ಕರ್ನಾಟಕ

karnataka

ETV Bharat / bharat

26/11ರ ಮುಂಬೈ ದಾಳಿಗೆ ಅಂದಿನ ಸರ್ಕಾರ ತಕ್ಕ ಪ್ರತ್ಯುತ್ತರ ನೀಡಲಿಲ್ಲ: ಜೈಶಂಕರ್​

2008 ರಲ್ಲಿ ಪಾಕಿಸ್ತಾನ ಉಗ್ರರು ನಡೆಸಿದ ಮುಂಬೈ ದಾಳಿಗೆ ಮುಂದಿನ ತಿಂಗಳು 16 ವರ್ಷ ಕಳೆಯಲಿದೆ. ಈ ಕಹಿನೆನಪನ್ನು ಸ್ಮರಿಸಿರುವ ವಿದೇಶಾಂಗ ಸಚಿವರು, ಈ ಕೃತ್ಯಕ್ಕೆ ದೇಶ ಪ್ರತ್ಯುತ್ತರ ನೀಡಿಲ್ಲ ಎಂದಿದ್ದಾರೆ.

26/11 ಮುಂಬೈ ದಾಳಿ
26/11 ಮುಂಬೈ ದಾಳಿ (ETV Bharat)

By ETV Bharat Karnataka Team

Published : 5 hours ago

ಮುಂಬೈ (ಮಹಾರಾಷ್ಟ್ರ) :ಭಾರತ ಕಂಡ ಭೀಕರ ಭಯೋತ್ಪಾದಕ ದಾಳಿ, 160 ಅಮಾಯಕರ ಸಾವಿಗೆ ಕಾರಣವಾಗಿದ್ದ 26/11 ಮುಂಬೈ ದಾಳಿಗೆ ಅಂದಿನ ಸರ್ಕಾರ ತಕ್ಕ ಪ್ರತ್ಯುತ್ತರ ನೀಡಿರಲಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾನುವಾರ ಹೇಳಿದ್ದಾರೆ.

ದೇಶವನ್ನೇ ಸ್ತಬ್ಧ ಮಾಡಿದ್ದ ಘಟನೆಯ ವಿರುದ್ಧ ಸರ್ಕಾರ ದಿಟ್ಟ ಕ್ರಮ ಕೈಗೊಂಡಿರಲಿಲ್ಲ. ಈಗ ಅಂತಹ ಯಾವುದೇ ಘಟನೆಗಳು ನಡೆಯಲು ಸಾಧ್ಯವಿಲ್ಲ. ಕಾರಣ ದೇಶ ಬದಲಾಗಿದೆ ಎಂದು ವಿದೇಶಾಂಗ ಸಚಿವರು ಹಿಂದಿನ ಯುಪಿಎ​ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದರು.

ಮುಂಬೈನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಮುಂಬೈ ಭಾರತ ಮತ್ತು ವಿಶ್ವಕ್ಕೆ ಭಯೋತ್ಪಾದನೆ ನಿಗ್ರಹದ ಸಂಕೇತವಾಗಿದೆ. ಭಯೋತ್ಪಾದಕ ದಾಳಿಗೆ ತುತ್ತಾದ ಹೋಟೆಲ್​​ನಲ್ಲಿಯೇ ಉಗ್ರ ನಿಗ್ರಹ ಸಮಿತಿ ಸಭೆಯನ್ನು ನಡೆಸಿದ್ದೇವೆ. ಈ ಮೂಲಕ ದೇಶ ಭಯೋತ್ಪಾದನೆ ವಿರುದ್ಧ ಪ್ರಬಲವಾಗಿ ನಿಂತಿದೆ. ಅದರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದೆ ಎಂದು ಜೈಶಂಕರ್ ಪ್ರತಿಪಾದಿಸಿದರು.

ದೇಶ ಇಂದು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿದೆ. ಹೀಗಾಗಿ ಎಲ್ಲಿಯೇ ಉಗ್ರ ದಾಳಿ ನಡೆದರೂ, ಆ ಬಗ್ಗೆ ಮಾತನಾಡುತ್ತೇವೆ. ಉಗ್ರವಾದದ ವಿರುದ್ಧ ಬಹಿರಂಗ ಹೋರಾಟ ನಮ್ಮದಾಗಿದೆ. ಕೆಲವರು ಹಗಲಲ್ಲಿ ವಿರೋಧಿಸಿ, ರಾತ್ರಿ ಭಯ ಪಡುತ್ತಾರೆ. ಎಲ್ಲವೂ ಸರಿಯಾಗಿದೆ ಎಂದು ನಾಟಕ ಮಾಡುವುದು ಸರಿಯಲ್ಲ ಎಂದು ಪಾಕಿಸ್ತಾನದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಹಿಂದಿನ ಭಾರತಕ್ಕೂ, ಇಂದಿನ ಭಾರತಕ್ಕೂ ವ್ಯತ್ಯಾಸವಿದೆ. ಭಯೋತ್ಪಾದನೆಯನ್ನು ಕಟುವಾಗಿ ವಿರೋಧಿಸುತ್ತೇವೆ. ಉತ್ತರಿಸಬೇಕಾದ ಜಾಗದಲ್ಲಿ ಧ್ವನಿ ಎತ್ತುತ್ತೇವೆ ಎಂದು ಅವರು ಹೇಳಿದರು.

ಭಾರತ- ಚೀನಾ ಮಧ್ಯೆ ಸಹಜಸ್ಥಿತಿ:ಇನ್ನು, ಭಾರತ ಮತ್ತು ಚೀನಾ ಶೀಘ್ರದಲ್ಲೇ ಪೂರ್ವ ಲಡಾಖ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಗಡಿ ಗಸ್ತು ತಿರುಗುವುದನ್ನು ಪುನರಾರಂಭಿಸಲಿವೆ. ಗಡಿ ಬಿಕ್ಕಟ್ಟು ಉಂಟಾಗುವ ಮೊದಲು 2020 ರಲ್ಲಿ ಇದ್ದ ವ್ಯವಸ್ಥೆಯನ್ನು ಮರುಸ್ಥಾಪಿಸಲಾಗುವುದು ಎಂದು ಜೈಶಂಕರ್ ಹೇಳಿದರು.

26/11 ಕಹಿನೆನಪು:ಮುಂಬೈನ ತಾಜ್​​​​​ ಹೋಟೆಲ್​ ಮೇಲೆ ಪಾಕಿಸ್ತಾನ ಉಗ್ರರು ದಾಳಿ ಮಾಡಿ ಅಟ್ಟಹಾಸ ಮೆರೆದಿದ್ದರು. 2008ರ ನವೆಂಬರ್​​ 26ರ ರಾತ್ರಿ ವೇಳೆ ವಾಣಿಜ್ಯ ನಗರ ನಡುಗಿ ಹೋಗಿತ್ತು. ಕೈಯಲ್ಲಿ ಮದ್ದುಗುಂಡು, ಬಂದೂಕು ಹಿಡಿದಿದ್ದ 10 ಮಂದಿ ಲಷ್ಕರ್-ಎ-ತೋಯ್ಬಾ ಸಂಘಟನೆಯ ಉಗ್ರರು ರಕ್ತದೋಕುಳಿ ಆಡಿದ್ದರು. ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿ 166 ಮಂದಿಯನ್ನು ಬಲಿ ಪಡೆದಿದ್ದರು. ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದರು.

ನಾಲ್ಕು ದಿನಗಳ ಕಾಲ ಹೋಟೆಲ್​​ನಲ್ಲಿ ಅಡಗಿದ್ದ ಉಗ್ರರು, ಭದ್ರತಾ ಪಡೆಯ 18 ಯೋಧರನ್ನು ಕೊಂದಿದ್ದರು. ಬಳಿಕ ಭಾರತೀಯ ಸೇನೆ ಒಟ್ಟು 10 ಮಂದಿ ಉಗ್ರರನ್ನು ಹತ್ಯೆ ಮಾಡಿ, ಉಗ್ರ ಅಜ್ಮಲ್ ಕಸಬ್​​ನನ್ನು ಜೀವಂತವಾಗಿ ಸೆರೆ ಹಿಡಿದಿತ್ತು. ಬಳಿಕ ಆತನನ್ನು ನವೆಂಬರ್ 21, 2012ರಲ್ಲಿ ಪುಣೆಯ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಯಿತು.

ಇದನ್ನೂ ಓದಿ:'ನಿಲ್ಲಿ, ಯೋಚಿಸಿ, ಮುಂದುವರಿಯಿರಿ': ಡಿಜಿಟಲ್‌ ಅರೆಸ್ಟ್​ ತಡೆಗೆ ಪ್ರಧಾನಿ ಮೋದಿ 3 ಸೂತ್ರ

ABOUT THE AUTHOR

...view details