ಅಯೋಧ್ಯೆ(ಉತ್ತರ ಪ್ರದೇಶ): ಭದ್ರತೆಯ ಉದ್ದೇಶದಿಂದ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಆವರಣದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಇದರ ಮಧ್ಯೆಯೂ ಗುಜರಾತ್ನ ಯುವ ಉದ್ಯಮಿಯೊಬ್ಬ ಭದ್ರತಾ ನಿಮಯಗಳನ್ನು ಉಲ್ಲಂಘಿಸಿ, ಮಂದಿರದ ಪ್ರಮುಖ ದ್ವಾರದವರೆಗೂ ಸಾಗಿದ್ದು, ಬಳಿಕ ಭದ್ರತಾ ಸಿಬ್ಬಂದಿಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಸೋಮವಾರ ನಡೆಯಿತು.
ರಾಮಲಲ್ಲಾ ದೇಗುಲದ ಆವರಣದಲ್ಲಿ ಫೋಟೋ ಸೆರೆ ಹಿಡಿಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೆ, ಈ ವ್ಯಕ್ತಿ ತನ್ನ ಕನ್ನಡಕದಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿಕೊಂಡು ದೇಗುಲದ ಫೋಟೋ ಪಡೆಯಲು ಮುಂದಾಗಿದ್ದಾನೆ. ದೇಗುಲದ ಪ್ರಮುಖ ಗೇಟ್ಗೆ ಆಗಮಿಸುವ ಮುನ್ನ ನಡೆದ ಎಲ್ಲಾ ಭದ್ರತಾ ತಪಾಸಣೆಗಳಲ್ಲೂ ಕಣ್ತಪ್ಪಿಸಿ ಮುಂದೆ ಸಾಗಿದ್ದಾನೆ. ಪ್ರಮುಖ ಗೇಟ್ ಮುಂದೆ ಬರುತ್ತಿದ್ದಂತೆ ಈತನ ಕನ್ನಡಕದಿಂದ ಫ್ಲಾಶ್ ಲೈಟ್ ಆನ್ ಆಗಿದ್ದು, ಸೆಕ್ಯೂರಿಟಿ ಗಾರ್ಡ್ಗೆ ಕೈಗೆ ಸಿಕ್ಕಿಬಿದ್ದಿದ್ದಾನೆ.
ವಡೋದರದ ನಿವಾಸಿಯಾದ ಈತನ ಹೆಸರು ಜಾನಿ ಜೈಶಂಕರ್. ಪತ್ನಿಸಮೇತ ರಾಮಲಲ್ಲಾನ ದರ್ಶನಕ್ಕೆ ಆಗಮಿಸಿದ್ದ ಎಂಬ ಮಾಹಿತಿ ದೊರೆತಿದೆ. ಈತನನ್ನು ವಶಕ್ಕೆ ಪಡೆದ ಬಳಿಕ ಭದ್ರತಾ ಏಜೆನ್ಸಿ ಮತ್ತು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.