ಕರ್ನಾಟಕ

karnataka

ETV Bharat / bharat

ದೆಹಲಿ ಸಿಎಂ ಕಚೇರಿ ಸಿಬ್ಬಂದಿಯಿಂದ ಅನುಚಿತ ವರ್ತನೆ: ಎಎಪಿ ನಾಯಕಿ ಸ್ವಾತಿ ಮಾಲಿವಾಲ್​​ ಆರೋಪ - Swati Maliwal - SWATI MALIWAL

ತಮ್ಮ ಮೇಲೆ ದೆಹಲಿ ಮುಖ್ಯಮಂತ್ರಿ ಕಚೇರಿಯ ಸಿಬ್ಬಂದಿ ಅನುಚಿತವಾಗಿ ವರ್ತಿಸಿರುವುದಾಗಿ ಎಎಪಿ ನಾಯಕಿ ಸ್ವಾತಿ ಮಾಲಿವಾಲ್​ ಆರೋಪಿಸಿದ್ದಾರೆ.

ಎಎಪಿ ನಾಯಕಿ ಸ್ವಾತಿ ಮಾಲಿವಾಲ್
ಎಎಪಿ ನಾಯಕಿ ಸ್ವಾತಿ ಮಾಲಿವಾಲ್ (IANS)

By PTI

Published : May 13, 2024, 12:52 PM IST

ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರ ಕಚೇರಿ ಸಿಬ್ಬಂದಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆಮ್​ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯೆ ಮತ್ತು ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಾಲಿವಾಲ್​ ದೂರಿದ್ದಾರೆ.

ಈ ಪ್ರಕರಣದ ಕುರಿತು ಮಾತನಾಡಿರುವ ಪೊಲೀಸರು, ಈ ಬಗ್ಗೆ ಯಾವುದೇ ಔಪಚಾರಿಕ ದೂರು ಪಡೆದಿಲ್ಲ ಎಂದಿದ್ದಾರೆ. ಮುಖ್ಯಮಂತ್ರಿ ಕಚೇರಿ ಸಿಬ್ಬಂದಿ ದೌರ್ಜನ್ಯ ನಡೆಸಿರುವುದಾಗಿ ಸ್ವಾತಿ ಮಾಲಿವಾಲ್​ ಎರಡು ಬಾರಿ ತುರ್ತು ಕರೆಗಳನ್ನು ಮಾಡಿದ್ದರು. ಈ ಎರಡು ಕರೆಗಳು ಬೆಳಗ್ಗೆ 10 ಗಂಟೆಗೆ ದಾಖಲಾಗಿವೆ. ಇದಾದ ಬಳಿಕ ಸಿವಿಲ್​ ಲೈನ್ಸ್​​ ಪೊಲೀಸ್​​ ಠಾಣೆಯ ತಂಡ ಮುಖ್ಯಮಂತ್ರಿ ಕಚೇರಿ ತಲುಪಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದರು.

ಸ್ವಾತಿ ಮಾಲಿವಾಲ್​ ಆರೋಪದ ಕುರಿತು ತಕ್ಷಣಕ್ಕೆ ಸಿಎಂ ಕಚೇರಿಯಾಗಲಿ ಅಥವಾ ದೆಹಲಿ ಆಡಳಿತ ಪಕ್ಷವಾಗಿರುವ ಆಮ್​ ಆದ್ಮಿ ಪಕ್ಷವಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ರನ್ನು ರಾಜ್ಯಸಭೆಗೆ​ ಆಯ್ಕೆ ಮಾಡಿದ ಆಪ್​

ABOUT THE AUTHOR

...view details