ಹೈದರಾಬಾದ್: ಪ್ರೀತಿಪಾತ್ರರ ಕುರಿತು ಪ್ರೀತಿ, ಕಾಳಜಿ ಮತ್ತು ಸುರಕ್ಷತೆಯನ್ನು ಟೆಡ್ಡಿಯಂತಹ ಉಡುಗೊರೆ ನೀಡಿ ಹೇಳುವುದಕ್ಕಿಂತ ಉತ್ತಮ ಮಾರ್ಗ ಇಲ್ಲ. ಇದೇ ಕಾರಣಕ್ಕೆ ವ್ಯಾಲಂಟೈನ್ ವಾರದ ನಾಲ್ಕನೇ ದಿನವನ್ನು ಟೆಡ್ಡಿ ದಿನವಾಗಿ ಆಚರಿಸಲಾಗುತ್ತದೆ.
ಪ್ರತಿ ವರ್ಷ ಫೆಬ್ರವರಿ 10ರಂದು ಟೆಡ್ಡಿ ದಿನವಾಗಿ ಆಚರಿಸಲಾಗುತ್ತದೆ. ಈ ದಿನದಂದು ಪ್ರೀತಿ ಪಾತ್ರರನ್ನು ಎಷ್ಟು ಕಾಳಜಿ ಮಾಡುತ್ತೀರಾ ಎಂಬುದನ್ನು ತಿಳಿಸಲು ಸಿಗುವ ಅವಕಾಶದ ದಿನವಾಗಿದೆ. ಅದರಲ್ಲೂ ಟೆಡ್ಡಿಯಂತಹ ಉಡುಗೊರೆ ನೀಡುವ ಮೂಲಕ ನಿಮ್ಮ ಪ್ರೀತಿಪಾತ್ರರ ಕುರಿತು ಭಾವನೆ ವ್ಯಕ್ತಪಡಿಸಬಹುದು.
ಟೆಡ್ಡಿ ಹುಟ್ಟಿದ ಕಥೆ: ನವೆಂಬರ್ 14, 1902ರಲ್ಲಿ ಅಧ್ಯಕ್ಷ ರೂಸ್ವೆಲ್ಟ್ ಅವರನ್ನು ಮಿಸ್ಸಿಸ್ಸಿಪ್ಪಿಯ ಗವರ್ನರ್ ಆಂಡ್ರ್ಯೂ ಹೆಚ್ ಲಾಂಗಿನೊ ಅವರು ಬೇಟೆಗೆ ಆಹ್ವಾನಿಸಿದ್ದರು. ಇದಕ್ಕೆ ವಿರುದ್ಧವಾಗಿ ಮತ್ತೊಬ್ಬ ಬೇಟೆಗಾರ ಆತನ ಪಕ್ಷದಲ್ಲಿದ್ದ. ರೂಸ್ವೆಲ್ಟ್ ಈ ಬೇಟೆಯಲ್ಲಿ ಯಾವುದೇ ಕರಡಿಯನ್ನು ಕಾಣಲಿಲ್ಲ. ಆದರೆ ಆತನ ಸಹಾಯಕ ಹೋಲ್ಟ್ ಕೊಲಿಯರ್ ಕಪ್ಪು ಕರಡಿಯೊಂದನ್ನು ಮರಕ್ಕೆ ಕಟ್ಟಿಹಾಕಿದ್ದನು.
ಕೊಲಿಯರ್ ರೊಸ್ವೆಲ್ಟ್ ಕರೆದು ಕಪ್ಪು ಕರಡಿಯನ್ನು ಶೂಟ್ ಮಾಡುವಂತೆ ತಿಳಿಸಿದ. ಆದರೆ, ಇದಕ್ಕೆ ರೂಸ್ವೆಲ್ಟ್ ನಿರಾಕರಿಸಿದ. ಈ ಘಟನೆ ಮರುದಿನ ದೇಶದೆಲ್ಲೆಡೆ ಪತ್ರಿಕೆಯಲ್ಲಿ ಭಾರೀ ಸುದ್ದಿಯಾಯಿತು. ರೂಸ್ವೆಲ್ಟ್ ಕಪ್ಪು ಕರಡಿಯನ್ನು ಶೂಟ್ ಮಾಡಲು ನಿರಾಕರಿಸಿದ ಎಂಬ ಸುದ್ದಿ ಎಲ್ಲೆಡೆ ಹರಡಿತು.
ಈ ಲೇಖನ ಓದಿದ ಬಳಿಕ ರಾಜಕೀಯ ಕಾರ್ಟೂನಿಸ್ಟ್ ಕ್ಲಿಫರ್ಡ್ ಬೆರ್ರಿಮನ್, ಅಧ್ಯಕ್ಷ ಕಪ್ಪು ಕರಡಿಯನ್ನು ಶೂಟ್ ಮಾಡಲು ನಿರಾಕರಿಸಿದ ಅಂಶದ ಕುರಿತು ವ್ಯಂಗ್ಯಚಿತ್ರ ಬರೆದ. ಈ ವ್ಯಂಗ ಚಿತ್ರ ನವೆಂಬರ್ 16, 1902ರಂದು ವಾಷಿಂಗ್ಟನ್ ಪೋಸ್ಟ್ನಲ್ಲಿ ಪ್ರಕಟವಾಯಿತು. ಇದನ್ನು ಕಂಡ ಬಳಿಕ ನ್ಯೂಯಾರ್ಕ್ ಕ್ಯಾಂಡಿ ಅಂಗಡಿ ಮಾಲೀಕ ಮೊರ್ರಿಸ್ ಮಿಕ್ಟೋಮ್ ಮತ್ತು ಆತನ ಪತ್ನಿ ರೋಸ್ ಸ್ಟಫ್ಡ್ ಪ್ರಾಣಿಗಳ ಆಟಿಕೆ ಮಾಡಿದರು.
ಈ ವೇಳೆ ಅವರು ಕರಡಿ ಆಟಿಕೆಯನ್ನು ಅಧ್ಯಕ್ಷರಿಗೆ ಸಮರ್ಪಣೆ ಮಾಡಿದರು. ಇದಕ್ಕೆ ಟೆಡ್ಡಿ ಬೇರ್ ಎಂದು ಹೆಸರಿಸಿದರು. ರೂಸ್ವೆಲ್ಟ್ ಹೆಸರಿಗೆ ಅನುಮತಿ ಪಡೆದ ಬಳಿಕ ಈ ಆಟಿಕೆ ಕರಡಿಯ ವ್ಯಾಪಾಕ ಉತ್ಪಾದನೆ ಶುರುವಾಯಿತು. ಈ ಆಟಿಕೆ ಕರಡಿಗಳು ತುಂಬಾ ಜನಪ್ರಿಯವಾಯಿತು. ಮೊರ್ರಿಸ್ ಮಿಕ್ಟೋಮ್ ಶೀಘ್ರದಲ್ಲೇ ತನ್ನದೇ ಆದ ಆಟಿಕೆ ಕಂಪನಿ ಐಡಿಯಲ್ ಟಾಯ್ ಕಂಪನಿಯನ್ನು ಪ್ರಾರಂಭಿಸಿದ. ಇದನ್ನೂ ಇಂದಿಗೂ ಕಾಣಬಹುದಾಗಿದೆ.
ಇಂತಹ ಟೆಡ್ಡಿಬೇರ್ ಇದೀಗ ಪ್ರೀತಿಯಲ್ಲಿ ಪ್ರಮುಖ ಪಾತ್ರ ಹೊಂದಿದೆ. ಇದೇ ಕಾರಣಕ್ಕೆ ಈ ಟೆಡ್ಡಿ ಬೇರ್ ನೀಡುವಾಗ ಎಚ್ಚರಿಕೆವಹಿಸುವುದು ಅವಶ್ಯ. ಸಾಂಪ್ರದಾಯಕ ಟೆಡ್ಡಿಗಳು ಪ್ರೀತಿಯ ಸಂಕೇತವಾಗಿ ಇಂದಿಗೂ ಅನೇಕರ ಹೃದಯಲ್ಲಿ ಸ್ಥಾನ ಪಡೆದಿದೆ. ನಿಮ್ಮ ಪ್ರೀತಿಪಾತ್ರರಿಗೆ ಪ್ರೀತಿ ಜೊತಗೆ ಕಾಳಜಿಗೆ ನೀಡುವ ಮೂಲಕ ನಿಮ್ಮ ಭಾವನೆಗಳನ್ನು ತಿಳಿಸಲು ಇದಕ್ಕಿಂತ ಉತ್ತಮ ಉಡುಗೊರೆ ಕೂಡ ಇಲ್ಲ.
ಇದನ್ನೂ ಓದಿ: ಚಾಕೋಲೆಟ್ನೊಂದಿಗೆ ಪ್ರೀತಿಯ ಬಂಧದ ಸಿಹಿ ಮತ್ತಷ್ಟು ಹೆಚ್ಚಿಸಿಕೊಳ್ಳಿ