ನವದೆಹಲಿ: ರಾಜ್ಯ ಮತ್ತು ಇತರ ಮಧ್ಯಸ್ಥಗಾರರ ಸಮಾಲೋಚನೆ ಪಡೆದು ಮಹಿಳಾ ಋತುಚಕ್ರ ರಜೆ ಕುರಿತ ಮಾದರಿ ನೀತಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಾಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಾಮೂರ್ತಿ ಜೆಬಿ ಪರ್ಡಿವಾಲ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಈ ಕುರಿತು ಸೂಚಿಸಿದೆ. ಈ ವಿಷಯ ಸಂಬಂಧಿಸಿದಂತೆ ನ್ಯಾಯಾಲಯ ವ್ಯವಹರಿಸಲಾಗದು ಎಂದು ಇದೇ ವೇಳೆ ತಿಳಿಸಿದೆ.
ಮಹಿಳೆಯರ ಋತು ಚಕ್ರದ ರಜೆ ಕುರಿತು ನಿರ್ದೇಶನ ನೀಡಬೇಕು ಎಂಬ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ವೃತ್ತಿಯಲ್ಲಿರುವ ಮಹಿಳೆಯರಿಗೆ ಈ ರಜೆ ಹೇಗೆ ಪ್ರೋತ್ಸಾಹ ನೀಡುತ್ತದೆ. ಅಲ್ಲದೇ, ಮಹಿಳೆಯರಿಗೆ ಋತುಚಕ್ರದ ರಜೆ ಕಡ್ಡಾಯ ಮಾಡುವುದರಿಂದ ಇದು ಅವರ ಉದ್ಯೋಗ ನೇಮಕಾತಿ ಮೇಲೆ ಪರಿಣಾಮ ಬೀರಬಹುದು. ಈ ಕುರಿತು ಸರ್ಕಾರ ನೀತಿ ರೂಪಿಸಬೇಕಿದೆ. ನ್ಯಾಯಾಲಯ ಈ ವಿಷಯದಲ್ಲಿ ನಿರ್ಧಾರ ನಡೆಸಲಾಗದು. ಕೇಂದ್ರ ಸರ್ಕಾರ ಈ ಕುರಿತು ತೆಗೆದುಕೊಳ್ಳುವ ನಿರ್ಧಾರವನ್ನು ಸುಪ್ರೀಂ ತಡೆಯುವುದಿಲ್ಲ ಎಂದಿದೆ.