ಕರ್ನಾಟಕ

karnataka

ETV Bharat / bharat

ಸಮಸ್ತಿಪುರ ಬಳಿ ಸ್ವತಂತ್ರತಾ ಸೇನಾನಿ ಎಕ್ಸ್​ಪ್ರೆಸ್ ರೈಲಿನ ಮೇಲೆ ಕಲ್ಲುತೂರಾಟ - stone pelting on train

ಸ್ವತಂತ್ರತಾ ಸೇನಾನಿ ಎಕ್ಸ್​ಪ್ರೆಸ್ ರೈಲಿನ ಮೇಲೆ ಕಲ್ಲುತೂರಾಟ ನಡೆದ ಘಟನೆ ಸಂಭವಿಸಿದೆ.

ಸಮಸ್ತಿಪುರ ರೈಲು ನಿಲ್ದಾಣ
ಸಮಸ್ತಿಪುರ ರೈಲು ನಿಲ್ದಾಣ (ETV Bharat)

By ETV Bharat Karnataka Team

Published : Sep 27, 2024, 8:00 PM IST

ನವದೆಹಲಿ: ಗುರುವಾರ ರಾತ್ರಿ ಜಯನಗರದಿಂದ ನವದೆಹಲಿಗೆ ತೆರಳುತ್ತಿದ್ದ ಸ್ವತಂತ್ರತಾ ಸೇನಾನಿ ಎಕ್ಸ್​ಪ್ರೆಸ್ ರೈಲಿನ ಮೇಲೆ ಸಮಸ್ತಿಪುರ ನಿಲ್ದಾಣದ ಹೊರ ಸಿಗ್ನಲ್​ನಲ್ಲಿ ಕಲ್ಲು ತೂರಾಟ ನಡೆದಿದೆ. ಮೂಲಗಳ ಪ್ರಕಾರ, ರೈಲಿನ ಮೇಲೆ ಕಲ್ಲು ಎಸೆದ ವ್ಯಕ್ತಿಯನ್ನು ಗುರುತಿಸಲಾಗಿದೆ. ಈ ಘಟನೆಯಲ್ಲಿ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಸಮಸ್ತಿಪುರದಲ್ಲಿ ಚಿಕಿತ್ಸೆ ನೀಡಲಾಗಿದೆ. ಪ್ರಸ್ತುತ, ರೈಲ್ವೆ ಅಧಿಕಾರಿಗಳು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕಲ್ಲು ತೂರಾಟಕ್ಕೆ ಕಾರಣನಾದ ವ್ಯಕ್ತಿ ಮಾನಸಿಕವಾಗಿ ದುರ್ಬಲನಾಗಿದ್ದು, ಆತನನ್ನು ಬಂಧಿಸಿದ ನಂತರ ಪೊಲೀಸರು ಆತನನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಿದ್ದಾರೆ.

ರಾತ್ರಿ 11 ಗಂಟೆ ಸುಮಾರಿಗೆ ಸಮಸ್ತಿಪುರದಲ್ಲಿ ರೈಲು ಸ್ವಲ್ಪ ಸಮಯ ನಿಂತು ಮುಜಾಫರ್ ಪುರದತ್ತ ಹೊರಟಿತ್ತು. ಹೊರ ಸಿಗ್ನಲ್ ತಲುಪಿದ ಕೂಡಲೇ, ರೈಲಿನ ಮೇಲೆ ಕಲ್ಲು ತೂರಾಟ ಪ್ರಾರಂಭವಾಗಿದೆ. ಅನಿರೀಕ್ಷಿತ ದಾಳಿಯಿಂದ ಪ್ರಯಾಣಿಕರು ಭಯಭೀತರಾದರು. ಜಿಆರ್​ಪಿ ಬೆಂಗಾವಲು ತಂಡವು ರೈಲಿನೊಳಗೆ ಇದ್ದಾಗಲೇ ಈ ಘಟನೆ ಸಂಭವಿಸಿದೆ. ರೈಲು ಸುಮಾರು 45 ನಿಮಿಷಗಳ ವಿಳಂಬದೊಂದಿಗೆ ಮುಜಾಫರ್ ಪುರ ಜಂಕ್ಷನ್ ತಲುಪಿತು.

ದಿಬ್ರುಗಢ-ನವದೆಹಲಿ ರಾಜಧಾನಿ ಎಕ್ಸ್​ಪ್ರೆಸ್ ರೈಲಿನ ಮೇಲೂ ಇದೇ ರೀತಿಯ ಕಲ್ಲು ತೂರಾಟದ ಘಟನೆಗಳು ವರದಿಯಾಗಿವೆ. ಮಾಹಿತಿ ಪಡೆದ ನಂತರ, ಆರ್​ಪಿಎಫ್ ಮತ್ತು ಜಿಆರ್​ಪಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಕಲ್ಲು ತೂರಾಟದಿಂದ ಎ 1 ಮತ್ತು ಬಿ 2 ಬೋಗಿಗಳ ಕಿಟಕಿಗಳು ಪುಡಿಪುಡಿಯಾಗಿವೆ. ಹಲವಾರು ಸ್ಲೀಪರ್ ಬೋಗಿಗಳು ಕಿಟಕಿಗಳು ಹಾನಿಗೀಡಾಗಿವೆ.

ಇದನ್ನೂ ಓದಿ : MCD ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯಲ್ಲಿ ಬಿಜೆಪಿ ಗೆಲುವು; ಮತದಾನ ಬಹಿಷ್ಕರಿಸಿದ ಎಎಪಿ - ಕಾಂಗ್ರೆಸ್ - MCD election

ABOUT THE AUTHOR

...view details