೆದಿದ್ದರು. ತನ್ನ ಗೆಳತಿ ಝಲಕ್​ ಪಟೇಲ್​ ಬರ್ತಡೇ ಹಿನ್ನೆಲೆ ದಿಗ್ವಜಯ್​ ಮತ್ತು ಆತನ ಸ್ನೇಹಿತರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದಾದ ಬಳಿಕ ತಮ್ಮ ಹೊಸ ಕಾರು ಟೆಸ್ಲಾದಲ್ಲಿ ಲಾಂಗ್​ ಡ್ರೈವ್​ ಹೋಗಿದ್ದರು. ಈ ಸಮಯದಲ್ಲಿ ತಕ್ಷಣಕ್ಕೆ ಕಾರು ಡೆಡ್​ ಸ್ಟಾಪ್​ನಲ್ಲಿ ಪಲ್ಟಿಯಾಗಿದ್ದು, ಕಬ್ಬಿಣದ ಕಂಬಕ್ಕೆ ಡಿಕ್ಕಿಯಾಗಿ ಸ್ಫೋಟಗೊಂಡಿದೆ. ಝಲಕ್​ ಹೊರತುಪಡಿಸಿ ಇನ್ನುಳಿದ ಮೂವರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಉಳಿದಿಬ್ಬರು ಗುಜರಾತ್​ ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ.

ದಿಗ್ವಿಜಯ್​ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಇತ್ತ ನಾಸಿಕ್​ನ ಮನೆಯಲ್ಲಿ ಮೌನ ಆವರಿಸಿದೆ. ಆತನ ತಂದೆ ಮತ್ತು ಸಹೋದರಿ ಕೆನಡಾಗೆ ತೆರಳಿದ್ದಾರೆ. ಪ್ರಕರಣ ಸಂಬಂಧ ಕೆನಡಾ ಪೊಲೀಸರು ಕೂಡ ತನಿಖೆ ನಡೆಸಿದ್ದಾರೆ. 15 ದಿನದ ಹಿಂದಷ್ಟೇ ದಿಗ್ವಿಜಯ್​ನನ್ನು ಆತನ ಪೋಷಕರು ಭೇಟಿಯಾಗಿ ಬಂದಿದ್ದರು, ಇದೀಗ ಈ ಸಾವಿನ ಸುದ್ದಿ ಅವರಿಗೆ ಬರಸಿಡಿಲಿನಂತೆ ಬಂದೆರಗಿದೆ.

ಕುಟುಂಬದ ಇತರೆ ಸದಸ್ಯರ ವೀಸಾ ಅವಧಿ ಮುಗಿದಿದ್ದು, ಆತನ ತಂದೆ ಮತ್ತು ಸಹೋದರಿ ಮಾತ್ರ ಕೆನಡಾಗೆ ಪ್ರಯಾಣ ಬೆಳೆಸಿದ್ದಾರೆ. ಇದೇ ಸಮಯದಲ್ಲಿ ಕೆನಡಾ ಮತ್ತು ಭಾರತದ ನಡುವಿನ ಸಂಬಂಧಗಳ ಈ ದುರಂತ ಘಟನೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ದಿಗ್ವಿಜಯ್​ ಸೋದರ ಸಂಬಂಧಿ ಕೇತನ್​ ಔಸರ್ಕರ್​ ತಿಳಿಸಿದ್ದಾರೆ.

ಇದನ್ನೂ ಓದಿ: ಈ ಊರಲ್ಲಿ ಕಳೆದ 70 ವರ್ಷಗಳಿಂದ ದೀಪಾವಳಿಯನ್ನ ಆಚರಿಸಿಯೇ ಇಲ್ಲ: ಏಕೆ ಅಂತೀರಾ?

ABOUT THE AUTHOR

...view details