ದೌಸಾ, ರಾಜಸ್ಥಾನ: ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಶನಿವಾರ 16 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಶಾಲೆಯಲ್ಲಿ ಮೂರ್ಛೆ ಹೋಗಿದ್ದಾನೆ. ಬಾಲಕ ಮೂರ್ಛೆ ಹೋಗಿದ್ದರಿಂದ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ. ಹೃದಯಾಘಾತದಿಂದಲೇ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ.
ಶಾಲೆಯಲ್ಲಿ ನಡೆದಿದ್ದೇನು?:ಬಂದಿಕುಯಿ ಉಪವಿಭಾಗದ ಪಂಡಿತಪುರ ನಿವಾಸಿ ಯತೇಂದ್ರ ಉಪಾಧ್ಯಾಯ, ಬರ್ಹ್ ಬಿಶನ್ಪುರದಲ್ಲಿರುವ ಜ್ಯೋತಿಬಾ ಫುಲೆ ಪ್ರೌಢ ಶಾಲೆಯಲ್ಲಿ ಪ್ರಜ್ಞಾಹೀನರಾಗಿದ್ದರು. ಶಾಲಾ ಸಿಬ್ಬಂದಿ ವಿದ್ಯಾರ್ಥಿಯನ್ನು ಬಂಡಿಕುಯಿ ಉಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು , ಅಲ್ಲಿ ವೈದ್ಯರು ಬಾಲಕನನ್ನು ಪರೀಕ್ಷಿಸಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ.
ಯತೇಂದ್ರ ಅವರಿಗೆ ಹೃದಯಾಘಾತವಾಗಿದೆ ಎಂದು ಪ್ರಾಥಮಿಕ ಮಾಹಿತಿ ಹೊರ ಬಿದ್ದಿದ್ದು, ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ನಂತರವೇ ಗೊತ್ತಾಗಲಿದೆ ಎಂದು ಎಸ್‌ಎಚ್‌ಒ ಬಂಡಿಕುಯಿ ಪೊಲೀಸ್ ಠಾಣೆ ಪ್ರೇಮ್ ಚಂದ್ ಹೇಳಿದರು, ಇದಕ್ಕೆ ಬಾಲಕನ ಕುಟುಂಬ ಸದಸ್ಯರು ಒಪ್ಪಿಗೆ ನೀಡಿಲ್ಲ. ಉಪಾಧ್ಯಾಯ ಅವರು ಹೃದಯ ಸಂಬಂಧಿ ಕಾಯಿಲೆಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 5 ರಂದು ಅಂದರೆ ಶುಕ್ರವಾರವಷ್ಟೇ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು ಎಂದು SHO ಹೇಳಿದರು.