ಕರ್ನಾಟಕ

karnataka

ETV Bharat / bharat

ವಿಮಾನಯಾನ ಸಿಬ್ಬಂದಿ ಯೂನಿಫಾರಂಗೆ ಫ್ಯಾಷನ್​ ಟಚ್​

ಹೈದರಾಬಾದ್​ನ ಫ್ಯಾಷನ್​ ಡಿಸೈನರ್​ ಶ್ವೇತಾ ರೆಡ್ಡಿ ಬಾರ್ಬಿ ಥೀಮ್​ ಆಧಾರಿತ ಯುನಿಫಾರಂ ಅನ್ನುವಿಮಾನಯಾನ ಸಿಬ್ಬಂದಿಗೆ ವಿನ್ಯಾಸ ಮಾಡಿದ್ದಾರೆ.

swetha-reddy-
ಶ್ವೇತಾ ರೆಡ್ಡಿ

By ETV Bharat Karnataka Team

Published : Jan 20, 2024, 12:02 AM IST

ಹೈದರಾಬಾದ್​:ವಿಮಾನ ಪ್ರಯಾಣಿಕರ ಸೇವೆಯಲ್ಲಿ ನಿರತರಾಗುವ ಗಗನಸಖಿ (ಏರ್​ ಹೋಸ್ಟೆಸ್​​) ಮತ್ತು ಪೈಲಟ್​​ಗಳು ವಿಶೇಷ ಡ್ರೆಸ್​ ಕೋಡ್​ನಿಂದಲೇ ಗಮನ ಸೆಳೆಯುತ್ತಾರೆ. ಇದಕ್ಕಾಗಿ ಪ್ರತ್ಯೇಕವಾದ ಯುನಿಫಾರಂ ಹೊಂದಿರುತ್ತಾರೆ. ಆದರೆ, ಗಗನಸಖಿಯರ ಈ ಯೂನಿಫಾರಂಗಳು ಹಲವು ವರ್ಷಗಳಿಂದ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಇದೀಗ ಹೈದರಾಬಾದ್​ನ ಫ್ಯಾಷನ್​ ಡಿಸೈನರ್​ ಶ್ವೇತಾ ರೆಡ್ಡಿ, ಪೈಲಟ್​​ಗಳಿಗೆ ಗ್ಲಾಮರಸ್ ಜೊತೆಗೆ ಆರಾಮದಾಯಕ​ ಡ್ರೆಸ್​ ಕೋಡ್​ ವಿನ್ಯಾಸಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ಅವರು ಬಾರ್ಬಿ ಥೀಮ್​ ಆಧಾರಿತ ಯುನಿಫಾರಂ ಅನ್ನು ಪೈಲಟ್​​ಗಳಿಗೆ ವಿನ್ಯಾಸ ಮಾಡಿದ್ದು, ಎಲ್ಲರನ್ನು ಆಕರ್ಷಿಸುತ್ತಿದೆ.

ನಾಗರಿಕ ವಿಮಾನಯಾದ ಸಚಿವಾಲಯದ ಸಿಬ್ಬಂದಿ ವಿನ್ಯಾಸಿತ ಡ್ರೆಸ್​ ಕೋಡ್​ ಅನ್ನು ಧರಿಸರಲು ಅವಕಾಶವನ್ನು ಹೊಂದಿರುತ್ತಾರೆ. ಈ ಸಂಬಂಧ ಮುತ್ತಿನ ನಗರಿಯಲ್ಲಿ ನಡೆಯುತ್ತಿರುವ ವಿಂಗ್ಸ್​​ ಇಂಡಿಯಾದಲ್ಲಿ ಮಳಿಗೆಯನ್ನು ಆಯೋಜಿಸಲಾಗಿದ್ದು. ಇಲ್ಲಿ ಈ ವಿಶೇಷ ಉಡುಪಿನ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಬಾಗ್ಪೇಟೆ ಆಯೋಜಿಸಿರುವ ವಿಂಗ್​​ ಇಂಡಿಯಾ 2024ನಲ್ಲಿ ನಕ್ಷತ್ರಾ ಏವಿಯೇಷನ್​​ ಅಲಯನ್ಸ್​ ಫ್ಯಾಷನ್​​ನ ನಿರ್ದೇಶಕಿ ಶ್ವೇತಾ ರೆಡ್ಡಿ, ತಮ್ಮ ವಿನ್ಯಾಸದ ದಿರಿಸಿನ ಅನಾವರಣ ಮಾಡಿದ್ದಾರೆ. ಈ ಕುರಿತು 'ಈಟಿವಿ ಭಾರತ್'​​ ಜೊತೆಗೆ ಮಾತನಾಡಿರುವ ಅವರು, ಮೂರೂವರೆ ವರ್ಷದ ಕಠಿಣ ಕೆಲಸದಿಂದ ಇದೀಗ ಅವಕಾಶ ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕೋವಿಡ್​​ ನಮಗೆ ಹೊಸ ಅವಕಾಶವನ್ನು ನೀಡಿದೆ. ನನ್ನ ಪೋಷಕರು ಕೂಡ ಎಲ್ಲ ಪೋಷಕರು ಬಯಸುವಂತೆ ನಾನು ಕೂಡ ಇಂಜಿನಿಯರ್​ ಮತ್ತು ಡಾಕ್ಟರ್​​ ಆಗಬೇಕು ಎಂದು ಬಯಸಿದರು. ಆದರೆ, ನನ್ನ ಆಸಕ್ತಿ ಫ್ಯಾಷನ್​ ಡಿಸೈನ್​ನಲ್ಲಿತ್ತು. ಇದಕ್ಕಾಗಿ ಹಲವು ಹೋರಾಟಗಳನ್ನು ನಡೆಸಿದ್ದೇವೆ. ಕೋವಿಡ್​ ಬಳಿಕ ನನ್ನ ವೃತ್ತಿ ಸಂಪೂರ್ಣವಾಗಿ ತಿರುವು ಪಡೆಯಿತು. ವಿವಿಧ ಸ್ಥಳಗಳಿಗೆ ಹಾರಾಟ ನಡೆಸುವಾಗ ವಿಮಾನಯಾನ ಸಿಬ್ಬಂದಿಗಳ ಯುನಿಫಾರಂ ಅನ್ನು ಪರೀಕ್ಷಿಸಿದೆ.

ಉತ್ತರ ಮತ್ತು ದಕ್ಷಿಣವೂ ವಿವಿಧ ರೀತಿಯ ಹವಾಮಾನ ಪರಿಸ್ಥಿತಿ ಹೊಂದಿದೆ. ಆದರೆ ಎಲ್ಲರೂ ಒಂದೇ ರೀತಿಯ ಉಡುಗೆಯನ್ನು ತೊಡುತ್ತಿದ್ದಾರೆ. ಅವರ ಉಡುಗೆಯಲ್ಲಿ ಬದಲಾವಣೆಯ ಅವಶ್ಯತೆ ಇದೆ ಎನ್ನಿಸುತ್ತು. ಈ ಹಿನ್ನೆಲೆಯಲ್ಲಿ ಈ ವಿನ್ಯಾಸಕ್ಕೆ ಮುಂದಾದೆ. ತಾಯಂದಿರ ದಿನ ಮತ್ತು ತಂದೆಯರ ದಿನಕ್ಕಾಗಿ ವಿಶೇಷ ಯೂನಿಫಾರಂ ಅನ್ನು ವಿನ್ಯಾಸ ಮಾಡಿದ್ದೇನೆ. ನಾನು ಇದೀಗ ಸಚಿವಾಲಯದ ಸಿಬ್ಬಂದಿಗಳ ಯೂನಿಫಾರಂ ಅನ್ನು ವಿನ್ಯಾಸ ಮಾಡುತ್ತಿದ್ದೇನೆ ಎಂದಿದ್ದಾರೆ.

ABOUT THE AUTHOR

...view details