ETV Bharat / bharat

ಸಾಗರ - ಮಂಥನ ಜಂಟಿ ಕಾರ್ಯಾಚರಣೆ: ಪೋರಬಂದರ್ ಸಮುದ್ರದಲ್ಲಿ 700 ಕೆಜಿ ಮಾದಕವಸ್ತು ವಶಕ್ಕೆ, 8 ಇರಾನ್ ಪ್ರಜೆಗಳ ಬಂಧನ - SAGAR MANTHAN JOINT OPERATION

ಪ್ರಧಾನಿ ನರೇಂದ್ರ ಮೋದಿ ಅವರ ಮಾದಕ ದ್ರವ್ಯ ಮುಕ್ತ ಭಾರತದ ದೃಷ್ಟಿಕೋನದ ಭಾಗವಾಗಿ ಕಾನೂನು ಜಾರಿ ಸಂಸ್ಥೆಗಳು ಈ ಜಂಟಿ ಕಾರ್ಯಾಚರಣೆ ಕೈಗೊಂಡಿದೆ.

700 kg of narcotics seized in Porbandar sea, 8 Iranian nationals arrested
ಪೋರಬಂದರ್ ಸಮುದ್ರದಲ್ಲಿ 700 ಕೆಜಿ ಮಾದಕವಸ್ತು ವಶಕ್ಕೆ, 8 ಇರಾನ್ ಪ್ರಜೆಗಳ ಬಂಧನ (ETV Bharat)
author img

By ETV Bharat Karnataka Team

Published : Nov 15, 2024, 7:31 PM IST

ಗಾಂಧಿನಗರ, ಗುಜರಾತ್​: ಸಾಗರ - ಮಂಥನ ಕಾರ್ಯಾಚರಣೆ ಭಾಗವಾಗಿ ಈ ವಾರ ಎನ್​ಸಿಬಿ, ನೌಕಾಪಡೆ ಹಾಗೂ ಎಟಿಎಸ್​ ಗುಜರಾತ್​ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಪೋರ್​ಬಂದರ್​ ಸಮುದ್ರದ ಪ್ರಾದೇಶಿಕ ಜಲಪ್ರದೇಶದಲ್ಲಿ ಸುಮಾರು 700 ಕೆ.ಜಿ ಮೆಥ್​​ ಎಂಬ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಅದಲ್ಲದೇ ಕಾರ್ಯಾಚರಣೆ ವೇಳೆ ಇರಾನಿಯನ್ನರು ಎಂದು ಹೇಳಿಕೊಳ್ಳುವ 8 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಾದಕ ದ್ರವ್ಯ ಮುಕ್ತ ಭಾರತದ ದೃಷ್ಟಿಕೋನದ ಭಾಗವಾಗಿ ಕಾನೂನು ಜಾರಿ ಸಂಸ್ಥೆಗಳು ದೊಡ್ಡ ಪ್ರಮಾಣದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುವ ಮೂಲಕ ಗಮನಾರ್ಹ ಯಶಸ್ಸು ಸಾಧಿಸಿವೆ. 700 ಕೆ.ಜಿ.ಮೆಥ್​ ಎಂಬ ಮಾದಕವಸ್ತು ಸಾಗಿಸುತ್ತಿದ್ದ ಬೋಟ್​ ಅನ್ನು ಭಾರತದ ಪ್ರಾದೇಶಿಕ ಜಲಪ್ರದೇಶದಲ್ಲಿ ಪೊಲೀಸ್​ ತಂಡಗಳು ತಡೆ ಹಿಡಿದಿವೆ. ಯಾವುದೇ ಗುರತಿನ ದಾಖಲೆಗಳಿಲ್ಲದೇ ಬೋಟ್​ನಲ್ಲಿ ಪತ್ತೆಯಾದ 8 ವಿದೇಶಿ ಪ್ರಜೆಗಳು ಇರಾನಿಯನ್ನರು ಎಂದು ಹೇಳಿಕೊಂಡಿದ್ದಾರೆ.

A boat in which drugs was transported
ಡ್ರಗ್ಸ್​ ಇದ್ದ ಬೋಟ್​ (ETV Bharat)

ಸಾಗರ-ಮಂಥನ- 4: ಯಾವುದೇ ಎಐಎಸ್​ ನೋಂದಣಿ ಇಲ್ಲದ ಬೋಟ್​ ಒಂದು, ಮಾದಕ ದ್ರವ್ಯಗಳು/ಸೈಕೋಟ್ರೋಪಿಕ್ ಪದಾರ್ಥಗಳೊಂದಿಗೆ ಜಲಮಾರ್ಗವಾಗಿ ಭಾರತವನ್ನು ಪ್ರವೇಶಿಸುತ್ತಿರುವ ಗುಪ್ತಚರ ಖಚಿತ ಮಾಹಿತಿಯ ಮೇರೆಗೆ 'ಸಾಗರ-ಮಂಥನ- 4' ಕಾರ್ಯಾಚರಣೆ ಕೈಗೊಳ್ಳಲಾಯಿತು. ಭಾರತೀಯ ನೌಕಾಪಡೆ ಬೋಟ್​ ಅನ್ನು ಪತ್ತೆ ಹಚ್ಚುವಲ್ಲಿ ಸಹಾಯ ಮಾಡಿತು.

ಡ್ರಗ್​ ಸಿಂಡಿಕೇಟ್​ನ ಹಿಂದೆ ಹಾಗೂ ಮುಂದಿರುವ ಲಿಂಕ್​ಗಳನ್ನು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ. ಇದಕ್ಕಾಗಿ ವಿದೇಶಿ DLEA ಗಳ ಸಹಾಯವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್​ ಪೊಲೀಸ್​ ತಿಳಿಸಿದೆ.

"ಸಾಗರ-ಮಂಥನ" ಕಾರ್ಯಾಚರಣೆಯನ್ನು NCB ಈ ವರ್ಷದ ಆರಂಭದಲ್ಲಿ NCB ಹೆಡ್‌ಕ್ವಾರ್ಟರ್‌ನ ಕಾರ್ಯಾಚರಣೆ ಶಾಖೆಯ ಅಧಿಕಾರಿಗಳು ಮತ್ತು ಭಾರತೀಯ ನೌಕಾಪಡೆಯ ಗುಪ್ತಚರ ವಿಭಾಗದ ಅಧಿಕಾರಿಗಳು, ಭಾರತೀಯ ಕೋಸ್ಟ್ ಗಾರ್ಡ್, ಮತ್ತು ATS ಗುಜರಾತ್ ಪೊಲೀಸ್​​ ಸೇರಿಸಿ ತಂಡವನ್ನು ರಚಿಸುವ ಮೂಲಕ ಪ್ರಾರಂಭಿಸಿತು.

700 kg of narcotics seized in Porbandar sea, 8 Iranian nationals arrested
ಪೋರಬಂದರ್ ಸಮುದ್ರದಲ್ಲಿ 700 ಕೆಜಿ ಮಾದಕವಸ್ತು ವಶಕ್ಕೆ, 8 ಇರಾನ್ ಪ್ರಜೆಗಳ ಬಂಧನ (ETV Bharat)

ಅಕ್ರಮ ಮಾದಕವಸ್ತುಗಳನ್ನು ಜಲಮಾರ್ಗವಾಗಿ ಸಾಗಾಣಿಕೆ ಮಾಡುವುದರಿಂದ ರಾಷ್ಟ್ರೀಯ ಭದ್ರತೆಗೆ ಉಂಟಾಗುವ ಬೆದರಿಕೆ ಎದುರಿಸಲು ಭಾರತೀಯ ನೌಕಾಪಡೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್‌ನ ಸಮನ್ವಯದೊಂದಿಗೆ ಎನ್‌ಸಿಬಿ ಇಂತಹ ಸಾಗರ ಕಾರ್ಯಾಚರಣೆಗಳ ಸರಣಿಯನ್ನು ಪ್ರಾರಂಭಿಸಿದೆ. ಇಲ್ಲಿಯವರೆಗೆ ಸುಮಾರು 3,400 ಕೆಜಿ ವಿವಿಧ ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂರು ಪ್ರಕರಣಗಳಲ್ಲಿ 11 ಇರಾನ್ ಪ್ರಜೆಗಳು ಮತ್ತು 14 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: 95 ಕೆ.ಜಿ ಮೆಥಾಂಫೆಟಮೈನ್ ಡ್ರಗ್ಸ್​ ವಶ: ಮೆಕ್ಸಿಕೊ ಪ್ರಜೆ, ಜೈಲು ವಾರ್ಡನ್ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.