ರಾಂಚಿ, ಜಾರ್ಖಂಡ್: ರಾಜಧಾನಿ ರಾಂಚಿಯ ಸ್ಪೆಷಲ್ ಬ್ರಾಂಚ್‌ಗೆ ನಿಯೋಜನೆಗೊಂಡಿದ್ದ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅನುಪಮ್ ಕಚ್ಚಪ್ ಹತ್ಯೆಯಾದ ಸಬ್ ಇನ್ಸ್‌ಪೆಕ್ಟರ್ ಆಗಿದ್ದಾರೆ. ಗುಂಡಿಗೆ ಬಲಿಯಾದ ಸಬ್ ಇನ್ಸ್‌ಪೆಕ್ಟರ್ ಮೃತದೇಹವನ್ನು ರಾಂಚಿ ರಿಂಗ್ ರೋಡ್‌ನಿಂದ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಂಕೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಘಟನೆ: 2018 ರ ಬ್ಯಾಚ್‌ನ ಬ್ರೈಟ್ ಸಬ್ ಇನ್ಸ್‌ಪೆಕ್ಟರ್ ಅನುಪಮ್ ಕಚ್ಚಪ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕಂಕೆ ಪೊಲೀಸ್ ಠಾಣೆ ವ್ಯಾಪ್ತಿಯ ರಿಂಗ್ ರೋಡ್ ನಲ್ಲಿ ಅನುಪಮ್ ಮೃತದೇಹ ಪತ್ತೆಯಾಗಿದೆ. ದುಷ್ಕರ್ಮಿಗಳು ಅನುಪಮ್ ಮೇಲೆ ಎರಡು ಬಾರಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಅನುಪಮ್ ಹತ್ಯೆ ಮಾಹಿತಿ ಬಂದ ತಕ್ಷಣ ರಾಂಚಿ ಪೊಲೀಸರಲ್ಲಿ ಆತಂಕ ಮನೆ ಮಾಡಿದೆ. ವಿಶೇಷ ಶಾಖೆಯ ಐಜಿ -ಡಿಐಜಿ, ರಾಂಚಿ ಪೊಲೀಸ್ ಡಿಐಜಿ, ಎಸ್‌ಎಸ್‌ಪಿ ಸೇರಿದಂತೆ ಹಲವು ಅಧಿಕಾರಿಗಳು ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕಾಂಕೆ ರಿಂಗ್ ರೋಡ್‌ನಲ್ಲಿರುವ ಇಂಡಿಯನ್ ಢಾಬಾದಿಂದ ಹಿಂತಿರುಗುತ್ತಿದ್ದಾಗ ಅನುಪಮ್ ಅವರ ಮೇಲೆ ಈ ಗುಂಡಿನ ದಾಳಿ ನಡೆಸಲಾಗಿದೆ ಎಂದು ಡಿಐಜಿ ಅನೂಪ್ ಬಿರ್ತಾರೆ ಹೇಳಿದ್ದಾರೆ. ಅಪರಾಧಿಗಳನ್ನು ಪತ್ತೆ ಹಚ್ಚಲು ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ.