ETV Bharat / bharat

ಇಂಡಿಯಾ ಬುಕ್​ ಆಫ್​​ ರೆಕಾರ್ಡ್ಸ್​​​ನಲ್ಲಿ ಸ್ಥಾನ ಪಡೆದ 3 ವರ್ಷದ ಪೋರ: ಸ್ಮರಣಶಕ್ತಿಗೆ ಸಿಕ್ತು ಬಿರುದು - super talent Telangana kid - SUPER TALENT TELANGANA KID

ತಮಿಳುನಾಡಿನಲ್ಲಿ ವಾಸಿಸುವ ತೆಲಂಗಾಣ ಮೂಲದ ಬಾಲಕ ತನ್ನ ಸ್ಮರಣಶಕ್ತಿಯಿಂದಲೇ ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​​​ನಲ್ಲಿ ಸ್ಥಾನ ಪಡೆದಿದ್ದಾನೆ. ಆತನ ಸಾಧನೆ ಬಗ್ಗೆ ತಿಳಿಯಿರಿ.

ಇಂಡಿಯಾ ಬುಕ್​ ಆಫ್​​ ರೆಕಾರ್ಡ್ಸ್​​​ನಲ್ಲಿ ಸ್ಥಾನ ಪಡೆದ 3 ವರ್ಷದ ಪೋರ
ಇಂಡಿಯಾ ಬುಕ್​ ಆಫ್​​ ರೆಕಾರ್ಡ್ಸ್​​​ನಲ್ಲಿ ಸ್ಥಾನ ಪಡೆದ 3 ವರ್ಷದ ಪೋರ (ETV Bharat)
author img

By ETV Bharat Karnataka Team

Published : Sep 7, 2024, 9:43 PM IST

ಕೊಯಮತ್ತೂರು (ತಮಿಳುನಾಡು): ಈಗಿನ ಮಕ್ಕಳ ಬುದ್ಧಿಮತ್ತೆ (ಐಕ್ಯೂ) ಅದ್ಭುತವಾಗಿದೆ. ಚಿಕ್ಕ ವಯಸ್ಸಿನಲ್ಲೇ ಅದ್ಭುತವನ್ನು ಸಾಧಿಸುವ ಶಕ್ತಿ ಇದೆ. ತೆಲಂಗಾಣ ಮೂಲದ ತಮಿಳುನಾಡಿನ ಮೂರೂವರೆ ವರ್ಷದ ಬಾಲಕನ ಸ್ಮರಣಶಕ್ತಿಯಿಂದ ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​​​ನಲ್ಲಿ ಸ್ಥಾನ ಪಡೆದಿದ್ದಾನೆ.

ನರ್ಸಿಂಗ್​​ನಲ್ಲಿರುವ ವಿರಾಜ ಗುರಪತಿ ಎಂಬ ಈ ಪುಟ್ಟ ಪೋರ ವಿಶ್ವದ 195 ದೇಶಗಳ ಧ್ವಜಗಳನ್ನು ಗುರುತಿಸುತ್ತಾನೆ. ಸ್ಪರ್ಧೆಯಲ್ಲಿ ರಾಷ್ಟ್ರ ಮತ್ತು ಅವುಗಳ ಧ್ವಜಗಳನ್ನು ಪಟಪಟನೆ ಹೇಳಿದ್ದಾನೆ. ಇದರಿಂದ ಆತನಿಗೆ ಇಂಟರ್​​ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೂಪರ್​ ಟ್ಯಾಲೆಂಟ್ ಕಿಡ್ ಎಂಬ ಬಿರುದು ನೀಡಿದೆ.

ವಿರಾಜ್​ ಗುರಪತಿ ಅವರ ತಂದೆ ತೆಲಂಗಾಣದ ಹೈದರಾಬಾದ್ ಮೂಲದ ಭಾರ್ಗವ ತೇಜ ಮತ್ತು ತಾಯಿ ಸ್ನೇಹಾ. ಭಾರ್ಗವ್​ ಅವರು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಅಣ್ಣಾಮಲೈ ಹುಲಿ ಸಂರಕ್ಷಿತ ಪ್ರದೇಶದ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿರಾಜ್​ ಶಿಶುವಿಹಾರದಲ್ಲಿ (ನರ್ಸಿಂಗ್​​) ಓದುತ್ತಿದ್ದಾನೆ. ಶಿಕ್ಷಣದಲ್ಲಿ ಮುಂದಿರುವ ಈತ ಶಿಕ್ಷಕರು ಹೇಳಿಕೊಟ್ಟ ಪಾಠಗಳನ್ನು ಕಂಠಪಾಠ ಮಾಡುವುದರಲ್ಲಿ ನಿಪುಣ. ವಿರಾಜ್​​ನ ಸ್ಮರಣಶಕ್ತಿಯನ್ನು ಹೆಚ್ಚಿಸಲು ಪೋಷಕರು ನಾನಾ ಕಸರತ್ತು ಮಾಡಿದ್ದಾರೆ. ಜಗತ್ತಿನ ರಾಷ್ಟ್ರಗಳ ಧ್ವಜಗಳನ್ನು ಗುರುತಿಸುವ ತರಬೇತಿ ನೀಡಿದ್ದಾರೆ. ಹೀಗಾಗಿ ಆತ, 195 ದೇಶಗಳ ಧ್ವಜಗಳನ್ನು ಗುರುತಿಸಿದ್ದಾನೆ.

ಪೋಷಕರು ಈಟಿವಿ ಭಾರತ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪುತ್ರನ ಸಾಹಸದ ಬಗ್ಗೆ ವಿವರಿಸಿದರು. ಮೂರೂವರೆ ವಯಸ್ಸಿನಲ್ಲೇ ವಿರಾಜ್ ದಾಖಲೆ ಮಾಡಿರುವುದು ಸಂತಸ ತಂದಿದೆ. ಆತ ಎಲ್ಲವನ್ನೂ ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾನೆ. ದೇಶಗಳ ಧ್ವಜವನ್ನಲ್ಲದೇ, ಪ್ರಾಣಿಗಳು, ಹಣ್ಣುಗಳು, ಆಕಾರಗಳು ಮತ್ತು ಬಣ್ಣಗಳ ಹೆಸರನ್ನೂ ಗುರುತಿಸುತ್ತಾನೆ. ನೃತ್ಯದಲ್ಲೂ ಹೆಚ್ಚಿನ ಆಸಕ್ತಿ ಹೊಂದಿದ್ದಾನೆ. ಕೌಶಲ್ಯ ಸುಧಾರಣೆಗೆ ತರಬೇತಿ ಕೊಡಿಸುತ್ತಿದ್ದೇವೆ. ತಮ್ಮ ಪುತ್ರನ ಸಾಧನೆಯನ್ನು ಗುರುತಿಸಿ ಇಂಟರ್​​ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 'ಸೂಪರ್ ಟ್ಯಾಲೆಂಟ್ ಕಿಡ್' ಮತ್ತು ಐಬಿಆರ್​ ಸಾಧಕ ಪ್ರಶಸ್ತಿಯನ್ನು ನೀಡಿದೆ ಎಂದು ತಿಳಿಸಿದರು.

ಇದನ್ನೂ ಓದಿ: ವಿವಾದಿತ ಟ್ರೈನಿ ಅಧಿಕಾರಿ ಪೂಜಾ ಖೇಡ್ಕರ್​ಗೆ ಕೇಂದ್ರ ಸರ್ಕಾರ ಶಾಕ್​: ಐಎಎಸ್​​ ಹುದ್ದೆಯಿಂದಲೇ ವಜಾ - centre govt action on puja khedkar

ETV Bharat Logo

Copyright © 2025 Ushodaya Enterprises Pvt. Ltd., All Rights Reserved.