ETV Bharat / spiritual

ಹಲವರಿಗೆ ಅದೃಷ್ಟ, ಕೆಲವರಿಗೆ ಅಶುಭ: ಹೀಗಿದೆ ಈ ವಾರದ ನಿಮ್ಮ ರಾಶಿ ಭವಿಷ್ಯ - Weekly Horoscope - WEEKLY HOROSCOPE

ಸೆಪ್ಟಂಬರ್ 8 ರಿಂದ 14ರ ವರೆಗಿನ ವಾರದ ರಾಶಿ ಭವಿಷ್ಯ: ನಿಮ್ಮ ರಾಶಿಯಲ್ಲಿ ಏನಿದೆ?

ವಾರದ ರಾಶಿ ಭವಿಷ್ಯ
ವಾರದ ರಾಶಿ ಭವಿಷ್ಯ (ETV Bharat)
author img

By ETV Bharat Karnataka Team

Published : Sep 8, 2024, 7:17 AM IST

ಮೇಷ: ಕೆಲಸದ ಸಂಬಂಧವಾಗಿ ತಲೆದೋರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ವಾರದ ಆರಂಭದಲ್ಲೇ ನೀವು ಸಾಕಷ್ಟು ಪರಿಶ್ರಮ ವಹಿಸಬೇಕಾಗಲಿದೆ. ಕಚೇರಿಯ ಮುಖ್ಯಸ್ಥರು ಹಾಗೂ ಸಹೋದ್ಯೋಗಿಗಳಿಂದ ನೀವು ನಿರೀಕ್ಷಿಸಿದ ಮಟ್ಟದ ಸಹಕಾರ ದೊರೆಯದ ಕಾರಣ ನಮಗೆ ಬೇಸರ ಆಗಬಹುದು. ಆದರೆ, ವಹಿವಾಟನ್ನು ಎತ್ತರಕ್ಕೆ ಬೆಳೆಸಬೇಕು ಎನ್ನುವ ನಿಮ್ಮ ಆಶಯವು ಒಬ್ಬರು ವಿಶೇಷವಾದ ವ್ಯಕ್ತಿಯ ಸಹಾಯದಿಂದ ಈಡೇರಲಿದೆ. ಪ್ರೀತಿ-ಪ್ರೇಮದ ವಿಷಯದಲ್ಲಿ ಎಲ್ಲವೂ ಸುಲಲಿತವಾಗಿರಲಿದೆ. ಜೀವನ ಸಂಗಾತಿಯೊಡನೆ ನಿಮ್ಮ ಸಂಬಂಧ ಗಟ್ಟಿಗೊಳ್ಳಲಿದ್ದು, ಒಟ್ಟಾಗಿ ಸಂತೋಷದ ಕ್ಷಣಗಳನ್ನು ಸವಿಯುವ ಸಾಕಷ್ಟು ಅವಕಾಶಗಳು ಈ ವಾರ ನಿಮ್ಮದಾಗಲಿವೆ. ವಾರಾಂತ್ಯದ ವೇಳೆಗೆ ನೀವು ನಿಮ್ಮ ಅತ್ಯುತ್ತಮ ಕೌಶಲ್ಯ ತೋರ್ಪಡಿಸಲಿದ್ದಲ್ಲಿ ಸೋಲು ಅನುಭವಿಸಬೇಕಾದ ಸಂದರ್ಭ ಎದುರಾಗುವ ಸಾಧ್ಯತೆ ಇದೆ. ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು, ನಿರ್ದಿಷ್ಟ ದಿನಚರಿಯನ್ನು ತಪ್ಪದೇ ಪಾಲಿಸುವುದು, ಇಂತಹ ಆರೋಗ್ಯಕರ ಅಭ್ಯಾಸಗಳ ಮೂಲಕ ನಿಮ್ಮ ಬಗ್ಗೆ ನೀವು ಸರಿಯಾದ ಕಾಳಜಿ ವಹಿಸುವ ಅಗತ್ಯ ಹೆಚ್ಚಿದೆ.

ವೃಷಭ: ನಿಮ್ಮ ಆದಾಯದ ರೀತಿ ಎಂದಿನಂತೆ ಇಲ್ಲದಿರುವ ಹಾಗೂ ಅನಗತ್ಯ ಖರ್ಚುಗಳ ಕಾರಣ ಈ ವಾರ ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಒತ್ತಡ ಅನುಭವಿಸುವ ಸಂಭವ ಇದೆ. ಉದ್ಯೋಗಸ್ಥರು ಹೊಸ ಉದ್ಯೋಗಾವಕಾಶ, ವೇತನ ಹೆಚ್ಚಳ, ಸ್ಥಾನ ಬದಲಾವಣೆ, ಮೊದಲಾದವುಗಳಿಗೆ ದೀರ್ಘಕಾಲ ಕಾಯಬೇಕಾಗುತ್ತದೆ. ವ್ಯಾಪಾರಸ್ಥರಿಗೆ ಈ ವಾರ ಲಾಭದಾಯಕವಾಗಿದ್ದು, ವಾರದ ಮಧ್ಯದ ವೇಳೆಗೆ ಉತ್ತಮ ಆದಾಯ ಬರುವ ನಿರೀಕ್ಷೆ ಇದೆ. ಬೇರೆ ಉದ್ಯೋಗದಲ್ಲಿ ಇರುವವರು ವ್ಯಾಪಾರದಲ್ಲಿ ತೊಡಗಿಕೊಳ್ಳಲು ಇದು ಉತ್ತಮ ಸಮಯ. ವಾರಾಂತ್ಯ ನಿಮ್ಮ ಪಾಲಿಗೆ ಶುಭದಿನವಾಗಿರಲಿದ್ದು, ನಿಮ್ಮ ಮಕ್ಕಳ ಬಗ್ಗೆ ಸಂತಸಕರ ಸುದ್ದಿಯನ್ನು ಕೇಳಲಿದ್ದೀರಿ. ನೀವು ಹಾಗೂ ನಿಮ್ಮ ಸಂಗಾತಿ ಇನ್ನಷ್ಟು ಹತ್ತಿರವಾಗಲಿದ್ದು, ಅವರಿಂದ ಅನಿರೀಕ್ಷಿತ ಉಡುಗೊರೆಯೂ ಸಿಗಬಹುದು. ಇದರ ಬಳಿಕ, ನೀವು ಮದುವೆಯ ಬಳಿಕವೂ ನಿಮ್ಮ ಸಂಗಾತಿಯಿಂದ ಸಂತೋಷ ಮತ್ತು ಸಹಕಾರ ಪಡೆಯಲಿದ್ದೀರಿ.

ಮಿಥುನ: ಈ ವಾರ ನಿಮಗೆ ಒಳ್ಳೆಯದಾಗಿದ್ದು, ಇದರ ಪೂರ್ತಿ ಪ್ರಯೋಜನ ಪಡೆಯಬೇಕಾದಲ್ಲಿ ನೀವು ನಿಮ್ಮ ಕಾರ್ಯಕ್ರಮ ಹಾಗೂ ಶಕ್ತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಉದ್ಯೋಗದ ಸಂಬಂಧವಾಗಿ ನೀವು ಸಣ್ಣಪುಟ್ಟ ಹಾಗೂ ದೀರ್ಘಕಾಲಿಕ ಸೇರಿದಂತೆ ಸಾಕಷ್ಟು ಪ್ರಯಾಣ ಮಾಡಬೇಕಾಗಿ ಬರಬಹುದು. ಆಯಾಸಕರವಾದರೂ, ಇದರಿಂದ ಸಾರ್ಥಕತೆ ಸಿಗುತ್ತದೆ. ಪ್ರೀತಿಯ ವಿಷಯದಲ್ಲಿ ಚೆನ್ನಾಗಿ ಯೋಚಿಸಿ ನಂತರ ನಿರ್ಧಾರ ಕೈಗೊಳ್ಳಿ. ವಾರಾಂತ್ಯದ ವೇಳೆಗೆ ಕುಟುಂಬದೊಂದಿಗೆ ಯಾವುದಾದರೂ ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸ ಕೈಗೊಳ್ಳಬಹುದು. ಸಾಂಸಾರಿಕ ಬಿಕ್ಕಟ್ಟುಗಳು ತಲೆದೋರಿ ಇದರಿಂದ ನಿಮಗೆ ಮಾನಸಿಕ ಒತ್ತಡ ಉಂಟಾಗಬಹುದು. ನಿಮ್ಮ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳುವುದು ಬಹಳ ಮುಖ್ಯ, ತಪ್ಪಿದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಬೇಕಾದ ಸಂದರ್ಭ ಬರಬಹುದು. ನೀವು ಅಧ್ಯಯನ ಮಾಡುತ್ತಿದ್ದಲ್ಲಿ ಅಥವಾ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಲ್ಲಿ, ಗುರಿ ತಲುಪಲು ಹೆಚ್ಚಿನ ಪರಿಶ್ರಮ ಹಾಕಬೇಕಿದೆ. ಜೊತೆಗೆ, ಒಬ್ಬರು ವಿಶೇಷ ವ್ಯಕ್ತಿಯೊಂದಿಗೆ ಒಂದು ಮಹತ್ತರ ಯೋಜನೆಯಲ್ಲಿ ಪಾಲ್ಗೊಳ್ಳುವ ಅವಕಾಶವಿದೆ.

ಕರ್ಕಾಟಕ: ಉದ್ಯೋಗದಲ್ಲಿ ಹಿರಿಯರು ಹಾಗೂ ಕಿರಿಯರು ಇಬ್ಬರೂ ನಿಮಗೆ ಬೆಂಬಲ ನೀಡಲಿದ್ದಾರೆ. ಕಠಿಣ ಪರಿಶ್ರಮ ಹಾಗೂ ಬದ್ಧತೆಯ ಕೊಡುಗೆಯಾಗಿ ನೀವು ನಿಮ್ಮೆಲ್ಲಾ ಬಾಕಿ ಕೆಲಸಗಳನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸಲಿದ್ದೀರಿ. ಈ ವಾರದಲ್ಲಿ ನೀವು ಮನೆ, ಕಟ್ಟಡ ಅಥವಾ ಕಾರು ಖರೀದಿಸಬಹುದು. ಈ ವಾರದಲ್ಲಿ ನೀವು ಹೆಚ್ಚಿನ ಸಮಯ ಕಂಪ್ಯೂಟರ್‌ ಬಳಕೆಯಲ್ಲಿ ವ್ಯಯಿಸುವ ಸಾಧ್ಯತೆ ಇದೆ. ನಿಮ್ಮ ವಹಿವಾಟನ್ನು ಬೆಳೆಸುವ ಅಥವಾ ಹೊಸ ಬದಲಾವಣೆ ಅಳವಡಿಸಿಕೊಳ್ಳುವ ಯೋಚನೆಯಲ್ಲಿದ್ದರೆ, ಅದರ ಬಗ್ಗೆ ನಿಮ್ಮ ಸ್ನೇಹಿತರ ಸಲಹೆ ಪಡೆದು, ಚೆನ್ನಾಗಿ ಯೋಚಿಸಿ ಮುಂದಡಿ ಇಡುವುದು ಸೂಕ್ತ. ವಾರಾಂತ್ಯದ ವೇಳೆಗೆ, ನಿಮ್ಮ ಸ್ನೇಹಿತೆಯ ಸಹಾಯದಿಂದ ಎಲ್ಲಾ ಕೆಲಸಗಳು ಸುಲಭವಾಗಿ ನಡೆಯಲಿವೆ. ಪ್ರೀತಿ-ಪ್ರೇಮದ ವಿಷಯಕ್ಕೆ ಸಂಬಂಧಿಸಿದಂತೆ ಈ ವಾರ ಒಳ್ಳೆಯ ಸಮಯ. ನಿಮ್ಮ ಪ್ರೀತಿಯ ಬಗ್ಗೆ ನಿಮ್ಮ ಕುಟುಂಬದ ಕಡೆಯಿಂದ ಯಾವುದೇ ತಕರಾರು ಇರುವುದಿಲ್ಲ ಹಾಗೂ ನಿಮ್ಮ ಮದುವೆಗೂ ಒಪ್ಪಿಗೆ ಸೂಚಿಸಬಹುದು. ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲು ಈ ವಾರ ಬಹಳಷ್ಟು ಅವಕಾಶ ದೊರೆಯಲಿದೆ. ನಿಮ್ಮ ವೈವಾಹಿಕ ಜೀವನ ಉತ್ಕೃಷ್ಟವಾಗಿ ನಡೆಯಲಿದೆ.

ಸಿಂಹ: ಈ ವಾರದ ಆರಂಭದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುವಂತಹ ಸುದ್ದಿ ಕೇಳಲಿದ್ದೀರಿ. ನೀವು ಮಾಡುವ ವಿಶೇಷ ಕಾರ್ಯದಿಂದಾಗಿ ನಿಮ್ಮ ಉದ್ಯೋಗದ ಸ್ಥಳದಲ್ಲಿ ಅಥವಾ ಸಮುದಾಯದಲ್ಲಿ ನಿಮಗೆ ವಿಶೇಷ ಮನ್ನಣೆ ದೊರೆಯಲಿದೆ. ವಿದೇಶದಲ್ಲಿ ಅಧ್ಯಯನ ಕೈಗೊಳ್ಳಲು ಅಥವಾ ಉದ್ಯೋಗ ಬದಲಾವಣೆಯ ಬಗ್ಗೆ ಚಿಂತಿಸುತ್ತಿರುವವರಿಗೆ ಈ ವಾರ ಮಹತ್ತರವಾದ ಬದಲಾವಣೆ ತರಲಿದೆ. ನಿಮ್ಮ ಕನಸುಗಳು ಸಾಕಾರಗೊಳ್ಳಲಿವೆ ಹಾಗೂ ನೀವು ಯಶಸ್ಸು ಗಳಿಸಲಿದ್ದೀರಿ. ವ್ಯಾಪಾರ-ವಹಿವಾಟು ನಡೆಸುತ್ತಿರುವವರಿಗೆ ಈ ವಾರದ ಮಧ್ಯದ ವೇಳೆಗೆ ಒಳ್ಳೆಯ ಸಮಯ ಬರಲಿದೆ. ಬಾಜಿ ಕಟ್ಟುವುದು, ಲಾಟರಿ ಆಡುವುದು ಅಥವಾ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರು ಮುಂದಿನ ಹೆಜ್ಜೆ ಇಡುವ ಮುನ್ನ ಸರಿಯಾಗಿ ಯೋಚಿಸಿ ಮುನ್ನಡೆಯುವುದು ಉತ್ತಮ. ನಿಮ್ಮ ಹಾಗೂ ನಿಮ್ಮ ಪ್ರೇಮಿಯ ನಡುವೆ ಯಾವುದೇ ಸಮಸ್ಯೆ ಇದ್ದಲ್ಲಿ, ಅದನ್ನು ನಿಮ್ಮ ಸ್ನೇಹಿತೆಯ ಸಹಾಯದಿಂದ ಪರಿಹರಿಸಿಕೊಳ್ಳಲಿದ್ದೀರಿ. ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡುವುದರಿಂದ ನಿಮ್ಮ ಪ್ರೀತಿ ಗಟ್ಟಿಗೊಳ್ಳುತ್ತದೆ.

ಕನ್ಯಾ: ಈ ವಾರ ನಿಮಗೆ ಅತ್ಯಂತ ಆರಾಮದಾಯಕವಾಗಿ ಇರಲಿದೆ. ವಾರದ ಆರಂಭದಲ್ಲಿ ನೀವು ಹೆಚ್ಚಿನ ಕೆಲಸದಲ್ಲಿ ಮುಳುಗಿರಲಿದ್ದೀರಿ. ಆದರೆ ಧಾವಂತ ಹಾಗೂ ಒತ್ತಡಕ್ಕೆ ಒಳಗಾಗದಿರುವುದು ಉತ್ತಮ. ಕೆಲಸದ ಸ್ಥಳದಲ್ಲಿ ನಿಮ್ಮ ದಾರಿಗೆ ಅಡ್ಡಬಂದು ನಿಮಗೆ ತೊಂದರೆ ಉಂಟುಮಾಡುವ ವ್ಯಕ್ತಿಗಳ ಬಗ್ಗೆ ಎಚ್ಚರದಿಂದಿರಿ. ಯಾವುದೇ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮುಂಚೆ ಅದರ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸಿ. ಯೋಜನೆಯ ಯಶಸ್ಸಿಗೆ ಸಂಬಂಧಿಸಿದಂತೆ ಯಾವುದೇ ಅಡ್ಡಿ ಉಂಟಾಗದಂತೆ ಸೂಕ್ತ ಮೂಲಗಳಿಂದ ಸಲಹೆ ಪಡೆದುಕೊಳ್ಳಿ. ವ್ಯಾಪಾರಸ್ಥರು ಹಣಕಾಸಿನ ವ್ಯವಹಾರಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸಬೇಕಿದೆ. ಈ ವಾರ ಗಂಡು-ಹೆಣ್ಣು ಪರಸ್ಪರರ ಕಡೆಗೆ ಆಕರ್ಷಿತರಾಗುವ ಸಾಧ್ಯತೆ ಇದ್ದು, ಆಕರ್ಷಣೆಯನ್ನು ನಿಯಂತ್ರಣದಲ್ಲಿ ಇರಿಸಬೇಕಿದೆ. ಸ್ನೇಹವು ಬೇರೆ ಬೇರೆ ರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಅದರಿಂದ ಹೊಸ ಸಮಸ್ಯೆಗಳು ಉದ್ಭವಿಸುವುದನ್ನು ತಪ್ಪಿಸಲು, ನೀವು ಹೊಸ ಬದಲಾವಣೆಯ ಕಡೆ ಏಕಾಏಕಿ ನುಗ್ಗುವ ಬದಲು ಸಮಾಧಾನದಿಂದ ನಡೆದುಕೊಳ್ಳಬೇಕಾದ ಅವಶ್ಯಕತೆ ಇದೆ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಬಾಂಧವ್ಯವನ್ನು ಗಟ್ಟಿಗೊಳಿಸಲು ಈ ವಾರ ಒಳ್ಳೆಯದು.

ತುಲಾ: ಈ ವಾರ ನೀವು ಬೇರೆ ಬೇರೆ ಬಗೆಯ ಸನ್ನಿವೇಶಗಳನ್ನು ಎದುರಿಸಬೇಕಿದೆ. ನಿಮ್ಮ ಯೋಜನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅಗತ್ಯವಾದ ಗಮನವನ್ನು ಹೆಚ್ಚಿನ ಪ್ರಮಾಣದಲ್ಲಿ ಹರಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. ವ್ಯಾಪಾರಸ್ಥರಿಗೆ ವಾರದ ಮಧ್ಯದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ನೀವು ನಿರೀಕ್ಷಿಸಿದಷ್ಟು ಆದಾಯ ಬರದೇ ಇರುವ ಕಾರಣ ಮಾನಸಿಕ ಒತ್ತಡ ಉಂಟಾಗಬಹುದು. ಈ ವಾರದಲ್ಲಿ ನಿಮಗೆ ಸಂತೋಷ ಹಾಗೂ ಸವಾಲು ಒಡ್ಡುವ ಸನ್ನಿವೇಶಗಳು ಒಟ್ಟಿಗೆ ಎದುರಾಗಬಹುದು. ಉದ್ಯೋಗ ಹದ ತಪ್ಪದಿರುವಂತೆ ನೋಡಿಕೊಳ್ಳಲು ಕೆಲ ಸೂಕ್ಷ್ಮವಾದ ಸೂಚನೆಗಳು ದೊರೆಯಲಿವೆ. ವೈಯಕ್ತಿಕ ಬದುಕಿನಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ಸಮಾಧಾನ ಹಾಗೂ ಎಚ್ಚರಿಕೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಪ್ರಯಾಣ ಮಾಡುವಾಗ ಎಚ್ಚರ ವಹಿಸಿ ಹಾಗೂ ಎಲ್ಲಾ ಸುರಕ್ಷತಾ ಕ್ರಮಗಳನ್ನು ತಪ್ಪದೇ ಕೈಗೊಳ್ಳುವುದು ಉತ್ತಮ.

ವೃಶ್ಚಿಕ: ಈ ವಾರ ಕೆಲವು ಸಂಕಷ್ಟಗಳು ಎದುರಾಗಬಹುದು, ಜೊತೆಗೇ ನೀವು ಸರೀಕರ ಮಧ್ಯೆ ಮಿಂಚುವ ಅವಕಾಶಗಳು ಸಹ ದೊರೆಯಲಿವೆ. ಉದ್ಯೋಗದಲ್ಲಿ ಹೆಚ್ಚಿನ ಪರಿಶ್ರಮ ವಹಿಸಬೇಕಾಗುತ್ತದೆ ಹಾಗೂ ಮುಂದುವರೆಯಲು ಕೊಂಚ ಹೆಚ್ಚಿನ ಕಾಲಾವಕಾಶ ಬೇಕಾಗುವ ಸಾಧ್ಯತೆ ಇದೆ. ಯಾವುದೇ ವ್ಯಾಪಾರದಲ್ಲಿ ನೀವು ಪಾಲುದಾರರಾಗಿದ್ದರೆ, ಸಹಪಾಲುದಾರರೊಂದಿಗೆ ಚಕಮಕಿ ನಡೆಯಬಹುದು. ಅಂತಹ ಸಮಯದಲ್ಲಿ ಭಾವುಕತೆಗೆ ಒಳಗಾಗಿ ಆತುರದ ನಿರ್ಧಾರವನ್ನು ತೆಗೆದುಕೊಳ್ಳದೇ ಇರುವುದು ಉತ್ತಮ, ಇಲ್ಲವಾದಲ್ಲಿ ನೀವು ಹಣ ಕಳೆದುಕೊಳ್ಳಬೇಕಾಗುತ್ತದೆ. ಓದುತ್ತಿರುವವರು ಇನ್ನೂ ಹೆಚ್ಚಿನ ಕಠಿಣ ಪರಿಶ್ರಮ ವಹಿಸಿ ಅಧ್ಯಯನ ನಡೆಸಬೇಕಿದೆ. ಪ್ರೀತಿ-ಪ್ರೇಮದ ವಿಷಯದಲ್ಲಿ ಸಹ ನೀವು ಎಚ್ಚರಿಕೆಯಿಂದ ಇರುವುದು ಅವಶ್ಯಕ. ನಿಮ್ಮ ಸಂಗಾತಿ ಎಷ್ಟೇ ಕೋಪಗೊಂಡಿರಲಿ, ನೀವು ಅವರ ಭಾವನೆಗಳಿಗೆ ಬೆಲೆ ಕೊಡುತ್ತೀರಿ ಎಂದು ಅವರಿಗೆ ಮನವರಿಕೆ ಮಾಡಿಸಿ ಹಾಗೂ ಮಾತುಕತೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದು ಒಳ್ಳೆಯದು. ಉತ್ತಮ ಬಾಳಸಂಗಾತಿಯಾಗಲು, ಒಬ್ಬರು ಇನ್ನೊಬ್ಬರ ಭಾವನೆಗಳಿಗೆ ಬೆಲೆ ಕೊಡುವುದು ಹಾಗೂ ಸಮಸ್ಯೆ ಎದುರಾದಾಗ ಪರಸ್ಪರರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳುವುದು ಅವಶ್ಯಕ.

ಧನು: ಈ ರಾಶಿಯಲ್ಲಿ ಜನಿಸಿದವರಿಗೆ ಈ ವಾರ ಶುಭವಾಗಲಿದೆ. ಉದ್ಯೋಗದಲ್ಲಿ ನಿಮಗೆ ಕೆಲವು ದೊಡ್ಡ ಜವಾಬ್ದಾರಿಗಳು ದೊರೆಯಲಿವೆ ಹಾಗೂ ನಿಮ್ಮ ಕೆಲಸವನ್ನು ಜನರು ಶ್ಲಾಘಿಸಲಿದ್ದಾರೆ. ನಿಮ್ಮ ವ್ಯವಹಾರ ಉತ್ತಮವಾಗಿ ನಡೆಯಲಿದ್ದು, ನಿಮ್ಮ ಹಳೆಯ ಹಾಗೂ ಹೊಸ ಯೋಜನೆಗಳು ಸರಿಯಾದ ದಿಕ್ಕಿನಲ್ಲಿ ಮುನ್ನಡೆಯಲಿವೆ. ಉದ್ಯೋಗದಲ್ಲಿ ಕೆಲವು ಸಮಸ್ಯೆಗಳು ತಲೆದೋರಬಹುದು, ಆದರೆ ನಿಮ್ಮ ತಾಳ್ಮೆ ಹಾಗೂ ಬುದ್ಧಿವಂತಿಕೆಯಿಂದ ಅವುಗಳನ್ನು ಪರಿಹರಿಸಲಿದ್ದೀರಿ. ವಹಿವಾಟನ್ನು ಬೆಳೆಸುವ ಉದ್ದೇಶ ಹೊಂದಿರುವವರಿಗೆ ಈ ವಾರ ಮಹತ್ವದ ಒಳಿತನ್ನು ತರಲಿದೆ. ಕಷ್ಟಕರವಾದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ದಿಸೆಯಲ್ಲಿ ಕಠಿಣ ಪರಿಶ್ರಮ ವಹಿಸಿ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಈ ವಾರ ಸಿಹಿ ಸುದ್ದಿಯನ್ನು ಕೇಳಬಹುದು. ನಿಮ್ಮ ಸಂಗಾತಿಯನ್ನು ಹೆಚ್ಚು ಹೆಚ್ಚು ಅರ್ಥೈಸಿಕೊಳ್ಳುವುದು ಹಾಗೂ ಹೆಚ್ಚು ಆತ್ಮೀಯರಾಗುವಲ್ಲಿ ಈ ವಾರ ಪ್ರಮುಖ ಪಾತ್ರ ವಹಿಸಲಿದೆ. ನಿಮ್ಮ ವೈವಾಹಿಕ ಜೀವನ ಅತ್ಯುತ್ತಮವಾಗಿ ಇರಲಿದ್ದು, ನಿಮ್ಮ ಎಲ್ಲಾ ಕಷ್ಟಸುಖಗಳಲ್ಲಿ ನಿಮ್ಮ ಜೀವನ ಸಂಗಾತಿ ನಿಮ್ಮ ಜೊತೆಗಿರುತ್ತಾರೆ.

ಮಕರ: ಈ ವಾರ ನಿಮಗೆ ಕಷ್ಟವಾದುದು ಹಾಗೂ ಸವಾಲುಗಳಿಂದ ಕೂಡಿರಲಿದೆ. ಕುಟುಂಬ ಹಾಗೂ ಮನೆಗೆ ಸಂಬಂಧಿಸಿದಂತೆ ಎದುರಾಗಬಹುದಾದ ಸಮಸ್ಯೆಗಳು ನಿಮ್ಮನ್ನು ಚಿಂತೆಗೆ ಈಡುಮಾಡಲಿವೆ. ಉದ್ಯೋಗಸ್ಥರು ನಿಮ್ಮ ಕಚೇರಿಯ ಮುಖ್ಯಸ್ಥರೊಂದಿಗೆ ಉತ್ತಮ ಸಂವಹನ ಕಾಪಾಡಿಕೊಳ್ಳಿ ಹಾಗೂ ಸಹೋದ್ಯೋಗಿಗಳಿಗೆ ಅಗತ್ಯ ಸಹಕಾರ ನೀಡಿ. ಕಠಿಣ ಪರಿಶ್ರಮ ಹಾಗೂ ಬದ್ಧತೆಯಿಂದ ಕೆಲಸ ಮಾಡುವ ನಿಮ್ಮ ವಿಧಾನ ನಿಮಗೆ ಅಪಾರ ಯಶಸ್ಸು ತಂದುಕೊಡಲಿದೆ. ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿ ಹಾಗೂ ಅವರಿಗೆ ಒತ್ತಾಸೆಯಾಗಿರಿ. ಒತ್ತಡದಿಂದ ಸಾಧ್ಯವಾದಷ್ಟು ದೂರದಲ್ಲಿರಿ ಹಾಗೂ ಪ್ರತಿದಿನ ವ್ಯಾಯಾಮ, ನಿಯಮಿತ ಆಹಾರಪದ್ಧತಿ ಹಾಗೂ ವಿಶ್ರಾಂತಿಯಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಯಾವುದೇ ಆರೋಗ್ಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಲ್ಲಿ, ವೈದ್ಯರನ್ನು ಸಂಪರ್ಕಿಸಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳುವುದು ಒಳಿತು. ಜೀವನದಲ್ಲಿ ಕಷ್ಟಗಳು ಹಾಗೂ ಸವಾಲುಗಳು ಬಂದುಹೋಗುತ್ತಲೇ ಇರುತ್ತವೆ ಎಂಬುದನ್ನು ನೆನಪಿಡಿ. ಅವೇ ಅಂತಿಮವಲ್ಲ, ಬದಲಾಗಿ ನೀವು ಬದಲಾಗಲು ಹಾಗೂ ಬೆಳೆಯಲು ದಾರಿ ಮಾಡಿಕೊಡುವ ಉತ್ತಮ ಅವಕಾಶಗಳು ಎಂಬುದನ್ನು ಅರ್ಥೈಸಿಕೊಳ್ಳಬೇಕು. ಹೋರಾಟದ ಮೂಲಕವೇ ನೀವು ಸುಗಮ ಬದುಕಿನೆಡೆಗೆ ಮುಂದುವರೆಯಲು ಹಾಗೂ ಅಭಿವೃದ್ಧಿ ಹೊಂದಲು ಸಾಧ್ಯ.

ಕುಂಭ: ನಿಗದಿತ ಸಮಯಕ್ಕೆ ಸರಿಯಾಗಿ ನೀವು ಕೆಲಸವನ್ನು ಪೂರ್ಣಗೊಳಿಸಲಿದ್ದೀರಿ ಹಾಗೂ ಇದರಿಂದ ನಿಮ್ಮ ಆತ್ಮವಿಶ್ವಾಸ ವೃದ್ಧಿಯಾಗಲಿದೆ. ಸ್ನೇಹಿತರ ಸಹಾಯದಿಂದ ನೀವು ಬಾಕಿ ಕೆಲಸಗಳನ್ನು ಸುಲಭವಾಗಿ ಮುಗಿಸಲಿದ್ದೀರಿ ಹಾಗೂ ಉದ್ಯೋಗದಲ್ಲಿ ಎದುರಾಗುವ ಯಾವುದೇ ಅಡ್ಡಿಗಳನ್ನು ಪರಿಹರಿಸಿಕೊಂಡು ಮುಂದುವರೆಯಲಿದ್ದೀರಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮರೆಯದಿರಿ ಹಾಗೂ ದೈಹಿಕ ಅಥವಾ ಮಾನಸಿಕ ತೊಂದರೆ ಉಂಟುಮಾಡುವ ಅಂಶಗಳನ್ನು ಗುರುತಿಸಿಕೊಳ್ಳಿ. ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ. ಸಣ್ಣಪುಟ್ಟ ತೊಂದರೆಗಳನ್ನು ಅಲಕ್ಷಿಸಬೇಡಿ, ಇಲ್ಲವಾದರೆ ಅವೇ ಮುಂದೆ ನೀವು ಆಸ್ಪತ್ರೆ ಸೇರಬೇಕಾದಷ್ಟು ಗಂಭೀರ ಸ್ವರೂಪದ್ದಾಗಿ ಪರಿಣಮಿಸುವ ಸಾಧ್ಯತೆ ಇದೆ. ನಿಮ್ಮ ವಹಿವಾಟಿನಲ್ಲಿ ಯಾವುದೇ ಪ್ರಮುಖ ಬದಲಾವಣೆ ತರಲು ನೀವು ಚಿಂತಿಸುತ್ತಿದ್ದಲ್ಲಿ, ಈ ವಾರದಲ್ಲಿ ನಿಮ್ಮ ಒಳ್ಳೆಯ ಸ್ನೇಹಿತರೊಂದಿಗೆ ಚರ್ಚಿಸಿ ಅವರ ಸಲಹೆ ಪಡೆದುಕೊಳ್ಳುವುದು ಉತ್ತಮ. ಅನುಮಾನಾಸ್ಪದ ಯೋಜನೆಗಳಿಂದ ದೂರವಿರಿ. ನಿಮ್ಮ ಪ್ರೇಮ ಸಂಬಂಧದಲ್ಲಿ ಹುಳಿ ಹಿಂಡಲು ಪ್ರಯತ್ನಿಸುವವರ ಬಗ್ಗೆ ಕಣ್ಣಿಡುವುದು ಒಳ್ಳೆಯದು. ನಿಮ್ಮ ಬಾಳಸಂಗಾತಿಯ ಜೊತೆಗೆ ಉತ್ಕೃಷ್ಟ ಸಮಯ ಕಳೆಯಲಿದ್ದೀರಿ ಹಾಗೂ ನಿಮ್ಮ ವೈವಾಹಿಕ ಜೀವನ ಸಂತೃಪ್ತಿದಾಯಕವಾಗಿ ಇರಲಿದೆ.

ಮೀನ: ನಿಮ್ಮ ಉದ್ಯೋಗ ಅಥವಾ ವಹಿವಾಟಿನಲ್ಲಿ ಈ ವಾರ ಅದೃಷ್ಟ ಕಾಣಲಿದ್ದೀರಿ. ಇದರಿಂದ ನಿಮ್ಮ ಕುಟುಂಬವರ್ಗ ಬಹಳ ಸಂತೋಷಪಡಲಿದೆ. ಹೆಚ್ಚಿನ ಆರಾಮವನ್ನು ಪಡೆಯಲು ನೀವು ಇನ್ನಷ್ಟು ಹಣ ಖರ್ಚು ಮಾಡಬೇಕಾಗಿ ಬರಬಹುದು. ಉದ್ಯೋಗಕ್ಕೆ ಸಂಬಂಧಿಸಿದ ಕೆಲವು ಕರ್ತವ್ಯಗಳನ್ನು ನೀವು ಬಹಳ ಸಮರ್ಥವಾಗಿ ನಿಭಾಯಿಸಲಿದ್ದೀರಿ. ಆದರೆ, ನಿಮ್ಮ ಕುಟುಂಬದವರ ಭಾವನೆಗಳನ್ನು ಅರ್ಥ ಮಾಡಿಕೊಂಡು, ಆ ಭಾವನೆಗಳ ಮೂಲವನ್ನು ಗ್ರಹಿಸಿ ನಡೆದುಕೊಳ್ಳುವುದು ಮುಖ್ಯ. ಈ ಹಿಂದೆ ನೀವು ಯಾವುದೇ ಹೂಡಿಕೆಯಲ್ಲಿ ಹಣ ತೊಡಗಿಸಿದ್ದರೆ, ಈ ವಾರ ಅದರಿಂದ ಉತ್ತಮ ಆದಾಯ ಬರುವ ನಿರೀಕ್ಷೆ ಇದೆ. ಉದ್ಯೋಗಸ್ಥರಿಗೆ ಹಣ ಸಂಪಾದನೆಯ ಹೊಸ ಹೊಸ ದಾರಿಗಳು ಗೋಚರಿಸಲಿವೆ. ಒಬ್ಬರು ಪ್ರಮುಖವಾದ ವ್ಯಕ್ತಿಯ ಮೂಲಕ ದೊಡ್ಡ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲಿದ್ದು, ಅದರಿಂದ ನಿಮ್ಮ ವಹಿವಾಟು ಬಹಳಷ್ಟು ಎತ್ತರಕ್ಕೇರಲಿದೆ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದು, ಆ ವಿಷಯವನ್ನು ಅವರಿಗೆ ಹೇಳಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರೆ ಈ ವಾರ ಸೂಕ್ತವಾಗಿದೆ. ನಿಮ್ಮ ಮದುವೆಯ ಬಂಧ ಗಟ್ಟಿಯಾಗಿರಲಿದ್ದು, ನೀವು ಹಾಗೂ ನಿಮ್ಮ ಸಂಗಾತಿಯ ನಡುವಿನ ಹೊಂದಾಣಿಕೆ ಇನ್ನಷ್ಟು ಹೆಚ್ಚಲಿದೆ. ನಿಮ್ಮ ಆರೋಗ್ಯ ಸ್ಥಿತಿ ಸಹ ಈ ವಾರ ಉತ್ತಮವಾಗಿರಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.